ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹರತಾಳು ಗ್ರಾಮದ ನಿವಾಸಿ ರೈತ ಶೇಷಗಿರಿ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ ಆದರೆ ಈ ದುರ್ಮರಣಕ್ಕೆ ನೇರವಾಗಿ ಮೆಸ್ಕಾಂ ಇಲಾಖೆಯ ಬಿಳಿಯಾನೆಯಂತಹ ಜಡ್ಡು ಹಿಡಿದ ಅಧಿಕಾರಿಗಳು ಹಾಗೂ ಕೆಲ ಸೋಮಾರಿ ಸಿಬ್ಬಂದಿಗಳೇ ನೇರ ಹೊಣೆ.
ಇಂದು ಬೆಳಿಗ್ಗೆ ಶೇಷಗಿರಿ ಮೂರು ಬಾರಿ ಕರೆ ಮಾಡಿ ನೀಡಿದ್ದ ದೂರನ್ನು ಮನ್ನಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಲ್ಲಿ ಒಬ್ಬ ಅಮಾಯಕ ರೈತನ ಜೀವ ಉಳಿಸಬಹುದಿತ್ತಲ್ಲವೇ,ವಿದ್ಯುತ್ ತಂತಿ ನೆಲದ ಮೇಲೆ ಬಿದ್ದರೂ fuse ಯಾಕೆ ಕೆಲಸ ನಿರ್ವಹಿಸಿಲ್ಲ..???? ಅದು ಸೋಮಾರಿ ಸಿಬ್ಬಂದಿಗಳ Fuse ಮಾಫ಼ಿಯಾ!!!!!
ಆಗಸ್ಟ್ 28 ರಂದು ಬೆಳ್ಳೂರು ಗ್ರಾಮದ ರೈತನೊಬ್ಬ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದ,ಇಂದು ಹರತಾಳಿನಲ್ಲಿ ಹೆಂಡತಿ ಮಕ್ಕಳ ಕಣ್ಣೆದುರಲ್ಲೇ ಇನ್ನೂಬ್ಬ ರೈತ ಶೇಷಗಿರಿ ಮೃತಪಟ್ಟಿದ್ದಾರೆ.ಇನ್ನೇಷ್ಟು ಜೀವ ಬಲಿ ಬೇಕು…????
ಇಲಾಖೆ ವತಿಯಿಂದ ಆ ಕುಟುಂಬಕ್ಕೆ ಪರಿಹಾರ ಕೊಡಬಹುದು ಆದರೆ ಆ ಮಕ್ಕಳಿಗೆ ತಂದೆಯನ್ನು, ಹೆಂಡತಿಗೆ ಪತಿಯನ್ನು ಹಿಂದಿರುಗಿಸಲು ಸಾಧ್ಯವೇ…???ನಿಮ್ಮ ಆತ್ಮ ಸಾಕ್ಷಿಯನ್ನು ಒಮ್ಮೆ ಕೇಳಿಕೊಳ್ಳಿ..
ಇಲಾಖೆಗಳಲ್ಲಿಯೇ ದಕ್ಷ ಇಲಾಖೆ ಮೆಸ್ಕಾಂ ಇಲಾಖೆ ಅದರ ಬಗ್ಗೆ ಎರಡು ಮಾತಿಲ್ಲ ಆದರೆ ಕೆಲವೇ ಕೆಲವು ಸೋಮಾರಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಅತ್ಯುತ್ತಮ ಇಲಾಖೆಗೆ ಕಪ್ಪುಚುಕ್ಕೆ, ಇನ್ನೂ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಗ್ರಾಮೀಣ ಭಾಗದ ಜನ ಇಲಾಖೆಯ ವಿರುದ್ದ ತೀವ್ರವಾಗಿ ಪ್ರತಿಭಟಿಸುವ ದಿನ ದೂರವಿಲ್ಲ…
ಮೆಸ್ಕಾಂ ಇಲಾಖೆ ಮೂರು ಎಡವಟ್ಟುಗಳು :
FUSE ಮಾಫಿಯಾ
ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, Fuse ಒಂದು ಕನಿಷ್ಠವಾಗಿ ಇರಬೇಕಾದ ಸುರಕ್ಷಾ ಉಪಕರಣ. ದೋಷದ ಸಂದರ್ಭದಲ್ಲಿ, ವಿದ್ಯುತ್ ಮಂಡಲ ಹಾಗೂ ಬಳಕೆದಾರರ ರಕ್ಷಣೆಗಾಗಿ ವಿದ್ಯುತ್ ಸಂಪರ್ಕ ತಾನಾಗಿಯೇ ಕಡಿತಗೊಳ್ಳಬೇಕು.ಯಾವುದೇ ಸಲಕರಣೆ ಸುಟ್ಟು ಹೋದರೂ ವಿದ್ಯುತ್ ಹರಿವು ನಿಲ್ಲುತ್ತದೆ,ಆದ್ದರಿಂದ ಯಾವುದೇ ಉಪಕರಣ ಸುಟ್ಟು ಹೋಗುವುದಕ್ಕಿಂತ ಮೊದಲು ಫ್ಯೂಸ್ ಸುಡುತ್ತದೆ. ಫ್ಯೂಸ್ ತಂತಿಯನ್ನು ಸೀಸ ಮತ್ತು ಸತುಗಳ ಮಿಶ್ರಲೋಹದಿಂದ ಮಾಡಿರುತ್ತಾರೆ. ಅದು ಕಡಿಮೆ ಶಾಖದಲ್ಲಿ ಕರಗುತ್ತದೆ.ಫ್ಯೂಸ್ ಹೋಯಿತು ಅಂದರೆ ಅಧಿಕ ವಿದ್ಯುತ್ ಪ್ರವಹಿಸಿದೆ ಅಥವಾ ಶಾರ್ಟ್ ಆಗಿದೆ ಎಂದರ್ಥ.
ಕೆಲವೊಮ್ಮೆ ಪದೇ ಪದೇ ಫ್ಯೂಸ್ ಹೋಗುವುದನ್ನು ತಪ್ಪಿಸಲು,ಕೆಲವು ಸೋಮಾರಿ ಸಿಬ್ಬಂದಿಗಳು ದಪ್ಪನೆಯ ತಾಮ್ರದ ತಂತಿಯನ್ನು ಉಪಯೋಗಿಸುತ್ತಾರೆ. ಅದು ತುಂಬಾ ಅಪಾಯಕಾರಿ.
ಕೂಡಲೇ ಮೆಸ್ಕಾಂ ಇಲಾಖೆಯ ಅಧಿಕಾರಿಗಳ ತಂಡ ಕೆಲವು ಸೋಮಾರಿ ಸಿಬ್ಬಂದಿಗಳು ಮಾಡಿರುವ Fuse ಎಡವಟ್ಟನ್ನು ಸರಿಪಡಿಸಬೇಕಾಗಿದೆ.ಒಂದು ವೇಳೆ fuse ಸರಿಯಾದ ಕಾರ್ಯ ನಿರ್ವಹಿಸಿದ್ದಲ್ಲಿ ಇಂದು ಹರತಾಳು ಗ್ರಾಮದ ರೈತ ಶೇಷಗಿರಿ ಬಲಿಯಾಗುತ್ತಿರಲಿಲ್ಲ.
ಹಳೆಯ ತಂತಿಗಳು:
ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹಳೆಯ ವಿದ್ಯುತ್ ತಂತಿಗಳು ಕಡಿದು ಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಇವನ್ನು ಬದಲಾಯಿಸದೇ ಇದ್ದಲ್ಲಿ ಹರತಾಳು ಗ್ರಾಮದ ರೈತ ಶೇಷಗಿರಿ ಸಾವನ್ನಪ್ಪಿದಂತೆ ಮತ್ತಷ್ಟು ಅನಾಹುತಗಳು ಸಂಭವಿಸಬಹುದು.
ಲೈನ್ ಮ್ಯಾನ್ ಗಳು ಕಾರ್ಯ ಕ್ಷೇತ್ರದಲ್ಲಿ ಇರದೇ ಇರುವುದು
ಹಳ್ಳಿ ಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಮೆಸ್ಕಾಂ ಸಿಬ್ಬಂದಿಗಳು ಕಾರ್ಯಕ್ಷೇತ್ರಕ್ಕಿಂತ ದೂರದಲ್ಲಿ ಮನೆ ಮಾಡಿರುವುದರಿಂದ ಕೆಲ ಸಮಯದಲ್ಲಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಕಷ್ಟಕರವಾಗಿರುವುದರಿಂದ ಕಾರ್ಯಕ್ಷೇತ್ರದಲ್ಲೆ ಇರುವಂತೆ ನಿಯೋಜಿಸುವುದರಿಂದ ಮುಂದಾಗುವ ಅಪಘಾತ ತಡೆಯಬಹುದಾಗಿದೆ.
ಒಟ್ಟಾರೆಯಾಗಿ ಹಗಲಿರುಳು ಶ್ರಮಿಸುವ ಮೆಸ್ಕಾಂ ಲೈನ್ ಮ್ಯಾನ್ ಮತ್ತು ಸಿಬ್ಬಂದಿಗಳು ದಿನದ 24 ಗಂಟೆಯು ರೈತರ ,ಜನಸಾಮಾನ್ಯರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಅವರ ಬಗ್ಗೆ ಅಪಾರ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಕೆಲ ಸೋಂಬೇರಿ ಸಿಬ್ಬಂದಿ ಹಾಗೂ ಜಡ್ಡುಗಟ್ಟಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಾಗಿದೆ.
ರೈತರು,ಶ್ರಮಿಕರು, ಜನಸಾಮಾನ್ಯರು ಕಟ್ಟಬೇಕಾದ ಅಲ್ಪಸ್ವಲ್ಪ ವಿದ್ಯುತ್ ಬಾಕಿ ಹಣವನ್ನು ದರ್ಪದಿಂದ ಗೂ…. ತಂಡದ ಮೂಲಕ ವಸೂಲಿ ಮಾಡಿಸುವ ಅಧಿಕಾರಿಗಳಿಗೆ ಇರುವ ಕಾರ್ಯಕ್ಷಮತೆ, ಸಮರ್ಪಕ ನಿರ್ವಹಣೆ ಮಾಡವಾಗ ಯಾಕಿಲ್ಲ ಎಂಬುವುದೇ ಯಕ್ಷಪ್ರಶ್ನೆ………….?????
……….ನೋವಿನಿಂದ ಪೋಸ್ಟ್ ಮ್ಯಾನ್ ನ್ಯೂಸ್