Hosanagara | ಬೈಕ್ ಮತ್ತು ನೀರಿನ ಟ್ಯಾಂಕರ್ ನಡುವೆ ಡಿಕ್ಕಿ – ಬೈಕ್ ಸವಾರ ಸಾವು
ಬೈಕ್ ಸವಾರನ ಮೇಲೆ ಹರಿದ ಟ್ರ್ಯಾಕ್ಟರ್ ಹರಿದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ನಗರದ ಬಳಿ ರಾಷ್ಟ್ರೀಯ ಹೆದ್ದಾರಿ 766 ಸಿ ಚಾಲುಕ್ಯ ಹೋಟೆಲ್ ಮುಂಭಾಗದಲ್ಲಿ ಮತ್ತಿಮನೆ ಬ್ರಾಹ್ಮಣ ತರುವೆಯಿಂದ ಹೊಸನಗರಕ್ಕೆ ಬರುತ್ತಿದ್ದ ಹರೀಶ್ (24) ಸಾವನ್ನಪ್ಪಿದ ಸವಾರ.
ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ನೀರಿನ ಟ್ಯಾಂಕ್‌ನ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದ ಆತನ ಮೇಲೆ ಟ್ರ್ಯಾಕ್ಟರ್ ಟ್ಯಾಂಕರ್ ಹರಿದ ಪರಿಣಾಮ ತೀವ್ರ ಗಾಯಗೊಂಡ ಹರೀಶ್ ಮೃತಪಟ್ಟಿದ್ದಾನೆ.
ಹರೀಶನಿಗೆ ಎರಡು ವರ್ಷದ ಹಿಂದೆ ಮದುವೆಯಾಗಿದ್ದು ಒಂದು ವರ್ಷದ ಮಗುವಿದ್ದು ಪತ್ನಿಯ ಮನೆ (ಮಾವನ ಮನೆ) ಎಡಚಿಟ್ಟೆಗೆ ಹೋಗುತ್ತಿದ್ದ ಎಂದು ಮಾಹಿತಿ ತಿಳಿದು ಬಂದಿದೆ.
ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.