Headlines

ಗರ್ತಿಕೆರೆ ಬಳಿ ಭೀಕರ ಅಪಘಾತ – ಮೀನು ವ್ಯಾಪಾರಿ ಸ್ಥಳದಲ್ಲೇ ಸಾವು|accident

ರಿಪ್ಪನ್‌ಪೇಟೆ : ಗರ್ತಿಕೆರೆ ಕಾಲೇಜು ಸಮೀಪದಲ್ಲಿ ಬೆಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ತಿಕೆರೆ ನಿವಾಸಿ ಮೀನು ವ್ಯಾಪಾರಿ ಕಬೀರ್ ಸಾಬ್ (72) ಎಂಬುವವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.




ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಎಕ್ಸ್ಎಲ್ ಸೂಪರ್ ಬೈಕ್ ನಲ್ಲಿ ಹೊರಟು ನಿಂತಿದ್ದ ಕಬೀರ್ ಸಾಬ್ ಎಂಬುವವರಿಗೆ ಹಿಂಬದಿಯಿಂದ ವೇಗವಾಗಿ ಬಂದ ಬೊಲೆರೋ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಈ ಭೀಕರ ಅಪಘಾತದಲ್ಲಿ ಬೊಲೆರೋ ವಾಹನ ಸಹ ಪಲ್ಟಿಯಾಗಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ.




ಮೀನು ವ್ಯಾಪಾರ ಮಾಡುತಿದ್ದ ಗರ್ತಿಕೆರೆ ಗ್ರಾಮದ ಕಬೀರ್ ಸಾಬ್ ಸ್ಥಳ ದಲಯೇ ಮೃತಪಟ್ಟಿದ್ದು.ಮೃತದೇಹವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿದೆ.

ರಿಪ್ಪನ್‌ಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.