ರಿಪ್ಪನ್‌ಪೇಟೆ : ಪಟ್ಟಣದ ಕಸ್ತೂರಿ ಕನ್ನಡ ಸಂಘದವರು ಕಳೆದ 28 ವರ್ಷಗಳಿಂದ ನಾಡು- ನುಡಿ ಜಲಕ್ಕೆ ಶ್ರಮಿಸಿದ ಕಲಾ ಕೌಸ್ತುಭ ಕನ್ನಡ ಸಂಘದ ಮೇಲೆ ಆರೋಪಿಸಿರುವುದು ರಾಜಕೀಯ ಪ್ರೇರಿತ ಎಂದು ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್ ಹೇಳಿದರು.
ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಸ್ತೂರಿ ಕನ್ನಡ ಸಂಘದವರು ಇಂದು ಪತ್ರೀಕಾ ಗೋಷ್ಟಿ ನಡೆಸಿ ಕಲಾ ಕೌಸ್ತುಭ ಕನ್ನಡ ಸಂಘವು ಅನ್ಯ ಭಾಷೆಗಳ ವೈಭವಿಕರಿಸುತ್ತಿದೆ ಎಂದು ಹೇಳಿರುವುದು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತ ವಾಗಿದ್ದು,ಈ ಬಾರಿ ನಮ್ಮ ಸಂಘದಿಂದ ಅದ್ದೂರಿಯಾಗಿ ಎರಡು ದಿನ ಕನ್ನಡ ಸಂಭ್ರಮ ಮತ್ತು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನಡೆಸುತ್ತಿದ್ದು ಅದರ ಯಶಸ್ಸನ್ನು ಸಹಿಸದವರು ಈ ತರಹ ವೃಥಾ ಆರೋಪ ಮಾಡುತಿದ್ದಾರೆ.
ನಾವು ಭಾರತೀಯರೆಂದ ಮೇಲೆ ಎಲ್ಲಾ ಭಾಷೆಗಳನ್ನು ಪ್ರೀತಿಸಿ ಜೊತೆಯಲ್ಲಿ ನಮ್ಮ ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ.ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಕಲಾ ಕೌಸ್ತುಭ ಸಂಘ ಮಾಡುವುದಿಲ್ಲ,ಕೇವಲ ವಿರೋಧಿಸುವ ಮನಸ್ಥಿತಿಯವರು ಈ ರೀತಿ ಆರೋಪಿಸುತಿದ್ದಾರೆ.
ಒಂದು ಪಕ್ಷದ ಇಬ್ಬರು ಟಿಕೆಟ್ ಆಕಾಂಕ್ಷಿಗಳನ್ನು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಒಂದು ಬಣದ ಕೆಲ ಮುಖಂಡರು ಈ ರೀತಿಯ ಆರೋಪ ಮಾಡುತಿದ್ದಾರೆ.ಅವರಿಗೆ ಕನ್ನಡದ ಬಗ್ಗೆ ಅಷ್ಟು ಅಭಿಮಾನವಿದ್ದಲ್ಲಿ ನವೆಂಬರ್ ತಿಂಗಳಲ್ಲಿ ಹಿಂದಿ ಮತ್ತು ಪರಭಾಷೆ ಚಲನಚಿತ್ರ ಪ್ರದರ್ಶನವನ್ನು ನಿಲ್ಲಿಸಲಿ ಹಾಗೇಯೆ ಶಾಲಾ ಕಾಲೇಜುಗಳಲ್ಲಿ ಇಂಗ್ಲಿಷ್, ಹಿಂದಿ ಪಾಠವನ್ನು ನವೆಂಬರ್ ತಿಂಗಳಲ್ಲಿ ಭೋಧಿಸುವುದನ್ನು ತಡೆಯಲಿ ಎಂದರು.
ಕಲಾ ಕೌಸ್ತುಭ ಕನ್ನಡ ಸಂಘ ಎಂದಿಗೂ ಕನ್ನಡಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ ಮುಂದೆ ಮಾಡುವುದು ಇಲ್ಲಾ,ಹಾಗೇಯೆ ನಮ್ಮ ಸಂಘಕ್ಕೆ ಜಾತಿ,ಮತ,ಪಕ್ಷ ಭೇದವಿಲ್ಲ ಎಂದರು.
ಆಳ್ವಾಸ್ ನುಡಿಸಿರಿಯ ರೂವಾರಿ ಸತೀಶ್ ಎನ್ ಮಾತನಾಡಿ ಆಳ್ವಾಸ್ ಕಾರ್ಯಕ್ರಮ ರಾಜ್ಯಾದ್ಯಂತ ಇದೇ ತಿಂಗಳಿನಲ್ಲಿ ಕನ್ನಡ ಪರ ಸಂಘಟನೆಗಳ ಸಹಕಾರದಿಂದ ಹಲವಾರು ಕಡೆ ಪ್ರದರ್ಶನಗೊಳ್ಳುತ್ತಿದೆ.ನ 25 ರಂದು ಹೊನ್ನಾಳಿಯಲ್ಲಿ ಮತ್ತು ನ 26 ರಂದು ಭದ್ರಾವತಿಯಲ್ಲಿ ಕನ್ನಡ ಸಂಘದ ವತಿಯಿಂದ ಆಳ್ವಾಸ್ ಕಾರ್ಯಕ್ರಮ ನಡೆಯುತ್ತಿದೆ.ಎಲ್ಲೂ ಇಲ್ಲದ ಕನ್ನಡ ಮಡಿವಂತಿಕೆಯನ್ನು ಇಲ್ಲಿ ಕೆಲವರು ತೋರ್ಪಡಿಸುತ್ತಿರುವುದು ಕೇವಲ ರಾಜಕೀಯ ಪ್ರೇರಿತವಾಗಿದೆ.
ಯಾರು ಏನೇ ಕುತಂತ್ರ ನಡೆಸಿದರೂ ಕಲಾ ಕೌಸ್ತುಭ ಸಂಘದ ಎರಡು ದಿನದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಆಳ್ವಾಸ್ ನುಡಿಸಿರಿ ಕಾರ್ಯಕ್ರಮಕ್ಕೆ ಜನತೆ ಬೆಂಬಲ ಸೂಚಿಸಿದ್ದು ಅದ್ದೂರಿಯಾಗಿ ನಡೆಯುತ್ತದೆ ಎಂದರು.
ಗೋಷ್ಠಿಯಲ್ಲಿ ಕಲಾ ಕೌಸ್ತುಭ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರವಿಚಂದ್ರ, ಸಮಿತಿಯ ಎಂ ಬಿ ಮಂಜುನಾಥ್, ಆರ್ ಟಿ ಗೋಪಾಲ್ ,ಸುರೇಶ್ ಸಿಂಗ್ , ಉಮಾಸುರೇಶ್ ,ಪದ್ಮಾ ಸುರೇಶ್,ಲೀಲಾ ಆರ್ ಶಂಕರ್,ಅಶ್ವಿನಿ ರವಿಶಂಕರ್ ,ಲಕ್ಷ್ಮಿ ಶ್ರೀನಿವಾಸ್,ಶೈಲಾ ಆರ್ ಪ್ರಭು ಇನ್ನಿತರರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇
===============≠==================================
ರಿಪ್ಪನ್‌ಪೇಟೆಯ ಆಳ್ವಾಸ್ ನುಡಿಸಿರಿ ಘಟಕ ಮತ್ತು ಕಲಾ ಕೌಸ್ತುಭ ಕನ್ನಡ ಸಂಘದ ಕಾರ್ಯಕಾರಿ ಸದಸ್ಯರುಗಳು ಇಂದು ಮೋಹನ್ ಆಳ್ವಾ ಅವರನ್ನು ಭೇಟಿ ಮಾಡಿ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ ಪೂರ್ವಭಾವಿ ತಯಾರಿ ಬಗ್ಗೆ ಚರ್ಚಿಸಿ ಕಾರ್ಯಕ್ರಮಕ್ಕೆ ಹೃದಯಪೂರ್ವಕವಾಗಿ ಆಹ್ವಾನಿಸಿದರು.
ಈ ಸಂಧರ್ಭದಲ್ಲಿ ಸತೀಶ್ ಎನ್ ,ಈಶ್ವರ್ ,ಸುಧೀರ್ ಪಿ ಇದ್ದರು.