ಹೊಬುಜಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು – ಆರಗ ಜ್ಞಾನೇಂದ್ರ|hombuja

ಹೊಂಬುಜ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ಒತ್ತು –  ಆರಗ ಜ್ಞಾನೇಂದ್ರ

 


ರಿಪ್ಪನ್ ಪೇಟೆ : ಜೈನರ ಪ್ರಸಿದ್ಧ ಯಾತ್ರಾಸ್ಥಳವಾದ  ಹೊಂಬುಜ ಕ್ಷೇತ್ರದ ಸರ್ವಾಂಗಿಣ  ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು  ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.




ಭಾನುವಾರ ಶ್ರೀ ಕ್ಷೇತ್ರ ಹೊಂಬುಜದ ಮಠದ ಆಸುಪಾಸಿನ  ರಸ್ತೆ ಹಾಗೂ ಒಳಚರಂಡಿ ಯೋಜನೆಯ ರೂ ಎರಡು ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಚಾಲನೆ ನೀಡಿ ಅವರು ಮಾತನಾಡಿದರು.

ಮಾತೆ ಪದ್ಮಾವತಿ ದೇವಿ ನೆಲೆ ನಿಂತಿರುವ ಮಲೆನಾಡಿನ ಪ್ರಸಿದ್ಧ ತೀರ್ಥಕ್ಷೇತ್ರ ಇದಾಗಿದ್ದು,  ಪ್ರತಿನಿತ್ಯ  ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತರು  ಈ ಕ್ಷೇತ್ರದ ದರ್ಶನ ಪಡೆದು ಹೋಗುತ್ತಾರೆ. ಇಲ್ಲಿ ತಂಗಿ ಹೋಗುವ ಪ್ರಯಾಣಿಕರಿಗೆ  ಎಲ್ಲಾ ರೀತಿಯ ಸೌಕರ್ಯಗಳನ್ನು ಶ್ರೀ ಮಠ ನಿರ್ವಹಿಸುತ್ತಿದೆ  ಎಂದರು.

ಕೋವಿಡ್ ಸಂದರ್ಭದಲ್ಲಿ   ಸುಮಾರು 200ಕ್ಕೂ ಅಧಿಕ  ಸುಸಜ್ಜಿತ ಕೊಠಡಿಗಳನ್ನು  ರೋಗಿಗಳ ಆರೈಕೆಗೆ  ಸರ್ಕಾರಕ್ಕೆ ನೀಡಿ, ಮಾನವೀಯತೆಗೆ ಶ್ರೀ ಮಠವು ಸಾಕ್ಷಿಯಾಗಿತ್ತು ಎಂದು ಸ್ಮರಿಸಿದರು.


 ಈ ಸಂದರ್ಭದಲ್ಲಿ  ಸ್ಥಳೀಯ ಚುನಾಯಿತ ಪ್ರತಿನಿಧಿಗಳು,  ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ಸಮಾಜಮುಖಿ ಕಾರ್ಯದಲ್ಲಿ ಮಠಮಾನ್ಯಗಳ ಪಾತ್ರ ಹಿರಿದು : ಆರಗ ಜ್ಞಾನೇಂದ್ರ


ರಿಪ್ಪನ್ ಪೇಟೆ :ಸರ್ಕಾರದ ಜೊತೆ ಜೊತೆಯಲ್ಲಿಯೇ  ಸಮಾಜಮುಖಿ ಕಾರ್ಯದಲ್ಲಿ  ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಮಠಮಾನ್ಯಗಳು ಕಾರ್ಯ ನಿರ್ವಹಿಸುತ್ತಿರುವುದು  ಶ್ಲಾಘನೀಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹೊಂಬುಜ  ಜೈನ ಮಠದಲ್ಲಿ  ಜನವರಿ 23 ರಿಂದ 27ರವರೆಗೆ ಪಂಚಕಲ್ಯಾಣ ಪೂಜಾ ಮಹೋತ್ಸವದ ಅಂಗವಾಗಿ ಜೈನ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕೃತಕ ಕಾಲು ಜೋಡಣೆ ಗಾಗಿ ಭಾನುವಾರ ಆಯೋಜಿಸಿದ್ದ ಅಳತೆಯ ಉಚಿತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.




ಮಠದ ಪೀಠಾಧಿಕಾರಿ  ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ
ವರ್ಯ   ಸ್ವಾಮೀಜಿ  ಅವರು ಸಾನಿಧ್ಯ ವಹಿಸಿದ್ದರು.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಸುಮಾರು 72  ಫಲಾನುಭವಿಗಳು  ಆಯ್ಕೆಯಾದರು.

ಪಂಚ ಕಲ್ಯಾಣ ಕಾರ್ಯಕ್ರಮದಲ್ಲಿ ಜನ ಕಲ್ಯಾಣ ಯೋಜನೆಯನ್ನು ಶ್ರೀ ಮಠವು ಆಯೋಜಿಸಿದೆ. ಅಂದು ಆಯ್ಕೆಯಾದ ಫಲಾನುಭವಿಗಳಿಗೆ ಕೃತಕ ಕಾಲು ಅಳವಡಿಕೆ ಮಾಡಲಾಗುವುದು ಎಂದು  ಸಂಘಟಕರು ತಿಳಿಸಿದ್ದಾರೆ.



Leave a Reply

Your email address will not be published. Required fields are marked *