ರಿಪ್ಪನ್‌ಪೇಟೆ : ವಿರೋದದ ನಡುವೆಯೂ ರಾತ್ರೋರಾತ್ರಿ ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಹುನ್ನಾರ|BAR


ರಿಪ್ಪನ್‌ಪೇಟೆ : ವಿರೋದದ ನಡುವೆಯೂ ರಾತ್ರೋರಾತ್ರಿ ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಹುನ್ನಾರ

ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಲಾಡ್ಜ್ ವೊಂದರಲ್ಲಿ ವಿರೋಧದ ನಡುವೆಯೂ ಬಾರ್ ತೆರೆಯಲು ಹುನ್ನಾರ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜನವರಿ 30 ರಂದು ಜಿಲ್ಲಾ ಅಬಕಾರಿ ಜಿಲ್ಲಾಧಿಕಾರಿಗಳು ಏಕಾಏಕಿ ಮದ್ಯದಂಗಡಿಗೆ ಪರವಾನಿಗೆ ನೀಡುವ ಹುನ್ನಾರದಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಜುಮ್ಮಾ ಮಸೀದಿಗೂ ರಾಯಲ್ ಕಂಫರ್ಟ್ ಕಟ್ಟಡಕ್ಕೂ ಕೇವಲ 60 ಮೀಟರ್ ಅಂತರದಲ್ಲಿದ್ದರೂ ಅಬಕಾರಿ ನಿಯಮವನ್ನು ಗಾಳಿಗೆ ತೋರಿ ಅವೈಜ್ಞಾನಿಕವಾಗಿ ಅಂಗಡಿ ಆರಂಭಕ್ಕೆ ಹಸಿರು ನಿಶಾನೆ ತೋರಿರುವ ಕ್ರಮವನ್ನು ವಿರೋಧಿಸಿ ಮುಸ್ಲಿಂ ಮಹಿಳೆಯರು ಸೇರಿದಂತೆ ಸರ್ವಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದ್ದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ವಿಎಸ್ ರಾಜೀವ್ ಮನವಿಯನ್ನು ಸ್ವೀಕರಿಸಿ ಸ್ಥಳ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೂ ಪ್ರಾರ್ಥನಾ ಮಂದಿರದ ಬಳಿ ಬಾರ್ ತೆರವಿಗೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರು.

ನಂತರದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಗೆ ಪಟ್ಟಣದಿಂದ ಸರ್ವಪಕ್ಷಗಳ ನಿಯೋಗ ತೆರಳಿ ಯಾವುದೇ ಕಾರಣಕ್ಕೂ ಪ್ರಾರ್ಥನಾ ಮಂದಿರದ ಸನಿಹದಲ್ಲಿ ಸಿಎಲ್-7 ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು ಹಾಗೇಯೆ ಕೂಡಾ ಜಿಲ್ಲಾ ಅಧಿಕಾರಿಗಳು ಜನಸಾಮಾನ್ಯರ ವಿರೋಧವಿದ್ದಲಿ ಅಂಗಡಿ ಅರಂಭಿಸುವುದಿಲ್ಲ ಎಂದು ಭರವಸೆಯನ್ನು ಸಹ ನೀಡಿದ್ದರು.

ಆದರೆ ಬಲ್ಲ ಮೂಲಗಳ ಪ್ರಕಾರ ಇಂದು ಮಸೀದಿ ಮುಂಭಾಗದ ವಾಣಿಜ್ಯ ಮಳಿಗೆಯ ಹೆಸರಿನಲ್ಲಿ ಸಾಗರ ಡಿಪೋದಿಂದ ಪರ್ಮೀಟ್ ಪಡೆದು ಮದ್ಯ ಇಂದು ರಾತ್ರಿಯೇ ಮಳಿಗೆಯಲ್ಲಿ ಅನ್ ಲೋಡ್ ಆಗುತ್ತದೆ ಎನ್ನಲಾಗುತ್ತಿದೆ.

ಈ ವಿಷಯ ತಿಳಿಯುತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ನೆರೆದಿದ್ದು ಯಾವುದೇ ಕಾರಣಕ್ಕೂ ಬಾರ್ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳುತಿದ್ದಾರೆ.

ಒಟ್ಟಾರೆಯಾಗಿ ಬಾರ್ ತೆರೆಯಲು ಮುಂದಾಗುವ ಸಂಧರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿರುವ ಸಾರ್ವಜನಿಕರು ಹಾಗೂ ಬಾರ್ ತೆರೆಯಲು ಹೊರಟವರ ನಡುವೆ ಸಂಘರ್ಷವಾಗಿ ಭಾರಿ ಅನಾಹುತವಾದಲ್ಲಿ ಲಜ್ಜೆಗೆಟ್ಟ ಅಬಕಾರಿ ಅಧಿಕಾರಿಗಳೇ ಹೊಣೆಯಾಗಿರುತ್ತಾರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತಿದ್ದಾರೆ.

ಕೂಡಲೇ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದಾಗುವ ಭಾರಿ ಸಂಘರ್ಷವನ್ನು ತಪ್ಪಿಸಬೇಕಾಗಿದೆ.

Leave a Reply

Your email address will not be published. Required fields are marked *