Headlines

ಮೆಸ್ಕಾಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತ ಕಲ್ಲು ತೂರಾಟ ಪ್ರಕರಣ : ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿದ್ದಕ್ಕೆ ಪೆಟ್ರೋಲ್ ಬಂಕ್ ಗೆ ಕಲ್ಲು ಹೊಡಿತೀರಾ – ಬೇಳೂರು ಗೋಪಾಲಕೃಷ್ಣ ವಾಗ್ದಾಳಿ|GKB

ಶಿವಮೊಗ್ಗ: ಪೆಟ್ರೋಲ್- ಡಿಸೇಲ್ ಬೆಲೆ ನೂರರ ಗಡಿ ದಾಟಿದೆ. ಈಗ ಪೆಟ್ರೋಲ್ ಬಂಕ್ ಮೇಲೆ  ಬಿಜೆಪಿಯವರು ಕಲ್ಲು ಹೊಡಿತಾರಾ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ.

ಶಿವಮೊಗ್ಗ ಮೆಸ್ಕಾಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತ ಕಲ್ಲು ತೂರಾಟ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ಸರ್ಕಾರ ಹೋಗಿದೆ.ಕಾಂಗ್ರೆಸ್ ಸರ್ಕಾರ ಬಂದಿದೆ.ಹಾಗಾಗಿ ಬಿಜೆಪಿಯವರು  ಹತಾಶರಾಗಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡಿದ್ರಲ್ಲಾ, ನಾವು ಕಲ್ಲೂ ತೂರಾಟ ಮಾಡಿಲ್ಲ. ಹೋರಾಟಾನು ಮಾಡಿಲ್ಲ ಎಂದ ಅವರು,ಈಗ ಪೆಟ್ರೋಲ್- ಡಿಸೇಲ್ ಎಷ್ಟು ಅಗಿದೆ.ಅದಕ್ಕೆ ಕಲ್ಲು ಹೊಡಿತ್ತಾರಾ.ನಾಚಿಗೆ ಅಗ್ಬೇಕು ಅವರಿಗೆ.ಅವರ ಸರ್ಕಾರ ಇದ್ದಾಗ ಏನು ಮಾಡಲಿಲ್ಲ.ಎಲ್ಲಾವಸ್ತುಗಳ ಬೆಲೆ  ಜಾಸ್ತಿ ಮಾಡಿಕೊಂಡು ಬಂದ್ರು. ಮಾನ- ಮರ್ಯಾದೆ ಇದಿಯಾ ಅವರಿಗೆ‌ ಎಂದು  ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷವಾಗಿ ಹೋರಾಟ ಮಾಡೋಕೆ ಅವಕಾಶ ಇದೆ. ಆದರೆ,  ಕಲ್ಲು ಹೊಡಿಯೋದು ತಪ್ಪು. ಅಂತವರನೆಲ್ಲಾ ಅರೆಸ್ಟ್ ಮಾಡಿ, ಜೈಲಿಗೆ ಕಳುಹಿಸಬೇಕು.ಪ್ರತಿಭಟನೆಯ ನೇತೃತ್ವ ವಹಿಸಿದವರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿಯಬತು  ಬೆಲೆ ಏರಿಕೆ ಮಾಡಿದಾಗ ನಾವು ಹೋರಾಟ ಮಾಡಿದ್ವೀ, ಅದ್ರೇ ನಾವು  ಎಲ್ಲೂ ಕಲ್ಲು ಹೊಡೆದಿಲ್ಲ.ಮೋದಿ ಜೀ ಬಂದರೂ, ರಾಜ್ಯದಲ್ಲಿ ಇಷ್ಟು ಹೀನಾಯವಾಗಿ ಸೋತಿದ್ದಾರೆ..ಬಿಜೆಪಿಯವರು ಹತಾಶರಾಗಿ ಹೀಗೆಲ್ಲಾ ಮಾಡ್ತಾ ಇದ್ದಾರೆ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು,ಲೋಕಸಭೆಯಲ್ಲಿ ಹೆಚ್ಚು ಸ್ಥಾನ ತಗೋಬೇಕು ಎಂಬ ಇರಾದೆಯಿದೆ. ಬಿಜೆಪಿ ಆಡಳಿತ ದುರ್ಬಲ ಅಗುತ್ತಿದೆ. ಒಳ್ಳೆಯ ಅಭ್ಯರ್ಥಿ ಹಾಕಿದರೆ ಈ ಬಾರಿ ಗೆಲ್ತೇವೆ. ಶೀಘ್ರದಲ್ಲೇ  ಚುನಾವಣಾ ಕಾವು ಶುರುವಾಗುತ್ತೆ.ಅದಕ್ಕೂ ಮೊದಲು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗೆ ಒತ್ತು ಕೊಡುತ್ತೇವೆ ಎಂದರು.

Leave a Reply

Your email address will not be published. Required fields are marked *