Headlines

ಸಾಗರ : ಹರತಾಳು ಹಾಲಪ್ಪರ ಜಾಗ ಒತ್ತುವರಿ ಮಾಡಲು ಬಿಜೆಪಿ ಕಡೆ ಮುಖ ಮಾಡಿದರಾ ಪ್ರಶಾಂತ್ !?Sagara

ಹರತಾಳು ಹಾಲಪ್ಪರ ಜಾಗ ಒತ್ತುವರಿ ಮಾಡಲು ಬಿಜೆಪಿ ಕಡೆ ಮುಖ ಮಾಡಿದ್ರಾ ಕೆ ಎಸ್ ಪ್ರಶಾಂತ್ !?

ಸಾಗರ : ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಕಳೆದ ವಾರ ಶಿಕಾರಿಪುರದ ಜೆಡಿಎಸ್ ಮುಖಂಡ ಹೆಚ್ ಟಿ ಬಳಿಗಾರ್ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಮಾಜಿ ಸಂಸದ ಕೆ ಜಿ ಶಿವಪ್ಪ ಅವರ ಸುಪುತ್ರ ಕೆ ಎಸ್ ಪ್ರಶಾಂತ್ ಅವರು ಸಂಘ ಪರಿವಾರವಾದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.




ವಿಧಾನಸಭಾ ಚುನಾವಣೆ ಸಮೀಪಸುತ್ತಿದ್ದಂತೆ ಸಾಗರ ವಿಧಾನಸಭಾ ಕ್ಷೇತ್ರ ಈಗ ಕುತೂಹಲದತ್ತ ಮುಖ ಮಾಡಿದಂತೆ ಕಾಣಿಸುತ್ತಿದೆ. ಕಾರಣ ಇಲ್ಲಿಯವರೆಗೆ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಹರತಾಳು ಹಾಲಪ್ಪ ಇದ್ದು ಅವರ ಜಾಗಕ್ಕೆ ಕುತ್ತು ಬಂದಂತೆ ಕಾಣಿಸುತ್ತಿದೆ.

ಸದ್ದಿಲ್ಲದೆ ಬಿಜೆಪಿ ಕಡೆ ಮುಖ ಮಾಡಿದ್ರ ಕೆ ಎಸ್ ಪ್ರಶಾಂತ್

ಸಾಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಪ್ರಶಾಂತ್ ರವರು ಶಿವಮೊಗ್ಗ ಮಾಜಿ ಸಂಸದ ಕೆಜೆ ಶಿವಪ್ಪರವರ ಪುತ್ರ. ಕೆ ಎಸ್ ಪ್ರಶಾಂತ್ ಇಲ್ಲಿಯವರೆಗೆ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಸದ್ದಿಲ್ಲದೆ ಬಿಜೆಪಿ ಕಡೆ ಮುಖ ಮಾಡಿದ್ರ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಸಂಘ ಪರಿವಾರದ ಹಿಂದೂ ಜಾಗರಣವೇದಿಕೆಗೆ ಕೆ ಎಸ್ ಪ್ರಶಾಂತ್ ಸೇರ್ಪಡೆಗೊಂಡಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ   ಕೆಎಸ್ ಪ್ರಶಾಂತ್ ಭಾಗಿಯಾಗುತ್ತಿದ್ದಾರೆ.




ಪ್ರಶಾಂತ್ ಅವರಿಗೆ ಸಾಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಸಿಗಲಿದೆಯೇ? ಎಂಬ ಕುತೂಹಲ ಕೆರಳಿದೆ. ಪ್ರಶಾಂತ್ ಸಾಗರ ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ಗಾಗಿ ಅರ್ಜಿಯನ್ನು ಸಲ್ಲಿಸಿಲ್ಲ. ಇದರಿಂದ ಪ್ರಶಾಂತ್ ಅವರು ಬಿಜೆಪಿಯಿಂದ ಸಾಗರದ ಅಭ್ಯರ್ಥಿಯಾಗುವ ಎಲ್ಲಾ ಲಕ್ಷಣಗಳಿವೆ. ಕೆ ಎಸ್ ಪ್ರಶಾಂತ್ ಅವರು ಇಂಧನ ಸಚಿವ ಸುನೀಲ್ ಕುಮಾರ್ ಅವರ ಸಂಬಂಧಿ ಆಗಿದ್ದಾರೆ.




   

ಕೆ ಎಸ್ ಪ್ರಶಾಂತ್ ಯಾರು ? ಬಿಜೆಪಿ ಯಾಕೆ ?

ರಾಜ್ಯ ಸರ್ಕಾರದ ಇಂಧನ ಸಚಿವರಾಗಿರುವ ಸುನೀಲ್ ಕುಮಾರ್ ರವರ ಹೆಂಡತಿ ಅಣ್ಣ ಆಗಿರುವ ಪ್ರಶಾಂತ್ ಈ ಬಾರಿ ಸಾಗರ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಸಾಧ್ಯತೆ ಇದ್ದು ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಸಚಿವ ಸುನಿಲ್ ಕುಮಾರ್ ಕೂಡ ಪ್ರಶಾಂತ್ ಪರ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಹೀಗೇನಾದರೂ ಆದರೆ ಹಾಲಪ್ಪನವರ ಜಾಗ ಒತ್ತುವರಿ ಆಗಲಿದೆ ಎಂದು ಹೇಳಲಾಗುತ್ತಿದೆ.

ರಾಜಕೀಯ ಚಾಣಾಕ್ಷ ಹರತಾಳು ಹಾಲಪ್ಪ

ಆದರೆ ಸಾಗರ ವಿಧಾನಸಭಾ ಕ್ಷೇತ್ರದಾದ್ಯಂತ ತನ್ನದೇ ಆದ ಕಾರ್ಯಕರ್ತರ ಪಡೆ ಕಟ್ಟಿಕೊಂಡು,ಬಿಡುವಿಲ್ಲದೇ ಕಾರ್ಯೊನ್ಮುಖರಾಗಿರುವ ಹರತಾಳು ಹಾಲಪ್ಪ ರಿಗೆ ಬಿಜೆಪಿ ಟಿಕೆಟ್ ತಪ್ಪಿಸುವುದು ಅಷ್ಟು ಸುಲಭದ ಮಾತಲ್ಲ,ರಾಜಕೀಯ ತಂತ್ರಗಾರಿಕೆ,ಚುನಾವಣಾ ಚಾಣಾಕ್ಷತೆಯನ್ನು ಅರಿದು ಕುಡಿದಿರುವ ಹರತಾಳು ಹಾಲಪ್ಪ ಇವೆಲ್ಲವುಗಳನ್ನು ಹೇಗೆ ಎದುರಿಸುತ್ತಾರೋ ಕಾದು ನೋಡಬೇಕಾಗಿದೆ.



Leave a Reply

Your email address will not be published. Required fields are marked *