ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮುಂದುವರಿಯುವಂತೆ ರಾಜ್ಯ ರಿಜಿಸ್ಟರ್ ಕೋರ್ಟ್ ಹೈ ಕೋರ್ಟ್ ಅದೇಶಿಸಿದೆ.
ಈ ಮೂಲಕ ಸಹಕಾರಿ ನಾಯಕ ಆರ್. ಎಂ. ಮಂಜುನಾಥ ಗೌಡ ಮತ್ತೆ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
ಅನರ್ಹತೆ ಅನ್ಯಾಯ ವಿರುದ್ಧ ಕಾನೂನು ಹೋರಾಟ ಮುಂದುವರಿಸಿದ್ದ ಮಂಜುನಾಥ ಗೌಡರಿಗೆ ಇದೀಗ ನ್ಯಾಯ ಸಿಕ್ಕಿದೆ.
2020ರಲ್ಲಿ ಚುನಾವಣೆ ನಡೆದು 2025ರವರೆಗೆ ಸೇವಾ ಅವಧಿ ಇತ್ತು. ರಾಜಕೀಯ ದುರುದ್ದೇಶದಿಂದ ಮಾಡಿರುವ ಅನ್ಯಾಯಕ್ಕೆ ಈಗ ಜಯ ಸಿಕ್ಕಿದೆ.ಮುಂದೆ ಕೋರ್ಟ್ ಆದೇಶದಂತೆ ಸೇವೆ ಸಲ್ಲಿಸುತ್ತೇನೆ. ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ನಾನು ಬದ್ಧ ಎಂದು ಮಂಜುನಾಥ ಗೌಡ ಹೇಳಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ನೇಮಿಸುವಂತೆ ಸಹಕಾರ ಇಲಾಖೆ ಬ್ಯಾಂಕ್ ಎಂ ಡಿ ಗೆ ಪತ್ರ ನೀಡಲಾಗಿದೆ. ಈ ಪತ್ರವನ್ನ ಎಂಡಿ ಸ್ವೀಕರಿಸಿದಲ್ಲಿ ಆರ್ ಎಂ ಮಂಜುನಾಥ್ ಗೌಡ ಮತ್ತೆ ನಿರ್ದೇಶಕರಾಗಿ ನೇಮಕಗೊಳ್ಳಲಿದ್ದಾರೆ.