ಮಾರುತಿ ಓಮಿನಿ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಣಿಕೆಗೆ ಯತ್ನ
ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಜಾನುವಾರುಗಳನ್ನು ಓಮಿನಿ ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾದ ಘಟನೆ ನಡೆದಿದೆ.
ನಡೆದಿದ್ದೇನು..??
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಅನುಮಾನದಿಂದ ಗ್ರಾಮಸ್ಥರು ವಾಹನವನ್ನು ತಡೆದು ತಪಾಸಣೆಗೆ ಮುಂದಾಗುತ್ತಿದ್ದಂತೆ ಕಾರಿನ ಚಾಲಕ ಮಹಮ್ಮದ್ ತಪ್ಪಿಸಿಕೊಂಡು ಪರಾರಿಯಾಗಿದ್ದು ಇನ್ನೋರ್ವ ಆರೋಪಿ ಅಸ್ಲಾಂ ಬೇಗ್ ಸಿಕ್ಕಿಬಿದ್ದಿದ್ದಾನೆ ಈ ಸಂಧರ್ಭದಲ್ಲಿ ಓಮಿನಿ ಕಾರಿನಲ್ಲಿ ಕೈಕಾಲು ಕಟ್ಟಿ ಎರಡು ಜಾನುವಾರುಗಳನ್ನು ಅಮಾನುಷವಾಗಿ ಇರಿಸಿದ್ದರಿಂದ ಆಕ್ರೋಶಿತರಾದ ಗ್ರಾಮಸ್ಥರು ಆರೋಪಿಗೆ ಧರ್ಮದೇಟು ನೀಡಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂದ ಹಲ್ಲೆಗೊಳಗಾದ ವ್ಯಕ್ತಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.
ಈ ಘಟನೆ ಸಂಬಂದ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಅಕ್ರಮ ಗೋ ಸಾಗಾಟಕ್ಕೆ ಯತ್ನಿಸಿದ ಆರೋಪಿಗಳ ವಿರುದ್ದ ಐಪಿಸಿ 379 ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ.
ಅಕ್ರಮ ಗೋ ಸಾಗಾಟವನ್ನು ತಡೆದು ಆರೋಪಿಯ ವಿರುದ್ದ ಹಲ್ಲೆ ನಡೆಸಿದ 8 ರಿಂದ 10 ಮಂದಿಯ ವಿರುದ್ದ ಐಪಿಸಿ 143,147,144,148, 341,504,324,427 ಹಾಗೂ 149ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಚನಾಲ ಗ್ರಾಮದ ಸಂಜಯ್ ದೂರಿನಲ್ಲೇನಿದೆ :
ಶುಕ್ರವಾರ ಸಂಜಯ್ ಎಂಬುವವರು ರಾತ್ರಿ ಸಂಜೆ 7-30 ಗಂಟೆಯ ಸಮಯದಲ್ಲಿ ಅವರ ಸ್ನೇಹಿತರಾದ ಸುನೀಲ್ ನರಸಿಂಹ ಸಂಜಯ್ ಶರತ್, ಮತ್ತು ಇತರರು ಮಾತನಾಡುತ್ತಾ ನಿಂತಿದ್ದಾಗ ಕೆಂಚನಾಲ ಗ್ರಾಮದ ಉರ್ದು ಶಾಲೆ ಹತ್ತಿರ ಯಾರೋ ಎರಡು ಜನ ಆಸಾಮಿಗಳು ಓಮಿನಿ ವಾಹನದಲ್ಲಿ ಜಾನುವಾರು ಕರುವನ್ನು ತುಂಬಿಕೊಂಡು ಹೋಗುತ್ತಿದ್ದುದ್ದಾಗಿ ಮಾಹಿತಿ ಬಂದಿದ್ದು ಕೂಡಲೇ ಎಲ್ಲರೂ ಸೇರಿಕೊಂಡು ಕೆಂಚನಾಲ ಗ್ರಾಮದ ಉರ್ದು ಶಾಲೆ ಹತ್ತಿರ ಹೋಗಿ ರಾತ್ರಿ 8-00 ಪಿಎಂ ಗಂಟೆಗೆ ಓಮಿನಿ ವಾಹನ ವನ್ನು ತಡೆಯಲಾಗಿ ಒಬ್ಬ ಆಸಾಮಿ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ಓಮಿನಿ ವಾಹನವನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಅಸ್ಲಾಂ ಬೇಗ್ ತಂದೆ ಅಮೀರ್ ಬೇಗ್ 39 ವರ್ಷ ಮುಸ್ಲಿಂ ಜನಾಂಗ ಕೂಲಿಕೆಲಸ ವಾಸ: ಹೊಳ್ಳೂರು ಆಚಾಪುರ ಗ್ರಾಮ ಆನಂದಪುರ ಸಾಗರ ತಾಲ್ಲೂಕ್ ಅಂತ ತಿಳಿಸಿದ್ದು ಓಡಿ ಹೋದವನ ಹೆಸರು ಕೇಳಲಾಗಿ ಮಹಮ್ಮದ್ ತಂದೆ ಅಮೀರ್ ಬೇಗ್ 38 ವರ್ಷ ಮುಸ್ಲಿಂ ಜನಾಂಗ ಮೀನು ವ್ಯಾಪಾರ ವಾಸ: ಆಚಾಪುರ ಮಸೀದಿ ಕೇರಿ ಆನಂದಪುರ ಸಾಗರ ತಾಲ್ಲೂಕ್ ಎಂದು ತಿಳಿಸಿದ್ದು, ಓಮಿನಿ ಕಡೆ ನೋಡಲಾಗಿ ಕೆಎ-05 ಎಂ ಸಿ-3763 ನೇ ನಂಬರಿನ ಮಾರುತಿ ಓಮಿನಿ ವಾಹನವಾಗಿದ್ದು, ಒಳಭಾಗದಲ್ಲಿ 1 ಜಾನುವಾರು ಕರುವನ್ನು ಹಿಂಸಾತ್ಮಕವಾಗಿ ತುಂಬಿದ್ದು ಕಂಡು ಬಂದಿದ್ದು, ಆ ವ್ಯಕ್ತಿಗೆ ಓಮಿನಿ ವಾಹನದಲ್ಲಿ ಜಾನುವಾರು ಕರುವನ್ನು ಸಾಗಾಟ ಮಾಡಲು ಯಾವುದಾದರೂ ಅನುಮತಿ, ದಾಖಲಾತಿಗಳು ಇದೆಯಾ ಎಂದು ಕೇಳಲಾಗಿ ಯಾವುದೇ ಅನುಮತಿ ದಾಖಲಾತಿ ಇಲ್ಲವೆಂದು ಗೌಡಕೊಪ್ಪದ ಹತ್ತಿರ ರಸ್ತೆಯ ಬದಿಯಲ್ಲಿ ಇದ್ದ ಜಾನುವಾರು ಕರುವನ್ನು ಕಳ್ಳತನ ಮಾಡಿ ಖಸಾಯಿ ಖಾನೆಗೆ ಮಾರಾಟ ಮಾಡಲು ಓಮಿನಿ ವಾಹನದಲ್ಲಿ ತುಂಬಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ. ನಂತರ ಸಂಜಯ್ ಮತ್ತು ಅವರ ಸ್ನೇಹಿತರು ಮಾರುತಿ ಓಮಿನಿ ವಾಹನ ಸಮೇತ ಜಾನುವಾರು ಕರುವನ್ನು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿದ್ದು, ಜಾನುವಾರು ಕರುವಿನ ಅಂದಾಜು ಮೌಲ್ಯ ಸುಮಾರು 10 ಸಾವಿರ ರೂಪಾಯಿ ಆಗಬಹುದು, ಓಮಿನಿ ವಾಹನ ಮುಂಭಾಗದ ಗ್ಲಾಸ್ ಒಡೆದಿರುತ್ತೆ ಅಲ್ಲದೇ ಬಾಡಿಯು ಜಖಂಗೊಂಡಿರುವುದು ಕಂಡು ಬಂದಿರುತ್ತೆ ಮೇಲ್ಕಂಡ ಆರೋಪಿತರುಗಳು ಜಾನುವಾರು ಕರುವನ್ನು ಕಳ್ಳತನ ಮಾಡಿ ಖಸಾಯಿ ಖಾನೆಗೆ ಸಾಗಿಸಿ ಮಾಂಸ ಮಾಡಿ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಸದರಿ ಜಾನುವಾರು ಕರುವಿನ ಜೀವಕ್ಕೆ ಹಾನಿಯಾಗುವಂತೆ ಯಾವುದೇ ಸುರಕ್ಷತಾ ಕ್ರಮ ಇಲ್ಲದ ಓಮಿನಿ ವಾಹನದಲ್ಲಿ ಒತ್ತೊತ್ತಾಗಿ ತುಂಬಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ಅಸ್ಲಾಂ ಬೇಗ್ ದೂರಿನಲ್ಲೇನಿದೆ…..?????
05-30 ಗಂಟೆ ಸಮಯದಲ್ಲಿ ತಮ್ಮ ಮನೆಯಲ್ಲಿದ್ದಾಗ ಅವರ ತಮ್ಮನಾದ ಮಹಮ್ಮದ್ ಬೇಗ್ ಬಿನ್ ಆಮೀರ ಬೇಗ್ ಇವರು ಕೆಂಚನಾಳ ಗ್ರಾಮದಲ್ಲಿ ಕೆಲಸ ಇದೆ ಬಾ ಅಂತ ಅವರ ಕೆಎ 05 ಎಂಸಿ 3763 ಓಮಿನಿ ಕಾರಿನಲ್ಲಿ ಕರೆದಿದ್ದು ಆಗ ಅಸ್ಲಾಂ ಓಮಿನಿ ಕಾರಿನಲ್ಲಿ ಕುಳಿತುಕೊಂಡು ಸುಮಾರು 07-30 ಪಿಎಂಗೆ ಕೆಂಚನಾಳ ಗ್ರಾಮಕ್ಕೆ ಬಂದು ರಿಪ್ಪನ್‌ಪೇಟೆ ಕಡೆ ಹೋಗುವ ಮುಖ್ಯರಸ್ತೆಯಲ್ಲಿರುವ ನಾಗೇಂದ್ರ ಎಂಬುವವರ ಮನೆಯ ಎದುರಿನ ರಸ್ತೆಯಲ್ಲಿ ಬಂದು ತಮ್ಮನ್ನು ಸದರಿ ಓಮಿನಿ ಕಾರಿಗೆ ರಸ್ತೆಯಲ್ಲಿದ್ದ ಒಂದು ದನವನ್ನು ಹಾಕಿಕೊಂಡನು ಇದನ್ನು ಕೆಂಚನಾಳ ಗ್ರಾಮದ ವಾಸಿಯೊಬ್ಬರು ನೋಡಿಕೊಂಡು ಹೋದನು. ನಂತರದಲ್ಲಿ ಕೆಂಚನಾಳ ಗ್ರಾಮದ ಸುಮಾರು 8-10 ಜನರು ಗುಂಪುಕಟ್ಟಿಕೊಂಡು ಬಂದು ಓಮಿನಿ ಕಾರನ್ನು ಅಡ್ಡಗಟ್ಟಿ ತಡೆದು ಅವಾಚ್ಯವಾಗಿ ನಿಂದಿಸಿ ಈ ದನವನ್ನು ಖಸಾಯಿಕಾನೆಗೆ ತೆಗೆದುಕೊಂಡು ಹೋಗುತ್ತೀರಾ ಎಂದು ಬೈದು ಅಸ್ಲಾಂ ಮತ್ತು ಅವರ ತಮ್ಮನಾದ ಮಹಮ್ಮದ್‌ಬೇಗ್ ನಿಗೆ ಕಾರಿನಿಂದ ಕೆಳಗೆ ಇಳಿಸಿಕೊಂಡು ಅಸ್ಲಾಂ ಬೇಗ್ ತುಟಿಗೆ, ಮೈ ಕೈ, ಕಾಲಿಗೆ ಕೈಯಿಂದ ದೊಡ್ಡ ಮತ್ತು ಕಲ್ಲಿನಿಂದ ಹೊಡೆದರು ಅಸ್ಲಾಂ ತಮ್ಮ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು ನಂತರ ಸದರಿ ಓಮಿನಿ ಕಾರನ್ನು ಅಲ್ಲಿದ್ದ ಸುಮಾರು 8-10 ಜನರು ಸೇರಿ ಜಖಂಗೊಳಿಸಿದ್ದು ತಮಗೆ ಹೊಡೆದವರ ಹೆಸರು ವಿಳಾಸ ತಿಳಿದಿರುವುದಿಲ್ಲ ನಂತರ ಈ ವಿಚಾರನ್ನು ತಿಳಿದ ಅಸ್ಲಾಂ ಚಿಕ್ಕಪ್ಪನ ಮಗ ರುಮಾನ್‌ಬೇಗ್ ಹಾಗೂ ಅಕ್ಕನ ಮಗನಾದ ಸೈಯದ್ ಮುಜಾವತ್ ಹಾಗೂ ಅಣ್ಣನಾದ ಖಿಯಂ ಬೇಗ್ ಮತ್ತು ಅಕ್ಕನ ಮಗನಾದ ಫೈರೋಜ್ ಖಾನ್ ರವರು ಬಂದು ಬಿಡಿಸಿ ಉಪಚರಿಸಿ ರುಮಾನ್ ಇವರ ಓಮಿನಿ ಕಾರಿನಲ್ಲಿ ಅಸ್ಲಾಂ ಚಿಕಿತ್ಸೆಗೆ ರಿಪ್ಪನ್‌ಪೇಟೆಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದರು ಅಸ್ಲಾಂ ಗೆ ಹೊಡೆಯುವ ಸಮಯದಲ್ಲಿ ಅವರ ಪ್ಯಾಂಟ್ ಜೇಬಿನಲಿದ್ದ 40,000/- ಹಣ ಹಾಗೂ ಓಪ್ಪೋ ಕಂಪನಿಯ ಮೊಬೈಲ್ ಬಿದ್ದು ಹೋಗಿರುತ್ತದೆ. ಆದ್ದರಿಂದ ಓಮಿನಿ ಕಾರನ್ನು ಅಡ್ಡಗಟ್ಟಿ ಅಸ್ಲಾಂ ಹಾಗು ಅವರ ತಮ್ಮನಿಗೆ ಅವಾಚ್ಯವಾಗಿ ಬೈದು, ಮೈ, ಕೈ, ತುಟಿಗೆ ಹೊಡೆದು ಗಾಯಪಡಿಸಿ ಓಮಿನಿ ಕಾರನ್ನು ಜಖಂಗೊಳಿಸಿದ ಸುಮಾರು 8-10 ಜನರ ಮೇಲೆ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕೆಂದು ನೀಡಿದ ಗಾಯಾಳು ಹೇಳಿಕೆ ನೀಡಿದ್ದಾರೆ.