ಸಾಹಿತ್ಯ ಲೋಕಕ್ಕೆ ಹೊಸನಗರ ತಾಲೂಕಿನ ಕೊಡುಗೆ ಅಪಾರ
       – ವೈ.ಎಸ್.ಪ್ರೇಮನಾಥ್
ಕನ್ನಡ ಸಾಹಿತ್ಯ ಲೋಕಕ್ಕೆ ಹೊಸನಗರ ತಾಲೂಕಿನ ಸಾಹಿತಿಗಳು ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ವೈ ಎಸ್ ಪ್ರೇಮನಾಥ್ ಹೇಳಿದರು. 
ಹೊಸನಗರ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಸಾಹಿತಿಗಳಿದ್ದು, ಸಾಹಿತ್ಯ ಲೋಕದ ಅನೇಕ ಕೃತಿಗಳನ್ನ ರಚನೆ ಮಾಡಿದ್ದಾರೆ ಎಂದು ತಾಲೂಕಿನ ಸಾಹಿತಿಗಳು ಮತ್ತು ಅವರ ಕೃತಿಗಳ ಬಗ್ಗೆ ವಿವರಿಸುತ್ತಾ ಹೇಳಿದರು. 
ಬುಧವಾರ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲಾ  ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಾನಮ್ಮ ದಿ. ಬೊಮ್ಮನಾಯ್ಕ ಸೊನಲೆ ಇವರ ದತ್ತಿನಿಧಿ ಕಾರ್ಯಕ್ರಮದಲ್ಲಿ ” ಕನ್ನಡ ಸಾಹಿತ್ಯಕ್ಕೆ ಹೊಸನಗರ ತಾಲೂಕಿನ ಕೊಡುಗೆ ” ಎಂಬ ವಿಷಯ ಕುರಿತು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಸಾಪ ಅಧ್ಯಕ್ಷ ತ.ಮ. ನರಸಿಂಹ ಮಾತನಾಡಿ ಕನ್ನಡದ ಸ್ವಾವಲಂಬಿತನ ಇದ್ದರೆ ಕನ್ನಡದ ಉಳಿವು ಸಾಧ್ಯ. ಕನ್ನಡ ಭಾಷೆ ಹಾಗೂ ಕನ್ನಡವನ್ನು ಬೆಳೆಸುವ ಮನಸ್ಸು ಚಿಕ್ಕ ವಯಸ್ಸಿನಲ್ಲಿ ಮನಗಂಡಾಗ ಮಾತ್ರ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ” ಕಾರ್ಮಿನಾ ಶರಾವೋ ಮತ್ತು ಎಂ.ಲೂವಿಸ್ ನೆನಪಿನ ದತ್ತಿ ” ಕಾರ್ಯಕ್ರಮದಲ್ಲಿ ” ಕನ್ನಡದ ಭಾಷಾ ಪ್ರಾಮುಖ್ಯತೆ ” ವಿಷಯ ಕುರಿತು ಕಲಾ ಶಿಕ್ಷಕ ಡಾ.ಎನ್ ಡಿ ಹೆಗಡೆ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿ ಕನ್ನಡ ಶಾಸ್ತ್ರೀಯ ಭಾಷೆ ಕನ್ನಡದ ಅನೇಕ ಪದಗಳು ದೇಹದ ಅಂತರಾತ್ಮದ ಭಾಷೆಯಾಗಿದೆ. ಬೇರೆ ಯಾವ ಭಾಷೆಯಲ್ಲಿ ಈ ರೀತಿಯ ಹೋಲಿಕೆ ಮಾಡಲು ಸಾಧ್ಯವಿಲ್ಲ.  ಕನ್ನಡದ ಪ್ರತಿಯೊಂದು ಶಬ್ದಕ್ಕೂ ಆತ್ಮೀಯತೆ ಇದೆ. ಕನ್ನಡ ಭಾಷೆಗೆ ದೇಹದ ಅಂಗಾಂಗಗಳು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷ ಉಮೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ  ಮುಖ್ಯ ಶಿಕ್ಷಕ ಶಿವಾಜಿ, ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ಶೆಟ್ಟಿ . ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದ ಮೊದಲಲ್ಲಿ ಕಲಾ ಶಿಕ್ಷಕ ಶೇಖರಪ್ಪ ಸ್ವಾಗತಿಸಿದರು. ಕೊನೆಯಲ್ಲಿ ಸಹ ಶಿಕ್ಷಕಿ ಲತಾ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರಾದ ವಿಜಯಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರಾದ  ಸವಿತಾ ಹಾಗೂ ವೀರಣ್ಣಗೌಡ ಇನ್ನು ಮುಂತಾದವರು ಉಪಸಿದ್ಧರಿದ್ದರು.
		 
                         
                         
                         
                         
                         
                         
                         
                         
                         
                        