ದನಗಳ ಮೈ ತೊಳೆಸಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೊರಬ ತಾಲೂಕಿನ ಮುಟುಗುಪ್ಪೆ ಸಮೀಪದ ಬಂದಿಗೆ ಗ್ರಾಮದ ಹೊಳೆಯಲ್ಲಿ ದನಗಳಿಗೆ ಮೈ ತೊಳೆಸಲು ಹೋಗಿ ಆಕಸ್ಮಿಕವಾಗಿ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
ಬಂದಿಗೆ ಗ್ರಾಮದ ಪುನೀತ್ ಕುಮಾರ್ (23) ಮೃತ ದುರ್ಧೈವಿ.
ಇಂದು ಬೆಳಗ್ಗೆ ದನಗಳಿಗೆ ಮೈ ತೊಳಿಸಲು ತಮ್ಮ ಜಮೀನಿನ ಹತ್ತಿರವಿರುವ ಜಮೀನಿನ ಹೊಳೆಗೆ ಹೋಗಿದ್ದಾರೆ.ಆದರೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ತಕ್ಷಣ ಅಗ್ನಿಶಾಮಕ ದಳದವರು ತಳಕ್ಕೆ ಧಾವಿಸಿ ಯುವಕನಿಗಾಗಿ ಪರಿಶೋಧನೆ ನಡೆಸಿದ್ದಾರೆ. ದುರದೃಷ್ಟವಶಾತ್ ಯುವಕ ಸಾವನ್ನಪ್ಪಿದ್ದು ಮಧ್ಯಾಹ್ನದ ವೇಳೆಗೆ ಪುನೀತ್ ರವರ ಮೃತ ದೇಹವನ್ನು ಅಗ್ನಿಶಾಮಕ ದಳದವರು ಹೊರ ತೆಗೆದಿದ್ದಾರೆ.