ಹೊಸನಗರದಲ್ಲಿ ಯುವರತ್ನ ಪುನೀತ್ ರಾಜ್‍ಕುಮಾರ್ 49ನೇ ಹುಟ್ಟು ಹಬ್ಬ ಹಾಗೂ RCB ವಿಜಯೋತ್ಸವ ಆಚರಣೆ
ಹೊಸನಗರ : ಪಟ್ಟಣದ ಗೇರುಪುರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಸ್ಯಾಂಡಲ್ ವುಡ್ ನ ಯುವರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟುಹಬ್ಬವನ್ನು ಪಟ್ಟಣದ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದವರು ಸಂಭ್ರಮ ಸಡಗರದಿಂದ ಆಚರಿಸಿದರು.
ಪ್ರಪಂಚದ ಕಲಾಭಿಮಾನಿಗಳ ಕಣ್ಮಣಿ ಪುನೀತ್ ರಾಜಕುಮಾರ್ ಇಲ್ಲದೆ ಆಚರಿಸುತ್ತಿರುವ ಮೂರನೇ ಹುಟ್ಟುಹಬ್ಬ ಇದಾಗಿದ್ದು ಈ ಸಂದರ್ಭದಲ್ಲಿ ಪುನೀತ್ ರವರ ಸವಿನೆನಪಿಗಾಗಿ ಪೌರ  ಕಾರ್ಮಿಕ ನಾಗರಾಜರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಶಾಲಾ ಮಕ್ಕಳಿಗೆ ಪೆನ್ನು ಹಾಗು ಕೇಕ್ ವಿತರಿಸುವ ಮೂಲಕ ಮತ್ತು ಈ ದಿನವನ್ನು ಸ್ಪೂರ್ತಿಯ ಹಬ್ಬವಾಗಿ ಆಚರಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು.
ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಭಿಮಾನದ ಕಾಣದಂತೆ ಮಾಯವಾದನು ಹಾಗೂ ನಗುತಾ ನಗುತಾ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಶಾಲಾ ಮಕ್ಕಳು ಹುಟ್ಟುಹಬ್ಬ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ಮಹಿಳಾ ತಂಡ ಎಂಟು ವಿಕೆಟ್ ಜಯಗಳಿಸಿದ ಬಗ್ಗೆ ಕುಣಿದು ಕುಪ್ಪಳಿಸಿದರು.
 
                         
                         
                         
                         
                         
                         
                         
                         
                         
                        
