H D ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲೆಂದು ವರಸಿದ್ದಿ ವಿನಾಯಕನಲ್ಲಿ ಸಂಕಲ್ಪ ಪೂಜೆ :|jds

ರಿಪ್ಪನ್‌ಪೇಟೆ : ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ಮೊತ್ತೊಮ್ಮ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಅವರ ಹುಟ್ಟುಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳು ಕಾರ್ಯಕರ್ತರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಸಂಕಲ್ಪ ಪೂಜೆ ನೆರವೇರಿಸಿದರು.

ಸಂಕಲ್ಪ ಪೂಜೆಯ ನಂತರ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಯೋಜನೆ ಸೇರಿದಂತೆ ಹತ್ತು ಹಲವು ಜನಹಿತ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವುದರೊಂದಿಗೆ ಜನಾನುರಾಗಿಯಾಗಿದ್ದು ಇವರಿಗೆ ಇನ್ನೊಮ್ಮ ರಾಜ್ಯದ ಮತದಾರರು ಬೆಂಬಲಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಯಾಗುವುದೆಂದು ಹೇಳಿ ಈಗಾಗಲೇ ರಾಜ್ಯವ್ಯಾಪಿ ಜೆಡಿಎಸ್ ಪಕ್ಷಕ್ಕೆ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ ಈ ಭಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವುದು ನಿಶ್ಚಿತವೆಂದರು.

ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್,ಜಿಲ್ಲಾ ಜೆಡಿಎಸ್ ಮುಖಂಡರಾದ ಆರ್.ಎನ್.ಮಂಜುನಾಥ,ಕಲ್ಲೂರು ಈರಪ್ಪ,ರಾಮದಾಸ್‌ನಾಯ್ಕ್,ಮೊಹಿದ್ದೀನ್,ರಾಧಾಕೃಷ್ಣ, ಆರ್.ರಂಗಸ್ವಾಮಿ,ಮೋಹನ್,ಇನ್ನಿತರ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *