ಶಿವಮೊಗ್ಗದ ಮೋದಿ ಕಾರ್ಯಕ್ರಮದಲ್ಲಿ ಜೇಬುಗಳ್ಳರ ಹಾವಳಿ – ಓರ್ವ ವಶಕ್ಕೆ..!!
ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಮೋದಿ ಕಾರ್ಯಕ್ರಮದಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು ಬಿಗಿ ಬಂದೋ ಬಸ್ತ್ ಇದ್ದರೂ ಕಳ್ಳರ ಹಾವಳಿ ತಪ್ಪಿಸಲು ಸಾಧ್ಯವಾಗಿಲ್ಲ.
ಸಭೆಯಲ್ಲಿ ಭಾಗಿಯಾಗಿರುವ ಶ್ರೀನಿವಾಸ್ ಮತ್ತು ರವಿಕುಮಾರ್ ಎಂಬುವವರ ಪ್ಯಾಂಟ್ ಜೇಬಿಗೆ ಕತ್ತರಿ ಹಾಕಿರುವ ಮೂವರು ಕಳ್ಳರಲ್ಲಿ ಓರ್ವನನ್ನು ಹಿಡಿದ ಸಾರ್ವಜನಿಕರು ಆಟೋದಲ್ಲಿ ಜಯನಗರ ಪೊಲೀಸ್ ಠಾಣೆಗೆ ಕರೆತರಲು ಮುಂದಾಗಿದ್ದಾರೆ. ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ.
ಪಿಕ್ ಪ್ಯಾಕೆಟ್ ಮಾಡಲು ಹೋಗಿ ಸಿಕ್ಕಿಬಿದ್ದವನನ್ನು ಶಿಕಾರಿಪುರದ ನಿವಾಸಿ ಜಯಣ್ಣ ಎಂದು ಗುರುತಿಸಲಾಗಿದೆ. ಸಧ್ಯಕ್ಕೆ ಆತನಿಂದ 13 ಸಾವಿರದ 700 ಕ್ಕೂ ಹೆಚ್ಚು ಹಣ ದೊರೆತಿದೆ. ಶ್ರೀನಿವಾಸರವರ ಮೊಬೈಲ್ ಅಪಹರಿಸಲಾಗಿದೆ. ಇನ್ನು ರವಿಕುಮಾರ್ 8000 ರೂ ಹಣ ಕಳೆದುಕೊಂಡಿರುವುದಾಗಿ ಹೇಳುತ್ತಿದ್ದಾರೆ.
ಶಿವಮೊಗ್ಗದಾದ್ಯಂತ ಮೋದಿ ಕಾರ್ಯಕ್ರಮಕ್ಕಾಗಿ ಬಿಗಿ ಸೆಕ್ಯೂರಿಟಿ ಹೆಚ್ಚಿತ್ತು. ಕಾರ್ಯಕ್ರಮ ಒಳಗೆ ಹೋಗುವಾಗ ತಪಾಸಣೆ ಪರಿಶೀಲನೆಗಳು ಇತ್ತು. ಈ ವೇಳೆ ಕಳ್ಳ ತನ್ನ ಕೈಚಳಕ ತೋರಿದ್ದಾನೆ.