Headlines

ರಿಪ್ಪನ್‌ಪೇಟೆ : ಚರ್ಚ್ ಬಳಿಯ ತಿರುವಿನಲ್ಲಿ ಟಿಂಬರ್ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ|accident

ರಿಪ್ಪನ್‌ಪೇಟೆ : ಚರ್ಚ್ ಬಳಿಯ ತಿರುವಿನಲ್ಲಿ ಟಿಂಬರ್ ಲಾರಿ ಪಲ್ಟಿ – ತಪ್ಪಿದ ಭಾರಿ ಅನಾಹುತ


ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಜ್ಯೋತಿ‌ ಮಾಂಗಲ್ಯ ಮಂದಿರದ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಂಬರ್ ಲಾರಿಯೊಂದು ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.


ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಟಿಂಬರ್ ಹೊತ್ತು ಸಾಗುತ್ತಿದ್ದ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಲಾರಿಯಲ್ಲಿದ್ದ ಮರದ ತುಂಡುಗಳೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.


ಅಪಘಾತದ ರಭಸಕ್ಕೆ ಲಾರಿಯ ಪಲ್ಟಿಯಾಗಿ ಟಾಪ್ ಕಿತ್ತುಹೋಗಿದ್ದು ಚಾಲಕ ಮರದ ದಿಂಬುಗಳ ನಡುವೆ ಸಿಲುಕಿಕೊಂಡಿದ್ದಾನೆ ಕೂಡಲೇ ಸ್ಥಳೀಯರು ಧಾವಿಸಿ ಆತನನ್ನು ಹೊರಗೆ ಎಳೆದಿದ್ದಾರೆ.ಅದೃಷ್ಟವಶಾತ್ ಚಾಲಕನಿಗೆ ಗಂಭೀರ ಗಾಯಗಳಾಗಿರುವುದಿಲ್ಲ.ಅಪಘಾತದಲ್ಲಿ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ.

ಲಾರಿ ಚಾಲಕ ಸೈಯದ್ ಎಂಬಾತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಪ್ಪಿದ ಭಾರಿ ಅನಾಹುತ : 
 
ತೀರ್ಥಹಳ್ಳಿ ರಸ್ತೆಯ ಜ್ಯೋತಿ ಮಾಂಗಲ್ಯ ಮಂದಿರದ ಬಳಿಯ ತಿರುವಿನಲ್ಲಿ ಲಾರಿ ಪಲ್ಟಿಯಾದ ಸಮೀಪದಲ್ಲಿಯೇ ವಿದ್ಯುತ್ ಟ್ರಾನ್ಸ್ ಫರ್ ಇದ್ದು ಕೂದಳೆಲೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಂಪ್ಸ್ ಹಾಗೂ ಬ್ಯಾರಿಕೇಡ್ ಅಳಡಿಕೆಗೆ ಆಗ್ರಹ

ಇತ್ತೀಚಿನ ದಿನಗಳಲ್ಲಿ ಈ ತಿರುವಿನಲ್ಲಿ ಅನೇಕ ಅಪಘಾತಗಳು ನಡೆಯುತಿದ್ದು ಇದಕ್ಕೆ ಅತೀ ವೇಗವೆ ಕಾರಣವಾಗಿದೆ.ಮುಂದೆ ಭಾರಿ ಅನಾಹುತವಾಗುವ ಮುಂಚೆ ಸಂಬಂಧಪಟ್ಟವರು ಬರುವೆ ಬಸ್ ಸ್ಟ್ಯಾಂಡ್ ಬಳಿಯಲ್ಲಿ ಹಂಪ್ಸ್ ಹಾಗೂ ಬ್ಯಾರಿಕೇಡ್ ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *