w
Headlines
Home » Accident | ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣ – ಮೂವರು ಸಾವು

Accident | ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣ – ಮೂವರು ಸಾವು

ತೀರ್ಥಹಳ್ಳಿ : ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ 16ನೇ ಮೈಲಿಕಲ್ಲಿನ ಮಂಡಗದ್ದೆ ಫಿಶ್ ಹೋಟೆಲ್ ಸಮೀಪ ಈ ಘಟನೆ ನಡೆದಿದೆ.

ಬೈಕ್‌ನಲ್ಲಿದ್ದವರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದರು. ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿಗೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ (ಸಹ್ಯಾದ್ರಿ) ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

ಇನ್ನೂ ಅಪಘಾತಕ್ಕೊಳಗಾದ ಬೈಕ್ ನಂಬರ್ ದಾವಣಗೆರೆ ರಿಜಿಸ್ಟ್ರೇಷನ್ ತೋರಿಸುತ್ತಿದ್ದು (KA 17 EC 2519) ಗಾಡಿಯ ಹಿಂಬದಿಯಲ್ಲಿ ದೊಡ್ಮನೆ ಎಂದು ಬರೆಯಲಾಗಿದೆ.

ಹಿಟ್ ಅಂಡ್ ರನ್ ಗೆ ಮಹಿಳೆ ಬಲಿ

ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ಹಿರೇಸರದ ಬಳಿ ಹಿಟ್ ಅಂಡ್ ರನ್‌ಗೆ ಮಹಿಳೆ ಬಲಿಯಾದ ಘಟನೆ ಇಂದು ಸಂಜೆ ನಡೆದಿದೆ.

ಮೃತರನ್ನು ತೀರ್ಥಹಳ್ಳಿ ತಾಲ್ಲೂಕಿನ ತನಿಕಲ್ ಗ್ರಾಮದ ಸ್ವಾಮಿ ಎಂಬುವವರ ಪತ್ನಿ ಶುಭ (47) ಮೃತ ಮಹಿಳೆ.

ತೀರ್ಥಹಳ್ಳಿಯಿಂದ ಕೋಣಂದೂರಿಗೆ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಾವೇರಿ ಮೂಲದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಶುಭ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್‌ನಲ್ಲಿ ಚಲಾಯಿಸುತ್ತಿದ್ದ ಮೃತರ ಪತಿ ಸ್ವಾಮಿ ಎಂಬುವವರಿಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಹಾವೇರಿ ಮೂಲದ ವ್ಯಕ್ತಿ ಸ್ವಿಫ್ಟ್ ಕಾರಲ್ಲಿ ಅಪಘಾತ ಮಾಡಿ ಪರಾರಿಯಾಗಿದ್ದ ವೇಳೆ ಕವಲೇದುರ್ಗದ ಬಳಿ ಆತನನ್ನ ಸ್ಥಳೀಯರು ಹಿಡಿದಿದ್ದಾರೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.