Headlines

ರಿಪ್ಪನ್‌ಪೇಟೆ : ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಸಮಾಲೋಚನೆ|BJP

ರಿಪ್ಪನ್‌ಪೇಟೆ : ಇತ್ತೀಚೆಗೆ ನಡೆದ ವಿಧಾನಸಭಾ ಸಾವತ್ರಿಕ ಚುನಾವಣೆಯಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಆಭಿವೃದ್ದಿ ಕಾಮಗಾರಿಗಳು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದ್ದರೂ ಕೂಡಾ ಕ್ಷೇತ್ರದಲ್ಲಿ ಪಕ್ಷದ ಹಿನ್ನಡೆಗೆ ಕಾರಣವೇನು ಎಂಬುದರ ಕುರಿತು ಕಾರ್ಯಕರ್ತರೊಂದಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಪರಾಮರ್ಶೆ ನಡೆಸಿದರು.




ಪಟ್ಟಣದ ವಿನಾಯಕ ವೃತ್ತದಲ್ಲಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನೆಡಸಿ ಮುಂದಿನ ಜಿಲ್ಲಾ ತಾಲ್ಲೂಕ್ ಪಂಚಾಯ್ತಿ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಸಂಘಟನೆ ಹಾಗೂ ಅಕಾಂಕ್ಷಿಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ ಕಾರ್ಯಕರ್ತರು ಮತದಾರರೊಂದಿಗೆ ಇಂದಿನಿಂದಲೇ ಬಿಜೆಪಿ ಪಕ್ಷದ ಕಾರ್ಯಗಳ ಕುರಿತು ಮನವರಿಕೆ ಮಾಡುವಂತೆ ತಿಳಿಸಿದರು.




ಈ ಸಂದರ್ಭದಲ್ಲಿ ಮೆಣಸೆ ಆನಂದ, ಎಂ.ಸುರೇಶ್‌ಸಿಂಗ್,ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ,ಜಿ.ಪಂ ಮಾಜಿ ಸದಸ್ಯೆ ಎ.ಟಿ.ನಾಗರತ್ನ ,ಪಕ್ಷದ ಮುಖಂಡರಾದ ಎನ್.ಸತೀಶ್,ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್,ತರಕಾರಿ ಯೋಗೇಂದ್ರಗೌಡ , ಪಿ.ರಮೆಶ್, ಪರಮೇಶ ಹೊನ್ನಕೊಪ್ಪ,ಮಹೇಶ್, ಸಾಜಿ,ರಾಮಚಂದ್ರ,ಉದ್ಯಮಿ ಎಲ್.ನಾಗರಾಜ್ ಶೆಟ್ಟಿ,ಸುಂದರೇಶ್ ಇನ್ನಿತರರು ಹಾಜರಿದ್ದರು.

“ಅಪಘಾತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿ ವೈಯಕ್ತಿಕ ನೆರವು ನೀಡಿದ ಮಾಜಿ ಸಚಿವ ಹರತಾಳು’’

 ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಾಣಬೈಲು ಯೋಮಕೇಶ್ ಪತ್ನಿ ಮತ್ತು ಸಿದ್ದಪ್ಪವನರ ಪತ್ನಿ ರವರ ಮನೆಗೆ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಆರೋಗ್ಯದ ಸ್ಥಿತಿಯನ್ನು ವಿಚಾರಿಸಿ ವೈಯಕ್ತಿಕ ನೆರವು ನೀಡಿ ಬೇಗ ಗುಣಮುಖ ಹೊಂದಲೇದು ಹಾರೈಸಿದರು.




ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾದ ರಿಪ್ಪನ್‌ಪೇಟೆ ಗವಟೂರು ಗ್ರಾಮದ ಪಿ.ಸುದೀಂದ್ರರ ಮನೆಗೆ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಆರೋಗ್ಯದ ಸ್ಥಿತಿಯನ್ನು ವಿಚಾರಿಸಿದರು.

Leave a Reply

Your email address will not be published. Required fields are marked *