January 11, 2026

Ripponpet | ತಾಯಿಯಿಂದಲೇ ಹೆತ್ತಮಕ್ಕಳನ್ನು ಬಿಕ್ಷಾಟನೆಗೆ ಬಳಕೆ – ಪಟ್ಟಣದಲ್ಲೊಂದು ಮನಕಲಕುವ ಘಟನೆ

Ripponpet | ತಾಯಿಯಿಂದಲೇ ಹೆತ್ತಮಕ್ಕಳನ್ನು ಬಿಕ್ಷಾಟನೆಗೆ ಬಳಕೆ – ಠಾಣೆಗೆ ಕರೆಸಿ ವಾರ್ನಿಂಗ್ ನೀಡಿದ ಪಿಎಸ್‌ಐ ಪ್ರವೀಣ್ 
ರಿಪ್ಪನ್‌ಪೇಟೆ;-ಇಲ್ಲಿನ ಶಿವಮೊಗ್ಗ ರಸ್ತೆಯ ಖಾಸಗಿ ಶ್ರೀನಂದಿ ಆಸ್ಪತ್ರೆಯ ಎದುರಿನಲ್ಲಿ ಹೆತ್ತಮಕ್ಕಳಿಗೆ ಬೀಕ್ಷಾಟನೆ ಮಾಡುವಂತೆ ಮಕ್ಕಳ ಕೈಗೆ ತಟ್ಟೆಕೊಟ್ಟು ಬಲತ್ಕಾರದಿಂದ ಬಿಕ್ಷೆ ಬೇಡುವಂತೆ ತಾಯಿಯೇ ಮಕ್ಕಳನ್ನು ಬಿಕ್ಷಾಟನೆಗೆ ಬಳಸುತಿದ್ದ ಘಟನೆಗೆ ಪಟ್ಟಣದ ಪಿಎಸ್‌ಐ ತಾಯಿಗೆ ವಾರ್ನಿಂಗ್ ಕೊಟ್ಟು ಕಳಿಸಿದ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಪಟ್ಟಣದ ನಂದಿ ಆಸ್ಪತ್ರೆಯ ಮುಂಭಾಗದಲ್ಲಿ ತಾಯಿಯೇ ಮಕಕ್ಳನ್ನು ಭಿಕ್ಷಾಟನೆಗೆ ಅಣಿಗೊಳಿಸುತ್ತಿರುವುದನ್ನು ಸೂಕ್ಷö್ಮವಾಗಿ ಗಮನಿಸಿದ ಸಾಮಾಜಿಕ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ತಕ್ಷಣ ಠಾಣೆಗೆ ಮಾಹಿತಿ ನೀಡಿ ಬಿಕ್ಷಾಟನೆ ಮಾಡುವುದು ಅಕ್ಷಮ್ಯ ಅಪರಾದ ಇನ್ನೂ ಮುಂದೆ ಹೀಗೆ ಮಾಡಿದರೆ ನಿಮ್ಮಗಳ ವಿರುದ್ದ ಕೇಸ್ ದಾಖಲಿಸಬೇಕಾಗುತ್ತದೆ ಠಾಣಾಧಿಕಾರಿ ಪ್ರವೀಣ್‌ಕುಮಾರ್ ಎಸ್.ಪಿ. ಮಕ್ಕಳ ತಾಯಿಗೆ ಬುದ್ದಿ ಹೇಳಿದ ಪ್ರಸಂಗ ಇಂದು ನಡೆಯಿತು.
ಚಿಕ್ಕಮಕ್ಕಳನ್ನು ಬೀದಿ ಮೇಲೆ  ಬಿಕ್ಷೆ ಬೇಡಿಸಿ ಆದರಿಂದ ಬಂದ ಹಣದಿಂದ ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದ ತಾಯಿಯ ಬಿಕ್ಷಾಟನೆ ಮಾಡಿಸುವುದು ತಪ್ಪು ಇನ್ನೊಂದು ಸಾರಿ ಹೀಗೆ ನಿಮ್ಮ ಮಕ್ಕಳು ಬಿಕ್ಷೆ ಬೇಡುವುದನ್ನು ಕಂಡರೆ ನಿರ್ಧಾಕ್ಷಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ತಾಯಿಗೆ ಎಚ್ಚರಿಕೆ ನೀಡಿ ಇಂದಿನಿಂದಲೇ  ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಸೂಚಿಸಿ ಕಲೂಹಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ,ದೇವರಾಜ್,ಪರಶುರಾಮ,ಧರ್ಮರಾಜ್ ಮತ್ತು ಪೊಲಿಸ್ ಸಿಬ್ಬಂದಿ ವರ್ಗ ಹಾಜರಿದ್ದರು.

 

About The Author

Leave a Reply

Your email address will not be published. Required fields are marked *