Headlines

ಸಹೋದರಿಯರ ಮಕ್ಕಳ ಜೊತೆ ಯುವಕ ನೀರುಪಾಲು|Water disaster

ಈಜಲು ನೀರಿಗಿಳಿದಿದ್ದ ವೇಳೆ ಭದ್ರಾ ಚಾನಲ್​ನಲ್ಲಿ ಕೊಚ್ಚಿಕೊಂಡು ಹೋಗಿದ್ದ ಮೂವರ ಪೈಕಿ ಇಬ್ಬರ ಶವ ಪತ್ತೆಯಾಗಿದೆ. ಬೆಳಗ್ಗೆ ಅನನ್ಯ ಎಂಬಾಕೆಯ ಶವ ಪತ್ತೆಯಾಗಿತ್ತು.ಬಳಿಕ ರವಿ ಎಂಬವರ ಶವ ಪತ್ತೆಯಾಗಿದೆ. 




ನೀರಿನಲ್ಲಿ ಆಟವಾಡುವಾಗ ಕಾಲು ಜಾರಿ ಲಕ್ಕವಳ್ಳಿ ಡ್ಯಾಮ್ ಸಮೀಪದ ಭದ್ರಾ ಕಾಲುವೆಯಲ್ಲಿ ಮೂವರು ಕೊಚ್ಚಿಕೊಂಡು ಹೋಗಿದ್ಧರು. 

ಮೃತರನ್ನು ಲಕ್ಕವಳ್ಳಿ ಮೂಲದ ರವಿ (31), ಶಿವಮೊಗ್ಗ ಮೂಲದ ಹದಿನಾರು ವರ್ಷದ ಅನನ್ಯ ಹಾಗೂ ಚಾಮರಾಜನಗರ ಜಿಲ್ಲೆ, ನಂಜನಗೂಡು ಮೂಲದ 19 ವರ್ಷದ ಶಾಮವೇಣಿ ಎಂದು ಗುರುತಿಸಲಾಗಿದೆ. 

ಮೃತ ಶಾಮವೇಣಿ ಹಾಗೂ ಅನನ್ಯ ಮೃತ ರವಿಯ ಸಹೋದರಿಯರ ಮಕ್ಕಳು. ಶಾಲಾ ಕಾಲೇಜಿಗೆ ರಜೆ ಇದ್ದ ಹಿನ್ನೆಲೆ ಲಕ್ಕವಳಿಗೆ ಆಗಮಿಸಿದ್ದರು. ಎಲ್ಲರು ಲಕ್ಕವಳ್ಳಿ ಡ್ಯಾಮ್ ಪಕ್ಕದ ಭದ್ರಾ ಕಾಲುವೆ ಬಳಿ ತೆರಳಿದ್ದಾರೆ. ಅಲ್ಲಿಯೇ ಬಹಳ ಹೊತ್ತು ಕಳೆದಿದ್ದಾರೆ. ಈ ಮಧ್ಯೆ  ಕಾಲು ಜಾರಿ ಒಬ್ಬರು ನೀರಿಗೆ ಬಿದ್ದಿದ್ದಾಳೆ. ಆಕೆಯನ್ನ ರಕ್ಷಿಸಲು ಹೋದ ಇನ್ನೊಬ್ಬಳು, ಸಹೋದರಿಯರ ಮಕ್ಕಳನ್ನ ರಕ್ಷಿಸಲು ಮುಂದಾದ ರವಿ ಮೂವರು ಸಹ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. 




ಘಟನೆ ಬೆನ್ನಲ್ಲೆ  ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಸ್ಥಳಕ್ಕೆ ಭೇಟಿಕೊಟ್ಟಿದ್ದು,  ಕಾರ್ಯಾಚರಣೆ ನಡೆಸುತಿದ್ದಾರೆ.  

ಕಾಲುವೆಯ ಈ ನೀರು ಅತಿ ವೇಗವಾಗಿ ಹರಿಯುತ್ತಿದ್ದರಿಂದ, ಮೃತದೇಹ ಶೋಧ ಕಾರ್ಯ ಕಷ್ಟವಾಗಿತ್ತು.ಸತತ 10 ಗಂಟೆಯ ಕಾರ್ಯಾಚರಣೆ ಬಳಿಕ ಇಬ್ಬರ ಮೃತದೇಹ ಪತ್ತೆಯಾಗಿದೆ.



Leave a Reply

Your email address will not be published. Required fields are marked *