ರಿಪ್ಪನ್‌ಪೇಟೆ : ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೇಯಸ್ ಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಅಭಿನಂದನೆ|BJP

ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೇಯಸ್ ಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಅಭಿನಂದನೆ

ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಪಂ ತಳಲೆ ವಾರ್ಡ್ ನ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಶ್ರೇಯಸ್ ರವರಿಗೆ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಪಕ್ಷದ ಕಛೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.




ಫೆ.25 ರಂದು ನಡೆದ ಉಪ ಚುನಾವಣೆಯಲ್ಲಿ ಸಮೀಪದ ಸ್ಪರ್ಧಿಗಿಂತ 87 ಮತಗಳ ಅಂತರದಿಂದ ಗೆಲುವು ಸಾಧಿಸಿದ ಶ್ರೇಯಸ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.


ಈ ಸಂಧರ್ಭದಲ್ಲಿ ಮಾತನಾಡಿದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿದ್ದ ಚೂಡಾಮಣಿ ರವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಮಗನನ್ನೇ ಪಕ್ಷ ಸ್ಪರ್ಧಿಸುವಂತೆ ಸೂಚಿಸಿತ್ತು ಆ ಹಿನ್ನಲೆಯಲ್ಲಿ ಪಕ್ಷದ ಬೂತ್ ಕಾರ್ಯಕರ್ತರು ಶ್ರಮ ಪಟ್ಟು ಶ್ರೇಯಸ್ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳೇ ನಮ್ಮ ಗೆಲುವಿಗೆ ಸಹಕಾರಿಯಾಗಿವೆ ಎಂದರು.




ಮುಖಂಡರಾದ ಬೆಳ್ಳೂರು ತಿಮ್ಮಪ್ಪ ಮಾತನಾಡಿ ತಾಲೂಕಿನಲ್ಲಿ ಮೂರು ಗ್ರಾಪಂ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ನಮ್ಮ ಡಬಲ್ ಇಂಜಿನ್ ಸರ್ಕಾರದ ಕಾರ್ಯ ವೈಖರಿಯೇ ಇದಕ್ಕೆಲ್ಲಾ ಕಾರಣವಾಗಿದೆ ಎಂದರು.ನಂತರ ನೂತನವಾಗಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಶ್ರೇಯಸ್ ರವರಿಗೆ ಹಾರ -ತುರಾಯಿ ಯಂತಹ ದುಂದು ವೆಚ್ಚದ ಆಚರಣೆಯಿಂದ ದೂರವುಳಿಯುವಂತೆ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಆರ್ ಟಿ ಗೋಪಾಲ್ ,ಕಗ್ಗಲಿ ಲಿಂಗಪ್ಪ ,ಸುರೇಶ್ ಸಿಂಗ್ ,ಕಲ್ಲೂರು ನಾಗೇಂದ್ರ ,ಸತೀಶ್ ಎನ್ ,ಆಲುವಳ್ಳಿ ಸ್ವಾಮಿ ,ಜಂಬಳ್ಳಿ ಗಿರೀಶ್ ಹಾಗೂ ಇನ್ನಿತರರಿದ್ದರು.


ನಂತರ ಪಟ್ಟಣದ ವಿನಾಯಕ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.



Leave a Reply

Your email address will not be published. Required fields are marked *