ಶಿವಮೊಗ್ಗ: ತನ್ನ ಸೊಸೆಗೆ ಕಿರುಕುಳ ನೀಡಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ. ಸ್ನೇಹಿತನೇ ಕೊಲೆ ಮಾಡಿದ್ದಾನೆ.
ಆಸೀಫ್ (25) ಕೊಲೆಯಾಗಿರುವ ಯುವಕ. ಆತನ ಸ್ನೇಹಿತ ಜಬೀ (25) ಎಂಬಾತ ಚಾಕುವಿನಿಂದ ಇರಿದು ಆಸೀಫ್‌ನ ಹತ್ಯೆ ಮಾಡಿದ್ದಾನೆ. ಶಿವಮೊಗ್ಗದ ಇಲಿಯಾಜ್ ನಗರದಲ್ಲಿ ಘಟನೆ ನಡೆದಿದೆ.
ಮಂಡ್ಲಿಯ ನಿವಾಸಿ ಆಸೀಫ್ ಎಂಬಾತ ಕೊಲೆಯಾದ ಯುವಕ!. 25 ವರ್ಷದ ಆಸೀಪ್ ಜಬಿ ಎಂಬಾತನ ಸಹೋದರಿಯ ಮಗಳಿಗೆ ತೊಂದರೆ ಕೊಡುತ್ತಿದ್ದ ಎಂಬುದು ಪ್ರಾಥಮಿಕವಾಗಿ ತಿಳಿದಬಂದಿರುವ ಮಾಹಿತಿ. ಇದೇ ಕಾರಣಕ್ಕೆ ಸಿಟ್ಟಾದ ಜಭಿ, ಆಸೀಫ್ನನ್ನ ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ಧಾರೆ.
100 ಅಡಿ ರಸ್ತೆಯಲ್ಲಿ ಆಸೀಫ್ನನ್ನ ಬೆನ್ನಟ್ಟಿದ ಜಬಿ, ಆತನ ತಲೆ ಹಿಂಬದಿಗೆ ಹಲವು ಸಲ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲಿಯೇ ತೀವ್ರ ರಕ್ತ ಸೋರಿಕೆಯಿಂದ ಆಸೀಫ್ ಪ್ರಾಣಬಿಟ್ಟಿದ್ದಾನೆ. ಇನ್ನೂ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.