Headlines

ರಿಪ್ಪನ್‌ಪೇಟೆ : ಪೊಲೀಸ್ ವಸತಿ ನಿಲಯಗಳ ಬಳಿ NSS ಶಿಬಿರಾರ್ಥಿಗಳಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮ

ರಿಪ್ಪನ್‌ಪೇಟೆ : ಪೊಲೀಸ್ ವಸತಿ ನಿಲಯಗಳ ಬಳಿ NSS ಶಿಬಿರಾರ್ಥಿಗಳಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮ
ರಿಪ್ಪನ್‌ಪೇಟೆ;-ಶಿವಮೊಗ್ಗ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಮತ್ತು ಜಿಲ್ಲಾ ಒಕ್ಕಲಿಗರ ಸಂಘ ಇವರ ಸಹಯೋಗದಲ್ಲಿ ಅಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷೀಕ ಶಿಬಿರ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮ ಜರುಗಿತು.

ಶಿವಮೊಗ್ಗ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಶಿಬಿರಾರ್ಥಿಗಳು ಮತ್ತು ಶಿಬಿರಾಧಿಕಾರಿ ಪ್ರಕಾಶ್ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಪಿ.ಪ್ರವಿಣ್ ಇವರ ನೇತೃತ್ವದಲ್ಲಿ ಪೊಲೀಸ್ ವಸತಿ ನಿಲಯದ ಬಳಿಯಲ್ಲಿ ಬೆಳೆದ ಗಿಡಗಂಟೆಗಳನ್ನು ಸ್ವಚ್ಚಗೊಳಿಸುವುದರೊಂದಿಗೆ ಪರಿಸರ ರಕ್ಷಣೆ ಜನಜಾಗೃತಿ ಕಾರ್ಯವನ್ನು ನೆರವೇರಿಸಿದರು.




ಈ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಈ ರೀತಿಯ ಶಿಬಿರಗಳಿಂದಾಗಿ ನಾವು ಯಾವುದೇ ಕೆಲವನ್ನು ಶ್ರದ್ದೆಯಿಂದ ಮಾಡುವುದರಿಂದ ಮನ ಸಂತೋಷವಾಗುತ್ತದೆ ಪರಸ್ಪರ ಪ್ರೀತಿ ವಿಶ್ವಾಸ ಬೆಳಸಲು ಸಹಕಾರಿಯಾಗುವುದರೊಂದಿಗೆ  ಲೇಖನಿ ಹಿಡಿದರೆ ಸಾಲದು ಗುದ್ದಲಿ ಕತ್ತಿ ಇನ್ನಿತರ ಅಯೋಧಗಳ ಬಳಕೆಯ ಬಗ್ಗೆ ಜಾಗೃತರಾಗಿ ಜಮೀನಿನ ಕೆಲಸವನ್ನು ಮಾಡಲು ಅನುಭವವಾಗುವುದೆಂದು ತಮ್ಮ ಅನುಭವವನ್ನು ಹಂಚಿಕೊಂಡರು.



Leave a Reply

Your email address will not be published. Required fields are marked *