ರಿಪ್ಪನ್‌ಪೇಟೆ : ಇಂದಿನ ವಿದ್ಯಾರ್ಥಿಗಳು ಕೀಳರೀಮೆಯನ್ನು ಬಿಟ್ಟು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಹಳ್ಳಿಯ ವಿದ್ಯಾರ್ಥಿಗಳು ಪಟ್ಟಣದ ಮತ್ತು ಶ್ರೀಮಂತರ ಹಾಗೂ ಕಾನ್ವಂಟ್ ಮಕ್ಕಳ ಮುಂದೆ ಕೀಳರೀಮೆಯಿಂದ ನಡೆದುಕೊಳ್ಳದೇ ಕಠಿಣ ಶ್ರಮ ವಹಿಸಿ ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ವ್ಯಕ್ತಿತ್ವದ ವಿದ್ಯಾರ್ಥಿಯಾಗಲು ಸಾಧ್ಯವಾಗುವುದೆಂದ ಅವರು ಕಲಿತ ಶಾಲೆಗಳ ಬಗ್ಗೆ ಭಕ್ತಿ ಶ್ರದ್ದೆಯಿಂದ ಇದ್ದಾಗ ಮಾತ್ರ ವಿದ್ಯಾರ್ಥಿ ಭವಿಷ್ಯ ಉಜ್ವಲವಾಗಲು ಸಾಧ್ಯವೆಂದರು.
ಪ್ರಥಮದರ್ಜೆ ಕಾಲೇಜ್ ಪ್ರಾಚಾರ್ಯ ಪ್ರೋ.ಟಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂಧರ್ಭದಲ್ಲಿ ಕಾಲೇಜಿನ ನೂತನ ಜಿಮ್ ವಿಭಾಗವನ್ನು ಶಾಸಕರು ಉದ್ಘಾಟಿಸಿದರು. ನಂತರ ಸಿಡಿಸಿ ಸಭೆಯಲ್ಲಿ ಪಾಲ್ಗೊಂಡರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ಮಂಜುಳ ಕೇತಾರ್ಜಿರಾವ್,ಉಪಾಧ್ಯಕ್ಷೆ ಮಹಾಲಕ್ಷಿö್ಮ, ಸಿಡಿಸಿ ಸದಸ್ಯರಾದ ಎ.ಟಿ.ನಾಗರತ್ನ,ಎಂ.ಬಿ.ಮಂಜುನಾಥ, ಜಿ.ಎಂ ದುಂಡರಾಜ್‌ಗೌಡ,ಆರ್.ಟಿ.ಗೋಪಾಲ,ಕೃಷ್ಣಮೂರ್ತಿ ಜಾನಕಮ್ಮ,ಕೇತಾರ್ಜಿರಾವ್,ಮೆಣಸೆ ಅನಂದ ಇನ್ನಿತರರು ಹಾಜರಿದ್ದರು.
ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಿರೇಮಣಿ ನಾಯಕ್, ವಿಶೇಷ ಉಪನ್ಯಾಸ ನೀಡಿದರು.
ಕಾಲೇಜ್ ದೈಹಿಕ ಶಿಕ್ಷಕ ಕುಮಾರಸ್ವಾಮಿ ಸ್ವಾಗತಿಸಿದರು,ವಿದ್ಯಾರ್ಥಿಗಳಾದ ಸ್ಪಂದನಾ,ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಪತಿ ಹಳಗುಂದ ವಂದಿಸಿದರು.