“ಕಡುಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು “: ಶಾಸಕ ಗೋಪಾಲಕೃಷ್ಣ ಬೇಳೂರು
ರಿಪ್ಪನ್ಪೇಟೆ;-ಕೂಲಿ ಕಾರ್ಮಿಕರ ಮತ್ತು ಕಡುಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು,ಉನ್ನತ ವ್ಯಾಸಂಗಮಾಡಲು ಉತ್ತಮ ಅವಕಾಶಗಳಿವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಶನಿವಾರ ಪಟ್ಟಣದಸರ್ಕಾರಿ ಪದವಿ ಪೂರ್ವ ಕಾಲೇಜ್ನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಹಿಂದೆ ಶ್ರೀಮಂತರ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದರು ಅದರೆ ಕೂಲಿಕಾರ್ಮಿಕರ ಮಕ್ಕಳು ಇದರಿಂದ ವಂಚಿತರಾಗುವ ಕಾಲವೊಂದು ಇತ್ತು ಈಗಿನ ಸರ್ಕಾರಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದ್ದು ಕೆ.ಎ.ಎಸ್.ಐ.ಎ.ಎಸ್.ಇಂಜಿನಿಯರ ವ್ಯಾಸಂಗ ಮಾಡುವ ಮೂಲಕ ಕಡುಬಡವರ ಮಕ್ಕಳು ಶ್ರೀಮಂತರ ಮಕ್ಕಳಿಗೆ ಸಮನಾಗಿ ಶಿಕ್ಷಣ ಪಡೆಯುವ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಾರಾಗುವ ಮೂಲಕ ಶಾಲಾ ಕಾಲೇಜ್ನ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸುವಂತಾಗಿದ್ದಾರೆಂದು ಹೇಳಿದರು.
ನಾನು ಕಾಲೇಜ್ ವಿದ್ಯಾಭ್ಯಾಸಕ್ಕಾಗಿ ಸೇರುವ ಸಂದರ್ಭದಲ್ಲಿ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಒಂದು ಕಾಲದಲ್ಲಿ ದನದ ದೊಡ್ಡಿಯೆಂಬ ಅಪಹಾಸ್ಯಕ್ಕೆ ಕಾರಣವಾಗಿತು.ಅದನ್ನು ಆಳಿಸುವ ಉದ್ದೇಶದಿಂದಾಗಿ ನಾನು ಪ್ರಥಮವಾಗಿ ಶಾಸಕನಾಗಿ ಆಯ್ಕೆಯಾಗುತ್ತಿದ್ದಂತೆ ಮೊದಲು ನಾ ಓದಿದ ಕಾಲೇಜ್ ಆಭಿವೃಧ್ದಿ ಪಡಿಸುವ ಮೂಲಕ ರಾಜ್ಯದಲ್ಲಿಯೇ ಅತ್ಯುತ್ತಮ ಕಾಲೇಜ್ ಎಂಬ ಹೆಗ್ಗಳಿಕೆಗೆ ತರುವ ನಿಟ್ಟಿನಲ್ಲಿ ಶ್ರಮಿಸಿರುವುದಾಗಿ ತಮ್ಮ ವಿದ್ಯಾರ್ಥಿ ಜೀವನದ ಕಷ್ಟವನ್ನು ಮೆಲಕು ಹಾಕಿದರು
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ಶಿಸ್ತು ಸಂಯಮತೆಯನ್ನು ಕಲಿಸುವ ಮೂಲಕ ಉಪನ್ಯಾಸಕರು ಮತ್ತು ಪೋಷಕರು ಗಮನಹರಿಸಬೇಕು. ಭವಿಷ್ಯದಲ್ಲಿ ದೇಶದ ನಾಯಕರಾಗುವಂತೆ ಮಾಡುವುದು ನಮ್ಮಗಳ ಅಧ್ಯಕರ್ತವ್ಯವಾಗಿದೆ.ಇದೇ ಸಂದರ್ಭದಲ್ಲಿ ಕಾಲೇಜ್ಗೆ ಅಗತ್ಯವಾಗಿ ಬೇಕಾಗುವ ಮೂಲಭೂತ ಸೌಲಭ್ಯಗಳ ಕುರಿತು ಪ್ರಾಚಾರ್ಯರು ಮನವಿ ಪತ್ರವನ್ನು ನೀಡಿದ್ದು ಅದನ್ನು ಈಡೇರಿಸುವ ಭರವಸೆ ನೀಡಿ ಕಳೆದ ಹಲವಾರು ವರ್ಷಗಳಿಂದ ಸುಣ್ಣಬಣ್ಣವನ್ನು ಕಾಣದ ಕಾಲೇಜ್ಗೆ ತಕ್ಷಣ ಸುಣ್ಣಬಣ್ಣ ಮಾಡುವುದರೊಂದಿಗೆ ಅಭಿವೃದ್ದಿಗೆ ಶ್ರಮಿಸುತ್ತಿರುವುದಾಗಿ ಹೇಳಿದರು.
ಪ್ರಾಚಾರ್ಯ ಎ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಕಾಲೇಜ್ ಜಿಲ್ಲಾ ಉಪನಿರ್ದೇಶಕ ಬಿ.ಕೃಷ್ಣಪ್ಪ,ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷö್ಮ,ಉಪಾಧ್ಯಕ್ಷ ಸುದೀಂದ್ರಪೂಜಾರಿ,ಸಿಡಿಸಿ ಸಮಿತಿಯ ಉಪಾಧ್ಯಕ್ಷ ಜಿ.ಆರ್.ಗೋಪಾಲಕೃಷ್ಣ, ಸಿಡಿಸಿ ಸದಸ್ಯರಾದ ರಫ಼ಿ ರಿಪ್ಪನ್ಪೇಟೆ, ಬೋರಪ್ಪ , ಷಣ್ಮುಖ ,ಲೇಖನ ಚಂದ್ರನಾಯ್ಕ್ , ನಾಗಪ್ಪ ಕಟ್ಟೆ ಗ್ರಾಮ ಪಂಚಾಯ್ತಿ ಸದಸ್ಯರಾದ,ವಿನೋಧ, ಆಶ್ವಿನಿ ರವಿಶಂಕರ್ ಸುಂದರೇಶ್.ಈ.ಮಧುಸೂದನ್, ಪ್ರಕಾಶಪಾಲೇಕರ್,ಇನ್ನಿತರ ಗ್ರಾಮ ಪಂಚಾಯ್ತಿ ಸದಸ್ಯರು ಸಿಡಿಸಿ ಸದಸ್ಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಾರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.