ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಮ ಕಾರೆಹಳ್ಳಿ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರ ಜನರ ನಿದ್ದೆಗೆಡಿಸಿತ್ತು. ನಾಯಿಯ ಮೇಲೂ ದಾಳಿ ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು.
ಕಾರೆಹಳ್ಳಿಯಲ್ಲಿ ಮನೆ ಮಾದರಿಯ ಬೋನಿ ನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಅದಕ್ಕೆ ವಿಶಾಲವಾದ ಬಯಲು ಅನಿಸಿಕೊಂಡೇ ಅದು ಬೇಟೆಯನ್ನು ಅರಸಿಕೊಂಡು ಬೋನಿನ ಒಳಗೆ ಮದ್ಯರಾತ್ರಿ ಪ್ರವೇಶಿಸಿತ್ತು.
ಇಂದು ಬೆಳಿಗ್ಗೆ ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಸ್ಥಳಕ್ಕೆ ಬೇಟಿ ನೀಡಿದರು. ದೊಡ್ಡ ಕೇಜ್ ನಲ್ಲಿದ್ದ ಚಿರತೆಯನ್ನು ಅರವಳಿಕೆ ನೀಡಿ ಡಾರ್ಟ್ ಮಾಡಿದರು. ಚಿರತೆ ಪ್ರಜ್ಞಾ ಹೀನ ಸ್ಥಿತಿಯಲ್ಲಿರುವಾಗಲೇ ಸಣ್ಣ ಕೇಜ್ ಒಳಗೆ ಅದನ್ನು ಸ್ಥಳಾಂತರಿಸಲಾಯಿತು
ಚಿರತೆಯ ಬೇಟೆಗಾಗಿಯೇ ಬಳಸಲಾಗಿದ್ದ ನಾಯಿಯನ್ನು ಈ ಬಾರಿ ಕಾರ್ಯಾಚರಣೆಯಲ್ಲಿ ಡಾಕ್ಟರ್ ವಿನಯ್ ರಕ್ಷಿಸಿದ್ದಾರೆ. ನಾಯಿಯನ್ನು ನೋಡಿಯೇ ಕೇಜ್ ಒಳ ಪ್ರವೇಶಿಸಿದ ಚಿರತೆ ನಾಯಿಯ ಮುಖವನ್ನು ತರಚಿತ್ತು ಅಷ್ಟೆ. ಡಾಕ್ಟರ್ ವಿನಯ್ ಚಿರತೆಗೆ ಡಾರ್ಟ್ ಮಾಡಿದ ನಂತರ ನಾಯಿಗೆ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
ಇನ್ನು ಸೆರೆಯಾದ ಚಿರತೆ ಅತ್ಯಂತ ಬಲಿಷ್ಟವಾಗಿದ್ದು ಸಧೃಡವಾಗಿದೆ. ಐದರಿಂದ ಆರು ವರ್ಷದ ಚಿರತೆ ಇರಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಚಿರತೆಯ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.