ಶಿವಮೊಗ್ಗ ಜಿಲ್ಲೆಯಲ್ಲಿ ಶೇ 80% ರಷ್ಟು ಮತದಾನ – ಜಿಲ್ಲಾಧಿಕಾರಿ ಡಾ. ಸೆಲ್ವಮಣಿ

ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಶೇ.80%ರಷ್ಟು ಮತದಾನವಾಗಿದೆ. ಶಾಂತಿಯುತವಾಗಿ ಮತದಾನ ನಡೆದಿದ್ದು, ಕೆಲವೆಡೆ ಇವಿಎಂ ಕೈ ಕೊಟ್ಟ ಹಿನ್ನೆಲೆಯಲ್ಲಿ ಮತದಾನ ಕೆಲ ಸ್ಥಗಿತಗೊಂಡಿತ್ತು.ವಿವಿಧ ಸುಮಾರು 20 ಮತದಾನ ಕೇಂದ್ರದಲ್ಲಿ ಹೆಚ್ಚುವರಿ ಸಮಯ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹೇಳಿದರು.

ಎಲ್ಲೂ ಮರು ಮತದಾನ ನಡೆಸುವ ಅಗತ್ಯ ಕಂಡು ಬಂದಿಲ್ಲವೆಂದು ತಿಳಿಸಿರುವ ಡಿಸಿಮತ ಎಣಿಕೆ ಸಂಬಂಧ ಅಗತ್ಯ ಸಿದ್ಧತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಅಂತಿಮ ಹಾಗೂ ಒಟ್ಟಾರೆ ಶೇಕಡಾವಾರು ಮತದಾನದ ವಿವರ ಲಭ್ಯವಾಗಿದೆ. ಚುನಾವಣಾ ಆಯೋಗದಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ 80% ರಷ್ಟು ಮತದಾನವಾಗಿದೆ. 

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನ ವಿವರ.

111=ಶಿವಮೊಗ್ಗ(ಗ್ರಾ.) 83.71%

112=ಭದ್ರಾವತಿ. 68.47%

113=ಶಿವಮೊಗ್ಗ. 68.74%

114=ತೀರ್ಥಹಳ್ಳಿ. 84.83%

115=ಶಿಕಾರಿಪುರ 82.57%

116=ಸೊರಬ  82.97%

117=ಸಾಗರ. 80.29%

ಇವತ್ತು ಬೆಳಗ್ಗೆ ಒಂಬತ್ತು ಗಂಟೆಗೆ, 20 ಪರ್ಸೆಂಟ್ , 11 ಗಂಟೆಗೆ ನಲವತ್ತು ಪರ್ಸೆಂಟ್​ನಷ್ಟಿದ್ದ ಮತಪ್ರಮಾಣ ಮೂರು ಗಂಟೆಯ ಹೊತ್ತಿಗೆ ಬರೋಬ್ಬರಿ ಶೇಕಡಾ 55. 39 ರಷ್ಟಿತ್ತು. 

Leave a Reply

Your email address will not be published. Required fields are marked *