ಹೊಸನಗರ : ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಅಕ್ಬರ್ ಅನ್ವರ್ ಮಾಷೂಂಷಾ ವಲಿಯುಲ್ಲಾ ದರ್ಗಾ ಇದರ ಉರೂಸ್ಗೆ ಚಾಲನೆ ನೀಡಲಾಗಿದೆ.
ಸರ್ವ ಧರ್ಮಿಯರ ಪವಿತ್ರ ಕ್ಷೇತ್ರ ಬಿದನೂರು ನಗರ ದರ್ಗ ರಾಜ್ಯದ ಪ್ರಮುಖ ಪವಾಡ ಕ್ಷೇತ್ರಗಳ ಸಾಲಿನಲ್ಲಿ ಸೇರಿಕೊಂಡಿದ್ದು ಹಝರತ್ ಶೈಖುಲ್ ಇಕ್ಟರ್ ಅನ್ವರ್ ಮಾಸುಂಷಾ ವಯುಲ್ಲಾಹಿರವರ 49ನೇ ಉರೂಸ್ ಸಮಾರಂಭವನ್ನು ವಿಶೇಷ ವಾಗಿ ಆಚರಿಸಲಾಗುತ್ತದೆ ಎಂದು ದರ್ಗಾ ಕಮಿಟಿ ಉಪಾಧ್ಯಕ್ಷ ಆರ್ ಎ ಚಾಬುಸಾಬ್ ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ದರ್ಗಾ ಕಮಿಟಿಯ ಗೌರವಾಧ್ಯಕ್ಷರಾದ ಪಟೇಲ್ ಗರುಡಪ್ಪಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಂದು ಸಂಜೆ ಕಾರ್ಗಲ್ ಸಿರಾಜ್ ತಂಙಳ್ ನೇತೃತ್ವದಲ್ಲಿ ಮಗರೀಬ್ ನಮಾಜ್ ನಂತರದಲ್ಲಿ ಸಂದಲ್ ಮೆರವಣಿಗೆ ಮತ್ತು ನೂರುಲ್ ಹುದಾ ದಫ್ ಕಮಿಟ ಕೋಡಿ ಕುಂದಾಪುರ ಇವರಿಂದ ದಫ್ ಕಾರ್ಯಕ್ರಮ.
ರಾತ್ರಿ 8.00 ಗಂಟೆಯಿಂದ ಮೌಲಾನ ಸಿರಾಜುದ್ದೀನ್ ಸಖಾಫಿ ಕನ್ಯಾನ,ಖತೀಬರು ಬದ್ರಿಯಾ ಜುಮ್ಮಾ ಮಸೀದಿ ಬನ್ನೂರು ಪುತ್ತೂರು ಇವರಿಂದ ಕನ್ನಡ ಧಾರ್ಮಿಕ ಪ್ರವಚನ ಹಾಗೂ ಮೌಲಾನ ಆದಂ ಸಖಾಫಿ ಚಿತ್ರದುರ್ಗ ಇವರಿಂದ ಉರ್ದು ಧಾರ್ಮಿಕ ಪ್ರವಚನ ನಡೆಯಲಿದೆ.
ಉರೂಸ್ ಸಂಧರ್ಭದಲ್ಲಿ ಜನ ಒತ್ತಡದ ಸನ್ನಿವೇಶದಲ್ಲಿ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಇಲಾಖೆ ಸೂಕ್ತ ಕ್ರಮ ಜರುಗಿಸುವಂತೆ ಸಮೀತಿಯಿಂದ ಅನುಮತಿ ನೀಡಲಾಗಿದೆ. ಎಂದು ದರ್ಗಾ ಸಮಿತಿ ಕಾರ್ಯದರ್ಶಿ ಸಾದಿಕ್ ಅಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಮೊ: 9448044876 ಸಾಧಿಕ್ ಕಚ್ಚಿಗೆಬೈಲು ಕಾಯದರ್ಶಿ, ದರ್ಗಾ ಸಮಿತಿ ನಗರ ಮೊ.: 9901770459 ಸಂಪರ್ಕಿಸಲು ಕೋರಿದೆ.
ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಪ್ರಮುಖರಾದ ವಿನಾಯಕ ಉಡುಪ ಹಾಗೂ ಇನ್ನಿತರ ಪ್ರಮುಖರಿದ್ದರು.