ರಿಪ್ಪನ್ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆ ಬಳಿ ಬೈಕ್ ಹಾಗೂ ಲಗೇಜ್ ಆಟೋ ಭೀಕರ ಅಪಘಾತವಾಗಿ ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ಲಗೇಜ್ ಆಟೋ (KA-15 A 4679) ಹಾಗೂ ಹೀರೋ ಹೋಂಡಾ ಸ್ಪೆಂಡರ್ (KA 01 S 8450)
ಬೈಕ್ ಗಳ ನಡುವೆ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ಗವಟೂರು ನಿವಾಸಿ ಗಣೇಶ್ (46) ರವರಿಗೆ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ.ಅಪಘಾತ ನಡೆದು ಅರ್ಧ ಗಂಟೆ ರಕ್ತದ ಮಡುವಿನಲ್ಲಿ ಮಲಗಿದ್ದರೂ ಯಾರು ಸಹಾಯಕ್ಕೆ ಬಾರದೇ ಇದ್ದದ್ದು ನಾಚಿಕೆಯ ಸಂಗತಿಯಾಗಿದೆ.
ವಿಷಯ ತಿಳಿಯುತಿದ್ದಂತೆ ಪಟ್ಟಣದ ಯುವಕರು ಸ್ಥಳಕ್ಕೆ ತೆರಳಿ ಗಾಯಾಳು ರಮೇಶ್ ರವರನ್ನು ಆಸ್ಪತ್ರೆಗೆ ಸಾಗಿಸಲು ಅಪಘಾತವೆಸಗಿದ ಆಟೋ ಚಾಲಕನ ಬಳಿ ಸಹಾಯ ಯಾಚಿಸಿದಾಗ ಉಡಾಫೆಯಾಗಿ ಮಾತನಾಡಿ ನನ್ನ ಆಟೋ ಗೆ ಹಾಕಬೇಡಿ ಎಂದಿದ್ದಾನೆ.ಕೂಡಲೇ ಅದೇ ರಸ್ತೆಯಲ್ಲಿ ತೆರಳುತಿದ್ದ ಮತ್ತೊಂದು ಕಾರಿನಲ್ಲಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು.
ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ರವಾನಿಸಲು 108 ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಮಾನವೀಯತೆ ಮರೆತು ಗಾಯಾಳು ರಕ್ತದ ಮಡುವಿನಲ್ಲಿ ನರಳುವುದನ್ನು ಸಂಭ್ರಮಿಸಿದ ವಿಕೃತ ಮನಸ್ಸಿನವರಿಗೆ ಧಿಕ್ಕಾರವಿರಲಿ.
ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.