Shivamogga | ಸಾಗರ ರಸ್ತೆಯಲ್ಲಿ ಸರಣಿ ಅಪಘಾತ
ಶಿವಮೊಗ್ಗದ ಎಪಿಎಂಸಿ ಯಾರ್ಡ್ ಮುಂಭಾಗದಲ್ಲಿ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಣವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿರುವುದಿಲ್ಲ ಎಂದು ತಿಳಿದುಬಂದಿದೆ.
ಎಪಿಎಂಸಿಯ ದುರ್ಗಾಂಬ ಪೆಟ್ರೋಲ್ ಬಂಕ್ ಬಳಿ ಚಲಿಸುತ್ತಿದ್ದ ಬ್ರೀಜಾ ಕಾರೊಂದು ಓಮಿನಿಗೆ ಗುದ್ದಿದೆ. ಓಮಿನಿ ಕಾರು ಮುಂದಿನ ಆಟೋಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯನ್ನ ತಪ್ಪಿಸಲು ಮುಂದಾದ ಓಮಿನಿ ಕಾರು ಡಿವೈಡರ್ ಮೇಲೆ ಹತ್ತಿ ನಿಂತಿದೆ.
ಘಟನಾ ಸ್ಥಳದಲ್ಲಿ ಜನ ಜಮಾವಣೆಯಾಗಿದ್ದಾರೆ. ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೂರು ವಾಹನಗಳು ಸಣ್ಣ ಪುಟ್ಟ ಹಾನಿಗೊಳಗಾಗಿದೆ.