ಅಧಿಕಾರಕ್ಕಿಂತ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯೇ ನನ್ನ ಮೊದಲ ಆದ್ಯತೆ – ಆರ್ ಎನ್ ಮಂಜುನಾಥ್ ಗೌಡ|RMM

ತೀರ್ಥಹಳ್ಳಿ : ಸಹಕಾರಿ ಕ್ಷೇತ್ರದಲ್ಲಿ ಮಂಜುನಾಥ್ ಗೌಡರ ಇನ್ನಿಂಗ್ಸ್ ಮುಗಿತು ಮಂಜುನಾಥ್ ಗೌಡರನ್ನು ಮುಗಿಸಿ ಬಿಟ್ವಿ ಅಂತ ಬಹಳ ಜನ ಎಂದು ಕೊಳ್ಳುತ್ತಾರೆ ಕನಸು ಕಾಣುತ್ತಾರೆ. ನಾವು ಕನಸು ಕಂಡರೆ ನನಸು ಆಗುವಂತಹ ಕನಸು ಕಾಣಬೇಕು.  ಡಿಸಿಸಿ ಅಥವಾ ಯಾವುದೇ ಸೊಸೈಟಿಯಲ್ಲಿ ಭಾಗಿಯಾಗಬೇಕಾದರೆ ಶಿವಮೊಗ್ಗದ ಟಿಎಪಿಸಿಎಂಎಸ್ ಅಲ್ಲಿ ಗೆದ್ದರೆ ಮಾತ್ರ. ಆದ್ದರಿಂದ ಅಲ್ಲಿ ಸೋಲಿಸಬೇಕೆಂದು ನಮ್ಮ ವಿರೋಧ ಪಕ್ಷದವರ ಆಸೆಗೆ ಅಲ್ಲಿನ ಜನರು ಸುಳ್ಳು ಮಾಡಿ ನನನ್ನು ಗೆಲ್ಲಿಸಿದರು. ಅಲ್ಲಿನ ಗೆಲುವಿನ ಮೂಲಕ  ಅಲ್ಲಿಂದ ನನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡಿಸಿದ್ದಾರೆ. ನನಗೆ ಶಾಸಕನಾಗಬೇಕು ಎಂಬ ಆಸೆ ಇದ್ದರೂ ಪಕ್ಷ ಬೆಳೆಯಬೇಕು ಎಂಬುದು ನನ್ನ ಆಸೆ ಎಂದು ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ್ ಗೌಡ ಹೇಳಿದರು.

ಸಹಕಾರ ವಿಭಾಗದ ವತಿಯಿಂದ ಸೋಮವಾರ  ಪಟ್ಟಣದ ಆರ್ಯ ಈಡಿಗರ ಸಭಾ ಭವನದಲ್ಲಿ  ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದಾಗ ಆಗಿನ ಸರ್ಕಾರದ ಸಹಕಾರ ಸಚಿವರಾಗಿದ್ದ ಡಿ ಕೆ ಶಿವಕುಮಾರ್ ಶಿವಮೊಗ್ಗದಲ್ಲಿ ಸಭೆ ನೆಡೆಸಿ 15% ಇದ್ದಂತಹ ಬಡ್ಡಿಯನ್ನು 11% ಗೆ ಇಳಿಸಿದವರು ಡಿಕೆಶಿ.  ಡಿ ಕೆ ಶಿವಕುಮಾರ್ ಎಂದರೆ ಹಲವರಿಗೆ ಅವರು ಒಂದು ರೀತಿಯ ಒರಟು ಸ್ವಲ್ಪ ದುರಹಂಕಾರಿ, ಆದರೆ ಅವರಲ್ಲಿ ಇರುವಂತಹ ಕತೃತ್ವದ ಶಕ್ತಿ, ಅವರೊಬ್ಬ ಸಾಧಾರಣ ಮನುಷ್ಯ ಅಲ್ಲ. ಡಿಕೆ ಶಿವಕುಮಾರ್ ಅವರು ಕಳೆದ ಬಾರಿ ವಿದ್ಯುತ್ ಸಚಿವರಾದಾಗ ಬಹಳ ದೊಡ್ಡ ಕೆಲಸವನ್ನು ಮಾಡಿದ್ದಾರೆ. ಈ ರಾಜ್ಯಕ್ಕೆ ಬಂದಂತಹ ದೊಡ್ಡ ವಿದ್ಯುತ್ ಕ್ಷಾಮವನ್ನು ಬಗೆಹರಿಸಿದ್ದಾರೆ.ಡಿಕೆ ಶಿವಕುಮಾರ್ ರವರಿಗೆ ನನ್ನ ಬಗ್ಗೆ ಬಹಳ ಪ್ರೀತಿ ಇದೆ ಎಂದರು.


ಇವತ್ತು ಸಾವಿರಾರು ಎಕರೆ ಅಡಿಕೆ ತೋಟ ಹಾಳಾಗುತ್ತಿದೆ. ಇವರುಔಷಧಿ ನೀಡಿದ್ದೀವಿ ಎನ್ನುತ್ತಾರೆ ಆದರೆ ಅದು ಯಾರಿಗೂ ತಲುಪಿಲ್ಲ.
ನಮ್ಮ ಅಕ್ಕ ಶೋಭಕ್ಕ ನಮ್ಮ ಅಣ್ಣ ಜ್ಞಾನೇಂದ್ರಣ್ಣ  ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಂಡರೆ ಯಾವುದೇ ತೊಂದರೆ ಇಲ್ಲ ಎಂದು ಹೇಳುತ್ತಾರೆ. ರೈತರ ಕಷ್ಟ ಇವರಿಗೆ ಹೇಗೆ ಅರ್ಥವಾಗುತ್ತೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೊಳೆರೋಗಕ್ಕೆ 85 ಕೋಟಿ ಪರಿಹಾರ ನೀಡಿದ್ದರು ಎಂದರು.

ಬಿಜೆಪಿ ಒಂದು ಸುಳ್ಳಿನ ಪಕ್ಷ. ದೇಶವನ್ನು ಒಡೆದು ಆಳುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಿಡಲು ಎಷ್ಟು ಜನ ನಿಂತಿದ್ದಾರೆ ಎಂದು ನನಗೆ ಗೊತ್ತಿದೆ. ನಮ್ಮ ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತದೆಯೋ ಗೊತ್ತಿಲ್ಲ. ನನಗೆ ಧೈರ್ಯ ಇದೆ ಈ ಬಾರಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದಿಂದ ಮಾತನಾಡಿದರು 



ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ ಇದು ಒಂದು ಉತ್ತಮವಾದ ಸಮಾರಂಭ ಬಿ. ಕೆ ಹರಿಪ್ರಸಾದ್ ರವರು ತುರ್ತು ಕೆಲಸದ ನಿಮಿತ್ತ ದೆಹಲಿಗೆ ಹೋಗಿರುತ್ತಾರೆ. ಬಂಗಾರಪ್ಪನವರ ಗರಡಿಯಲ್ಲಿದ್ದ ಸಮಯದಿಂದ ನಾನು ಮತ್ತು ಮಂಜುನಾಥ ಗೌಡರು ಒಟ್ಟಾಗಿ ಇದ್ದೇವೆ. ನಾನು ಶಾಸಕನಾದೆ ಆದರೆ ಅವರಿಗೆ ಆಗಲಿಲ್ಲ. ಆದರೆ ಸಹಕಾರಿ ಕ್ಷೇತ್ರದಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಹಕಾರಿ ಕ್ಷೇತ್ರ ಅವರ ಕೈ ಹಿಡಿದಿದೆ. ಸಹಕಾರಿ ಕ್ಷೇತ್ರದಲ್ಲಿ ಎಲ್ಲಾ ವಿಭಾಗದಲ್ಲೂ ನಾಯಕರಾಗಿ ಬೆಳೆದಿದ್ದಾರೆ. ಯಾವ ರೈತ ಸಮಾಜ ಡಿಸಿಸಿ ಬ್ಯಾಂಕಿಗೆ ಹೋದರೆ 5000, 10000 ಪಡೆಯುತ್ತಿತ್ತು ಆದರೆ ಮಂಜುನಾಥ ಗೌಡರ ಕಾಲದಲ್ಲಿ ಲಕ್ಷಗಟ್ಟಲೆ ಸಾಲ ಪಡೆಯುವಂತಹ ಅವಕಾಶ ಮಾಡಿಕೊಟ್ಟರು.

ದುಷ್ಟ ಬಿಜೆಪಿ ಕೂಟಗಳು ಆರ್ ಎಂ ಎಂ ಅವರನ್ನು ಕುಗ್ಗಿಸುವ ಮೆಟ್ಟುವ ಕೆಲಸವನ್ನು ಮಾಡಿದರು ಆದರೆ ಅದೆಲ್ಲವನ್ನು ಮೆಟ್ಟಿ ನಿಂತಿದ್ದಾರೆ.  ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸದೃಢ ಪಕ್ಷವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.

ಯಡಿಯೂರಪ್ಪ ಒಂದೊಂದು ಕಡೆ ಒಂದೊಂದು ರೀತಿ ಹೇಳುತ್ತಾರೆ. ಒಂದೊಂದು ಕಡೆ 140 – 150 ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. 2008 ರಲ್ಲೂ ಮಿಷನ್ 150 ಅಂತ ಹೇಳಿದ್ರು ಆದರೆ 104 ಸೀಟ್ ತಗೊಂಡ್ರು.  ಈಗ ಬೊಮ್ಮಾಯಿಯನ್ನು ಹಿಡಿದುಕೊಂಡು ಹೋದರೆ 70 ಸೀಟ್ ಮೇಲೆ ಬರಲ್ಲ. ನಮ್ಮ ಪಕ್ಷದ ವಿರುದ್ಧ ಬಿಜೆಪಿಯವರು ತುಂಬಾ ಮಾತನಾಡುತ್ತಾರೆ. ಆದರೆ ನಮ್ಮ ಕಾಂಗ್ರೆಸ್ ನಲ್ಲಿ ಬಲಿಷ್ಠ ನಾಯಕರಾಗಿದ್ದಾರೆ.ಬಿಜೆಪಿಯಲ್ಲು ತಂಡಗಳಿವೆ ನಿಮ್ಮಲ್ಲು ಬಂಡಾಯ ಇದೆ ಎಂದರು.

ಗುಜರಾತ್ ನಲ್ಲಿ ಪ್ರಧಾನ ಮಂತ್ರಿಗಳು ತಾಲೂಕು ಮಟ್ಟಕ್ಕೆ ಹೋಗಿ ಭಾಷಣ ಮಾಡಿದ್ದಾರೆ. ಅಚ್ಚೆ ದಿನ್ ಎಲ್ಲಿ ಹೋಯಿತು. ನೀವು ಬಿಜೆಪಿಯವರು ಹಿಂದುತ್ವದ ಆದರದ ಮೇಲೆ ಬದುಕಿದ್ದೀರಿ.ಸಿಟಿ ರವಿ,  ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗಡೆ, ಪೆರೇಶ್ ಮೆಹಸ್ತಾ ವಿಚಾರದಲ್ಲಿ ಬಾಯಿ ಬಡಿದುಕೊಂಡರು. ರೇಣುಕಾಚಾರ್ಯ ಮಗನ ಸಾವಿನ  ವಿಷಯದಲ್ಲೂ ರಾಜಕೀಯ ಮಾಡಲು ಹೊರಟಿದ್ದರು. ರೈತರ ಪರವಾಗಿ ಬಡವರ ಪರವಾಗಿ ಈ ಪಕ್ಷ ಇಲ್ಲ. ಎಲೆ ಚುಕ್ಕಿ ರೋಗಕ್ಕೆ ರೈತರಿಗೆ ಒಂದು ರೂಪಾಯಿ ಪರಿಹಾರ ರೈತರಿಗೆ ಸಿಕ್ಕಿಲ್ಲ. ರೋಗ ಬಂದು ಎರಡು ವರ್ಷ ಆದರೂ ಈಗ ಗೃಹ ಮಂತ್ರಿಗಳು ಸಭೆ ನಡೆಸುತ್ತಾ ಇದ್ದಾರೆ. ಎರಡು ವರ್ಷ ಆದರೂ ಗೃಹ ಮಂತ್ರಿಗಳು ಹಾಲಪ್ಪನವರು ಎಲ್ಲಿ ಹೋಗಿದ್ದರು ? ಶಿವಮೊಗ್ಗ ಜಿಲ್ಲೆಯ ಶಾಸಕರು ಎಂಪಿಗಳು ನೀವು ಎಲ್ಲಿದ್ದೀರಿ?
ಮಂಗನ ಕಾಯಿಲೆಗೆ 22 ಜನ ಸತ್ತರು ಇದು ಅವರಿಗೆ ಸಾಮಾನ್ಯ ಆಗಿದೆ. ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಂಡಿದ್ದಾರೆ. ಅಮಿತ್ ಶಾ ರವರಿಗೆ ಭೂತಾನ್ ನಿಂದ ಅಡಿಕೆ ಆಮದು ಮಾಡಿಕೊಳ್ಳಬೇಡಿ ಎಂದು ಹೇಳಲು ಯಡಿಯೂರಪ್ಪನವರಿಗೆ,  ಎಂಪಿಯವರಿಗೆ  ತಾಕತ್ತು ಇದೆಯಾ ಎಂದು ವಾಗ್ದಾಳಿ ನೆಡೆಸಿದರು.



ಈ ಹೋಂ ಮಿನಿಸ್ಟರ್ ಏನೋ ನೋಡಲ್ಲ ಯಾವುದಾದರು ಸಾವು ಆದರೆ ಸಾಕು ಇದನ್ನು ಮುಸ್ಲಿಮರೇ ಮಾಡಿರುವುದು ಎಂದು ಹೇಳುತ್ತಾರೆ.
ತಮ್ಮ ವ್ಯಾಪ್ತಿಯನ್ನು ಬಿಟ್ಟು ಕೆಲಸ ಮಾಡಲು ಬೇರೆ ಕಡೆ ಇವರು ಹೋಗುತ್ತಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯವರು ಯಾರನ್ನೇ ಕರೆದುಕೊಂಡು ಬರಲಿ ಮೋದಿಯವರನ್ನೇ ಕರೆದುಕೊಂಡು ಬರಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದರು.

ಶಿವಮೊಗ್ಗ ಗ್ರಾಮಾಂತರದ ಕಾಂಗ್ರೆಸ್ ಮುಖಂಡರಾದ ಪಲ್ಲವಿ ಮಾತನಾಡಿ ಇವತ್ತು ಒಬ್ಬ ನಾಯಕ ಪರಿಪೂರ್ಣ ನಾಯಕ ಆಗಬೇಕು ಎಂದಿದ್ದರೆ ನಾನು ಮಾತ್ರ ಎಂಬ ಭಾವನೆ ಇದ್ದರೆ ಅದು ಸಾಧ್ಯವಿಲ್ಲ ಆ ಒಂದು ನಿಟ್ಟಿನಲ್ಲಿ ಆರ್ ಎಂ ಮಂಜುನಾಥ ಗೌಡ್ರು ಎಲ್ಲಾ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ರೈತರ  ಸರ್ವಾಂಗೀಣ  ಅಭಿವೃದ್ಧಿಗಾಗಿ ದುಡಿದಿದ್ದಾರೆ ರೈತರು ಬಡವರಿಗೋಸ್ಕರ ಈ ಪಕ್ಷ ಇದೆ. ಆರ್ ಎಂ ಎಂ ಎಲ್ಲಾ ಕ್ಷೇತ್ರದ ಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ನಾವೆಲ್ಲ ಈ ದೇಶ ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ತರುವ ಕೆಲಸ ಮಾಡೋಣ. ಮಲೆನಾಡಿನಲ್ಲಿ ಅಡಿಕೆ ಬೆಳೆಗೆ ಬಂದಿರುವ ರೋಗದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಜಾರಿಗೆ ತರೋಣ ರಾಹುಲ್ ಗಾಂಧಿಯವರು ಈ ದೇಶಕ್ಕಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3500 ಕಿಲೋಮೀಟರ್ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ ಇದು ಯಾರಿಗೋಸ್ಕರ ನಮ್ಮ ದೇಶದ ಎಲ್ಲ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಉದ್ದೇಶಕ್ಕಾಗಿ ಐಕ್ಯತೆಗಾಗಿ ಮಹಿಳೆಯರ ಸ್ವತಂತ್ರಕ್ಕಾಗಿ ವಿದ್ಯಾವಂತರ ಉದ್ಯೋಗಕ್ಕಾಗಿ ಮಂಜುನಾಥಗೌಡರ ನೇತೃತ್ವದಲ್ಲಿ ಹಲವಾರು ನಾಯಕರು ಬೆಳೆಯಬಹುದು ಇವರು ಕೇವಲ ತೀರ್ಥಹಳ್ಳಿ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅವರ ಹೆಸರು ಇದೆ. ಎಲ್ಲಾ ಕ್ಷೇತ್ರದಲ್ಲೂ ಸೀಮಿತವಾಗಬೇಕು ಎಂದರು.

ಈ ಸಂದರ್ಭದಲ್ಲಿ ಕಡ್ತೂರ್ ದಿನೇಶ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲ ಶೆಟ್ಟಿ, ಮಟ್ಟಿನಮನೆ ರಾಮಚಂದ್ರ, ಹಾರೋಗೋಳಿಗೆ ಪದ್ಭಾನಾಬ್, ಶ್ರುತಿ ವೆಂಕಟೇಶ್ ಮಂಜುಳಾ ನಾಗೇಂದ್ರ, ರೆಹಮಾತುಲ್ಲ ಅಸಾದಿ, ಸೇರಿ ಹಲವರು ಉಪಸ್ಥಿತರಿದ್ದರು.





ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *