ಅಡಿಕೆ ತೋಟಕ್ಕೆ ಔಷದಿ ಸಿಂಪಡಿಸುವಾಗ ಅಸ್ವಸ್ಥಗೊಂಡು ರೈತ ಸಾವು
ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡೇನಕೊಪ್ಪ ಗ್ರಾಮದ ಗಣೇಶ್ ಪೂಜಾರಿ ಎಂಬುವವರು ಅಡಿಕೆ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾಗ ತಲೆ ಸುತ್ತು ಬಂದು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ.
ರೈತ ಗಣೇಶ್ ಪೂಜಾರಿ ಔಷಧಿ ಸಿಂಪಡಣೆ ಮಾಡುವಾಗ ಅಸ್ವಸ್ಥಗೊಂಡಿದ್ದು ತಕ್ಷಣವೇ ಅವರನ್ನು ಕುಟುಂಬದವರು ಹೊಸನಗರ ಆಸ್ಪತ್ರೆಗೆ ಕರೆದೊಯ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ರಕ್ತ ವಾಂತಿ ಜಾಸ್ತಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕುಟುಂಬಕ್ಕೆ ಇದ್ದ ಒಂದೇ ಆಸರೆ ಗಣೇಶ ಪೂಜಾರಿ ಮೃತರು, ಇಬ್ಬರು ಗಂಡು ಮಕ್ಕಳು, ವಯಸ್ಸಾದ ಮಾವ,ಪತ್ನಿಯನ್ನ ಕುಟುಂಬವನ್ನ ಅಕಾಲಿಕವಾಗಿ ಅಗಲಿದ್ದು ಅತ್ಯಂತ ದುಃಖದ ಸಂಗತಿ ಆಗಿದೆ…!!ಯಾವಾಗಲು ಅತೀ ಹೆಚ್ಚು ಚಟುವಟಿಕೆಯಿಂದ ಎಲ್ಲ ಕೆಲಸ ಕಾರ್ಯಗಳಲ್ಲಿ, ಊರಿನವರ ಜೊತೆಗೆ ನಿಷ್ಕಲ್ಮಶವಾಗಿ ತನ್ನನ್ನ ತಾನುತೊಡಗಿಸಿಕೊಂಡಿದ್ದ ಗಣೇಶ ಪೂಜಾರಿ ನಿಧನಕ್ಕೆ ಬಡೇನಕೊಪ್ಪ ಗ್ರಾಮಸ್ಥರು ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ…
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು,ಜನಪ್ರತಿನಿದಿಗಳು ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಸಾಂತ್ವನ ನೀಡಬೇಕು ಎಂಬುದು ಊರಿನ ಗ್ರಾಮಸ್ಥರು ಹಿತೈಷಿಗಳು, ಒತ್ತಾಯ ಮಾಡಿದ್ದಾರೆ.ಕುಟುಂಬ ಅತ್ಯಂತ ಕಡು ಬಡವರಾಗಿದ್ದು ಇಬ್ಬರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಕುಟುಂಬದ ಕೊಂಡಿ ಕಳಚಿದ್ದು ಅತೀ ಗಂಭೀರ ಸಮಸ್ಯೆ ಇದಾಗಿದ್ದು ತಕ್ಷಣವೇ ಸ್ಪಂದನೆ ನೀಡಿ ಎಂಬುದು ಗ್ರಾಮಸ್ಥರ ಆಗ್ರಹ.
ರೈತರಿಗೆ ಸರಿಯಾದ ಮಾಹಿತಿ ನೀಡದೇ,ಔಷಧಿಯನ್ನು ಮಾರಾಟ ಮಾಡುತ್ತಿರುವುದು ಖಂಡನೀಯ!. ಹಾಗಾಗಿ, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಲಿ ಎಂಬುದು ಸಾರ್ವಜನಿಕ ಬಂಧುಗಳ ಆಗ್ರಹ, ಹಾಗೂ ಇಷ್ಟೊಂದು ವಿಷ- ಪೂರಿತ ಪ್ರಕೃತಿ ವಿರೋಧಿ, ಮಣ್ಣಿನ ಸತ್ವ ಹಾಳು ಮಾಡುವ ಔಷದಿಗಳ ಮಾರಾಟ ಹಾಗೂ ಉತ್ಪಾದನೆಗೆ ಸರ್ಕಾರ ಕಡಿವಾಣ ಹಾಕಲೇಬೇಕು.ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಬೆಳೆದು ತಿನ್ನುವ ಈ ಭೂಮಿ ಸಂಪೂರ್ಣ ವಿಷಮಯ ವಾಗುದರಲ್ಲಿ ಅನುಮಾನವೆ ಇಲ್ಲಾ!!.
ಹೌದು ಈ ಹಿಂದೆ ಕೂಡ ಮೈಸೂರು ಜಿಲ್ಲೆಯಲ್ಲಿಯೂ ಸಹ ಲ್ಯಾನೆಟ್ ಔಷದಿ ಸಿಂಪಡಿಸಿ 70 ಹೆಚ್ಚು ರೈತರು ಆಸ್ವಸ್ಥರಾಗಿದ್ದು ಬೆಳೆಕಿಗೆ ಬಂದಿದ್ದು, ರೈತರಿಗೆ ಜಾಗೃತಿ ಮೂಡಿಸಬೇಕಿದೆ..
ಇಂಥವ ವಿಷಪೂರಿತ ಔಷದಿಗಳು ನಾವು ತಿನ್ನುವ ಆಹಾರ, ಹಣ್ಣು ಗಳಿಗೆ ಸಿಂಪಡಣೆ ಅತ್ಯಂತ ಅಪಾಯಕಾರಿ, ಹಾಗೂ ನಮ್ಮ ಭೂಮಿ ಈಗ ವಿಷವರ್ತೂಲದಲ್ಲಿ ಸಿಲುಕಿದ್ದು, ಅತ್ಯಂತ ದುರಂತವೆ ಸರಿ…