Headlines

ಸಾಗರದ ಮಹಿಳೆಯ ಹೊಟ್ಟೆಯಲ್ಲಿತ್ತು ಬರೋಬ್ಬರಿ ಎಂಟು ಕೆ.ಜಿ ತೂಕದ ಗಡ್ಡೆ…!!!! ಯಶಸ್ವಿಯಾದ ಸಾಗರ ವೈದ್ಯರ ಶಸ್ತ್ರಚಿಕಿತ್ಸೆ

ಸಾಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಬುಧವಾರ 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ 50 ವರ್ಷದ ಮಹಿಳೆ ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಇದೊಂದು ಅಂಡಾಶಯದ ಗಡ್ಡೆಯಾಗಿದ್ದು, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.  ಮಹಿಳೆಯ ಸ್ಥಿತಿ ಸ್ಥಿರವಾಗಿದ್ದು,ಶಸ್ತ್ರಚಿಕಿತ್ಸೆಗೆ ಅರವಳಿಕೆ ತಜ್ಞೆ ಸುಷ್ಮಾ ಪತ್ತಾರ್,ನರ್ಸ್ ಸುವರ್ಣ,ರೋಹಿನಿ ಹಾಗೂ ಚಂದ್ರು  ಸಹಕರಿಸಿದ್ದಾರೆ ಎಂದು ಇದೇ ವೇಳೆ ತಿಳಿಸಿದರು. ಮಹಿಳೆಯ ಪ್ರಾಣ ಉಳಿಸಿದ ಡಾ.ನಾಗೇಂದ್ರಪ್ಪ…

Read More

ಪ್ರಪಂಚದ ಸಕಲ ಜೀವಿಗಳ ಮೇಲೆ ಸೃಷ್ಟಿಕರ್ತನು ದಯೆ ತೋರಲಿ : ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ (ಕೂರತ್ ತಂಙಳ್).

ರಿಪ್ಪನ್ ಪೇಟೆ : ಪ್ರಪಂಚದ ಸಕಲ ಜೀವಿಗಳ ಮೇಲೆ ಸೃಷ್ಟಿಕರ್ತನ ದಯೆ ಇರಲಿ, ಪ್ರಪಂಚಕ್ಕೆ ಅಂಟಿಕೊಂಡಿರುವ ಕೊರೊನಾ ಮಹಾಮಾರಿ ಮುಕ್ತವಾಗಲಿ ಎಂದು ಮುಸ್ಲಿಂ ಧರ್ಮಗುರು ಬಹು|| ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ (ಕೂರತ್ ತಂಙಳ್) ಹೇಳಿದರು. ಇಲ್ಲಿನ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ವತಿಯಿಂದ ಆಯೋಜಿಸಿದ್ದ ನೂತನ ಉಳೂಖಾನ ಶಿಲಾನ್ಯಾಸ,ಮಹಿಳಾ ಷರಿಯತ್ ಕಾಲೇಜು ಮತ್ತು ಪ್ರತ್ಯೇಕ ಮಹಿಳಾ ನಮಾಜ್ ಕೊಠಡಿ ಉದ್ಘಾಟನೆಯನ್ನು ನೆರವೇರಿಸಿದ ಅವರು 2019 ರಿಂದ ಇಡೀ ಜಗತ್ತನ್ನೆ ತಲ್ಲಣಗೊಳಿಸಿದಂತಹ ಕೊರೊನಾ ಮಹಾಸೋಂಕು ಲಕ್ಷಾಂತರ…

Read More

ಹೊಸನಗರದಲ್ಲಿ 15 -16ನೇ ಶತಮಾನದ ಪ್ರಾಚ್ಯಾವಶೇಷಗಳು ಪತ್ತೆ :

ಹೊಸನಗರ: ಇತ್ತೀಚಿಗೆ ಇತಿಹಾಸ ಸಂಶೋಧಕರಾದ ನವೀನ್ ಜಿ ಆಚಾರ್ಯ ವರಕೋಡು ಅವರು ಗಂಗನಕೊಪ್ಪ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ನಡೆಸಿದಾಗ ಪ್ರಾಇತಿಹಾಸ ಹಾಗೂ 15-16ನೇ ಶತಮಾನಕ್ಕೆ ಸೇರಿದ ಪ್ರಾಚ್ಯಾವಶೇಷಗಳು ಪತ್ತೆಯಾಗಿದೆ.  ಗಂಗನಕೊಪ್ಪ ಗ್ರಾಮದ ಹೊರವಲಯದಲ್ಲಿ ಹರಿಯುವ ಕಲ್ಲುಹಳ್ಳ ಹೊಳೆಯ ಬಲದಂಡೆಯ ಮೇಲೆ ಸುಪ್ರಕಾಶ ಎಂಬುವವರು ತಮ್ಮ ತೋಟದಲ್ಲಿ ಸಸಿಗಳನ್ನು ನೆಡಿಸಲು ಗುಣಿಗಳನ್ನು ತೆಗೆಯುವ ಸಂಧರ್ಭದಲ್ಲಿ ಪ್ರಾಗೈತಿಹಾಸ ಹಾಗೂ 15-16ನೇ ಶತಮಾನಕ್ಕೆ ಸಂಬಂಧಿಸಿದ ಅನೇಕ ಅವಶೇಷಗಳು ಲಭ್ಯವಾಗಿದೆ.  ಅವುಗಳಲ್ಲಿ ಮುಖ್ಯವಾದವುಗಳೆಂದರೆ ಇತಿಹಾಸ ಕಾಲದ ನವಶಿಲಾಯುಗಕ್ಕೆ ಸಂಬಂಧಿಸಿದ ರಿಂಗ್‌ಸ್ಟೋನ್, ಪ್ರಾಗೈತಿಹಾಸ ಕಾಲಕ್ಕೆ…

Read More

ಶಿವಮೊಗ್ಗ ಸಮೀಪದ ಸಕ್ರೆಬೈಲಿನಲ್ಲಿ ಧಗಧಗನೆ ಹೊತ್ತಿ ಉರಿದ ಕಾರು :

ಶಿವಮೊಗ್ಗದ ಸಕ್ರೆಬೈಲು ಬಳಿ ಸ್ಕೋಡಾ ಕಂಪನಿಯ ಕಾರೊಂದು ಧಗಧಗ ಹೊತ್ತಿ ಉರಿದಿದೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಕಾರು ವೇಗವಿದ್ದ ಕಾರಣ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಕಾರಿಗೆ ಬೆಂಕಿ ಹತ್ತಿಕೊಂಡು ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿ ಮೂವರು ಪ್ರಯಾಣಿಸಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದಾರೆ.  ಹೆಚ್ಚಿನ ಮಾಹಿತಿ ಇನ್ನಷ್ಟು ಬರಬೇಕಾಗಿದೆ. ವರದಿ : ಮಂಜುನಾಥ್ ಶೆಟ್ಟಿ ಶಿವಮೊಗ್ಗ

Read More

ಅಕ್ರಮ ಮರಳು ಗಣಿಗಾರಿಕೆಯ ವಿರುದ್ದ ಭೂ ವಿಜ್ಞಾನ ಇಲಾಖೆಯಿಂದ ಕ್ಷಿಪ್ರ ಕಾರ್ಯಾಚರಣೆ : ಎರಡು ಲಾರಿ,ಎರಡು ಜೆಸಿಬಿ ವಶಕ್ಕೆ..!!

ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಕಲ್ಲು ಗಣಿಗಾರಿಕೆಗಳು ತಾರಕಕ್ಕೇರಿದ್ದು ಅದರಂತೆ ಶಿವಮೊಗ್ಗದ ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ನವೀನ್ ವಿ.ಎಸ್ ನೇತೃತ್ವದ ತಂಡ ನಂಜವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ತುಂಬಿದ ಎರಡು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಹಾಗೇಯೆ ಆನಂದಪುರದಲ್ಲಿ ಅಕ್ರಮ ಜಂಬಿಟ್ಟಿಗೆ ನಡೆಸುತ್ತಿದ್ದ ಗಣಿಗಾರಿಕೆಗೆ ನುಗ್ಗಿ ಅಕ್ರಮಕ್ಕೆ ಬಳಸಿದ್ದ ಎರಡು ಜೆಸಿಬಿ ವಶ ಪಡಿಸಿಕೊಂಡು ಒಟ್ಟು ಎರಡು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಕ್ರಮ ಮರಳು ಮಾಫ಼ಿಯಾ ನಡೆಸುವವರಿಗೆ ಎಚ್ಚರಿಕೆ: ಹೊಸನಗರ ತಾಲ್ಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ…

Read More

ಶಿವಮೊಗ್ಗದ ಗೌಸಿಯಾ ಹೋಟೆಲ್ ನಲ್ಲಿ ಮಾರಾಮಾರಿ :

ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ   ಗೌಸಿಯಾ ಹೋಟೆಲ್ ನಲ್ಲಿ ಗ್ಯಾಂಗ್ ವಾರ್ ಮಾರಾಮಾರಿ ನಡೆದಿದೆ. ರಿಯಲ್ ಎಸ್ಟೇಟ್ ನ ಹಣದ ವಿಚಾರದಲ್ಲಿ ಯುವಕರ ನಡುವೆಯೇ ಭರ್ಜರಿ ಕಾಳಗವೇ ನಡೆದಿದೆ ಶಿವಮೊಗ್ಗದ ಬಹುತೇಕ ಮಂದಿಗೆ ಈ ಗೌಸಿಯಾ ಹೋಟೆಲ್ ನೆನಪಿರಬಹುದು, ಹೋಗಲಿ ಮಾಲೀಕ  ಮನ್ಸೂರ್ ನೆನಪಿರಬಹುದು. ಹೋಗಲಿ ಅಸಲಿ ಫ್ಲಾಶ್ ಬ್ಯಾಕ್ ಹೇಳಬಿಡುತ್ತೇನೆ. ಬುಡಬುಡಕಿ ಸಾಧಿಕ್ ನ ಮರ್ಡರ್ ಪ್ರಕರಣದಲ್ಲಿ ಅರೊಪಿಯಾಗಿ ಜೈಲಿನಲ್ಲಿರುವ ಮನ್ಸೂರೇ ಈ ಹೋಟೆಲ್ ನ ಮಾಲೀಕ. ಬುಡಬುಡಕಿ ಸಾಧಿಕ್ ನ ಕೊಲೆಯೂ ಇದೇ ರಿಯಲ್ ಎಸ್ಟೇಟ್…

Read More

ಪೋಸ್ಟ್ ಮ್ಯಾನ್ ನ್ಯೂಸ್ ವರದಿಗೆ ಬೆಚ್ಚಿಬಿದ್ದ ಮರಳು ಮಾಫಿಯಾದವರು……! ಮರಳು ಸಂಗ್ರಹಿಸುವ ಪರಿಕರಗಳೊಂದಿಗೆ ಗವಟೂರು ಹೊಳೆಯ ದಡದಿಂದ ಎಸ್ಕೇಪ್ …!

ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಶರ್ಮಿಣ್ಯಾವತಿ ನದಿಯ (ಗವಟೂರು ಹೊಳೆ) ದಡದಲ್ಲಿ ಲಕ್ಷಾಂತರ ರೂಪಾಯಿ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮರಳು ಮಾಫಿಯಾದ ವಿರುದ್ಧ ಭಾನುವಾರ ಪೋಸ್ಟ್ ಮ್ಯಾನ್ ವರದಿ ಮಾಡಿತ್ತು. ಇದನ್ನು ಗಮನಿಸಿದ ಮರಳು ಮಾಫಿಯಾದವರು ಹಾಗೂ ಮರಳು ದಂಧೆಕೋರರು ಮರಳು ಸಂಗ್ರಹಣೆಗಾಗಿ ತಂದಿಟ್ಟಿದ್ದ ಪರಿಕರಗಳನ್ನು ತೆಗೆದುಕೊಂಡು ಕೆಲಸಗಾರರೊಂದಿಗೆ ಎಸ್ಕೇಪ್  ಆಗಿದ್ದಾರೆ. ರಿಪ್ಪನ್ ಪೇಟೆಯಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿರುವ ಗವಟೂರು ಹೊಳೆಯಲ್ಲಿ ಮರಳು ಮಾಫಿಯಾದವರು ಮರಳು ಸಂಗ್ರಹ ಮಾಡುತ್ತಿರುವ ವಿಷಯ ಕಂದಾಯ,ಅರಣ್ಯ, ಪೊಲೀಸ್,ಭೂ…

Read More

ಎತ್ತುಗಳ ಮೈ ತೊಳೆಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು:

ಹೊಸನಗರ: ತಾಲೂಕಿನ ನಗರ ವ್ಯಾಪ್ತಿಯ ಬೇಳೂರು ಸಮೀಪದ ಹೆಣ್ಣೆಬೈಲಿನ ಶರಾವತಿ ಹಿನ್ನೀರಿನಲ್ಲಿ ಎತ್ತುಗಳ ಮೈತೊಳೆಯಲು ಹೋದ ವ್ಯಕ್ತಿಯೋರ್ವ ನೀರುಪಾಲಾದ ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ಬೇಳೂರು ಗ್ರಾಮದ ಸುರೇಶ್ (48) ಎಂದು ಗುರುತಿಸಲಾಗಿದೆ. ಜ.14 ರಂದು ಈತನು ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಎತ್ತುಗಳ ಮೈತೊಳೆಯುವ ಸಲುವಾಗಿ ಶರಾವತಿ ಹಿನ್ನೀರು ಪ್ರದೇಶಕ್ಕೆ ಬಂದಾಗ ಈ ಘಟನೆ ನಡೆದಿದೆ. ಗ್ಯಾಂಗ್ರಿನ್ ನಿಂದಾಗಿ ಮೃತ ಸುರೇಶ್ ಅವರ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿತ್ತು. ಹೀಗಾಗಿ ನೀರಿನಲ್ಲಿ ಬಿದ್ದ ಅವರಿಗೆ ಮೇಲೆ…

Read More

ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ ಇಡೀ ಶಂಕರಘಟ್ಟ ಗ್ರಾಮ ಸೀಲ್ ಡೌನ್ :

ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಸೋಮವಾರ ಇಡೀ ಗ್ರಾಮವನ್ನು ‘ಕಂಟೈನ್‌ಮೆಂಟ್ ಜೋನ್’ ಎಂದು ಘೋಷಿಸಿ ಆದೇಶ ಹೊರಡಿಸಿದ್ದಾರೆ. ಶಂಕರಘಟ್ಟ ಗ್ರಾಮಕ್ಕೆ ಒಳಪಡಿಸುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಒಟ್ಟು ೨೪ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಿ.ಪಿ ವೀರಭದ್ರಪ್ಪ ೫ ದಿನಗಳ ಕಾಲ ರಜೆ ಘೋಷಿಸಿದ್ದರು. ಈ ನಡುವೆ ಇದೀಗ ತಹಸೀಲ್ದಾರ್‌ರವರು ಸರ್ಕಾರದ ಮಾರ್ಗಸೂಚಿಯಂತೆ…

Read More

ವಿದ್ಯಾರ್ಥಿಗಳಿಗೆ ಹೆಚ್ಚುತ್ತಿರುವ ಕೊರೊನಾ ಸೋಂಕು : ರಿಪ್ಪನ್ ಪೇಟೆಯ ಸರಕಾರಿ ಪದವಿ ಹಾಗೂ ಪಿಯು ಕಾಲೇಜು ಸೀಲ್ ಡೌನ್……!

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸನಗರ ತಾಲೂಕು ದಂಡಾಧಿಕಾರಿಗಳ ಆದೇಶದ ಮೇರೆಗೆ  ರಿಪ್ಪನ್ ಪೇಟೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಎರಡು ಕಾಲೇಜುಗಳನ್ನು ಸೀಲ್ ಡೌನ್ ಮಾಡಿದ್ದಾರೆ.  ಕಳೆದ ಒಂದು ವಾರದಲ್ಲಿ ಪದವಿ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಹಾಗೂ ಪದವಿಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಕೊರೊನಾ  ಸೋಂಕು  ತಗಲಿದ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ಸೀಲ್ ಡೌನ್ ಮಾಡಲಾಗಿದೆ….

Read More