ಕಾಲು ತೊಳೆಯಲು ಹೋಗಿ ಅಂಬಲಿಗೋಳ ಡ್ಯಾಮ್ ನಲ್ಲಿ ಜಾರಿ ಬಿದ್ದ ವ್ಯಕ್ತಿ : ಅಗ್ನಿಶಾಮಕ ದಳದಿಂದ ತೀವ್ರ ಶೋಧ…!!!
ಶಿಕಾರಿಪುರ ತಾಲೂಕಿನ ಅಂಬಲಿಗೋಳ ಡ್ಯಾಮ್ ನಲ್ಲಿ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ.
ಕಪ್ಪನಹಳ್ಳಿ ಗ್ರಾಮದ ನಿವಾಸಿ ಜಗದೀಶ್ ಎಂಬ ವ್ಯಕ್ತಿ ತಮ್ಮ ಸ್ನೇಹಿತರೊಂದಿಗೆ ವಿಹಾರಕ್ಕೆ ಆಗಮಿಸಿದಾಗ ಅಂಬಲಿಗೋಳ ಡ್ಯಾಮ್ ಮೇಲಿನ ರಸ್ತೆಯಲ್ಲಿ ತಿರುಗಾಡಿದ್ದಾರೆ.ನಂತರ ಅಂಬಲಿಗೋಳ ಡ್ಯಾಮ್ ನಲ್ಲಿ ಇಳಿದು ಕಾಲು ತೊಳೆಯುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ಇಂದು ಸಂಜೆ ನಡೆದಿದೆ.
ತಕ್ಷಣ ಅವರ ಸ್ನೇಹಿತರು ಪೊಲೀಸ್ ಇಲಾಖೆಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ತಕ್ಷಣ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಇದೀಗ ತೀವ್ರ ಶೋಧ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಅಗ್ನಿಶಾಮಕ ದಳ ,ಆನಂದಪುರ ಹಾಗೂ ಶಿಕಾರಿಪುರ ಪೊಲೀಸರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.