ಶಾಸಕ ಬೇಳೂರು ಆಪ್ತನಿಗೆ ಜೀವಬೆದರಿಕೆ – ಎಸ್ ಪಿ ಗೆ ದೂರು ಸಲ್ಲಿಕೆ
ರಿಪ್ಪನ್ಪೇಟೆ : ಪಟ್ಟಣದ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ರಮೇಶ್ (ಫ್ಯಾನ್ಸಿ ರಮೇಶ್) ತಮಗೆ ಜೀವ ಬೆದರಿಕೆ ಇದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಪತ್ರೀಕಾ ಹೇಳಿಕೆ ನೀಡಿರುವ ರಮೇಶ್ ಪಟ್ಟಣದ ಕೆಲವು ಖಾಸಗಿ ಲೇಔಟ್ ನಲ್ಲಿ ಕಾನೂನುಬಾಹಿರವಾಗಿ ಲೇಔಟ್ ನಿರ್ಮಾಣ ಮಾಡುತಿದ್ದಾರೆ ಎಂದು ಸಾಮಾಜಿಕ ಕಳಕಳಿಯಿಂದ ಈಗಾಗಲೇ ಲೇಔಟ್ ಗೆ ಸಂಬಂದಿಸಿದಂತೆ ಹಲವು ದಾಖಲೆಗಳನ್ನು ಪಡೆದುಕೊಂಡು ಬೆಂಗಳೂರಿನ ಲೋಕಾಯುಕ್ತ ಮುಖ್ಯ ಕಛೇರಿಯಲ್ಲಿ ದೂರು ದಾಖಲಿಸಿದ್ದೇನೆ.
ಈ ಹಿನ್ನಲೆಯಲ್ಲಿ ಲೇಔಟ್ ಗೆ ಸಂಬಂದಿಸಿದ ಕೆಲವು ಖಾಸಗಿ ವ್ಯಕ್ತಿಗಳು ನನಗೆ ಪದೇ ಪದೇ ಜೀವ ಬೆದರಿಕೆ ಹಾಕುತ್ತಿರುವ ಕಾರಣ ತನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿರುತ್ತಾರೆ.