Accident | ತ್ಯಾವರೆಕೊಪ್ಪದ ಬಳಿ ಕಾರು ಪಲ್ಟಿ
ಶಿವಮೊಗ್ಗ : ಇಲ್ಲಿನ ತ್ಯಾವರೆಕೊಪ್ಪದ ಲಯನ್ ಸಫಾರಿ ಸಮೀಪ ಕಾರೊಂದು ಪಲ್ಟಿಯಾಗಿ ನಡು ರಸ್ತೆಯಲ್ಲಿ ಉಲ್ಟಾ ನಿಂತಿರುವ ಘಟನೆ ಸಂಭವಿಸಿದೆ.
ಸಾಗರ ಕಡೆಗೆ ಹೋಗುತ್ತಿದ್ದ ವೇಳೆ ಮಾರುತಿ ಸ್ವಿಫ್ಟ್ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಲ್ಲದೆ ಉಲ್ಟಾ ಆಗಿ ಕಾರು ನಡುರಸ್ತೆಯಲ್ಲಿ ನಿಂತಿತ್ತು.
ಘಟನೆಯ ಯಾವಾಗ ಆಯ್ತು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.