ಸಾಲಭಾದೆ ತಾಳಲಾರದೆ ಲಾರಿ ಮಾಲೀಕನ ಆತ್ಮ*ಹತ್ಯೆ
ತೀರ್ಥಹಳ್ಳಿ: ಸಂಘ-ಸಂಸ್ಥೆಗಳು ಹಾಗೂ ಖಾಸಗಿ ಫೈನಾನ್ಸ್ ಮಾಲೀಕರ ನಿರಂತರ ಕಿರುಕುಳದಿಂದ ಬೇಸತ್ತ ಲಾರಿ ಮಾಲೀಕರೊಬ್ಬರು ತೀವ್ರ ಮನನೊಂದು ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಕುರುವಳ್ಳಿ ನಿವಾಸಿ ಮಂಜುನಾಥ್ ಹೆಚ್. (37) ಎಂದು ಗುರುತಿಸಲಾಗಿದೆ. “ಟಿಪ್ಪರ್ ಮಂಜು” ಎಂದೇ ಪರಿಚಿತರಾಗಿದ್ದ ಅವರು ಲಾರಿ ಮಾಲೀಕರಾಗಿದ್ದು, ವಿವಿಧ ಸಂಘ-ಸಂಸ್ಥೆಗಳು ಮತ್ತು ಖಾಸಗಿ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿದ್ದರು. ಸಾಲದ ಒತ್ತಡ ಮತ್ತು ಪೀಡನೆ ತಾಳಲಾಗದೇ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ತ್ಯಜಿಸಿದ್ದಾರೆ.
ಘಟನೆಯ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.