ತೀರ್ಥಹಳ್ಳಿ : ಮಾಜಿ ಸಚಿವ ಆರಗ ಜ್ಞಾನೇಂದ್ರ ಇವತ್ತು ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳ ಕುರ್ಚಿಗಳು ಖಾಲಿ ಇದ್ದಿದ್ದನ್ನು ಕಂಡು ಆಕ್ರೋಶಗೊಂಡರು.
ಸೋಮವಾರ ಸಂಜೆ 4.30ರ ಹೊತ್ತಿಗೆ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್ ಭೇಟಿ ನೀಡಿದರು. ಈ ವೇಳೆ ವಿವಿಧ ಸೆಕ್ಷನ್‌ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಿಟ್ಟಾದರು. ಕೂಡಲೆ ರಿಜಿಸ್ಟರ್ ತರಿಸಿಕೊಂಡು ಪರಿಶೀಲನೆ ನಡೆಸಿದರು.
ಇನ್ನು, ಪರಿಶೀಲನೆ ವೇಳೆ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಶೇ.50ಕ್ಕಿಂತಲು ಕಡಿಮೆ ಸಿಬ್ಬಂದಿ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹೀಗೆ ಮುಂದುವರೆದೆರೆ ತಾಲೂಕಿನ ಕೆಲಸಗಳು ನಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಸಿಬ್ಬಂದಿ ಕೊರತೆ ಕುರಿತು ತಿಳಿಸಿದರು. ಅಲ್ಲದೆ ನಿಯೋಜನೆ ಮೇಲೆ ತೆರಳಿರುವ ಇಬ್ಬರು ಸಿಬ್ಬಂದಿಯನ್ನು ಕೂಡಲೆ ತೀರ್ಥಹಳ್ಳಿಗೆ ಕಳುಹಿಸುವಂತೆ ಸೂಚನೆ ನೀಡಿದರು.
ತಾಲೂಕು ಕಚೇರಿಯ ವಿವಿಧ ಸೆಕ್ಷನ್‌ಗಳಿಗೆ ತೆರಳಿದ ಮಾಜಿ ಸಚಿವರು ಸಿಬ್ಬಂದಿ ಕೊರತೆ ಮತ್ತು ವ್ಯವಸ್ಥೆ ಕುರಿತು ಮಾಹಿತಿ ಪಡೆದರು.