ರಿಪ್ಪನ್‌ಪೇಟೆ : ಪುನೀತ್ ಪುಣ್ಯ ಸ್ಮರಣೆ |ರಾಜರತ್ನ ಮರೆಯಾಗಿ ಕಳೆದೇ ಹೋಯ್ತು ಒಂದು ವರ್ಷ|punith

ಮೊನ್ನೆ ಮೊನ್ನೆ ನಡೆದಿದೆಯೇನೋ.. ಎಂಬ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅಪ್ಪು ಅಗಲಿಕೆಗೆ ಆಗಲೇ ಒಂದು ವರ್ಷ. ಕಳೆದ ವರ್ಷ ಅಕ್ಟೋಬರ್ 29ರಂದು ಇಡೀ ಕರುನಾಡು ಕಣ್ಣೀರಿಟ್ಟಿತ್ತು. ನಿನ್ನೆಯಷ್ಟೇ ಪುನೀತ್ ಕಟ್ಟಕಡೆಯ ಸಿನಿ-ಡಾಕ್ಯುಮೆಂಟರಿ ಅಥವಾ ಡಾಕ್ಯು-ಡ್ರಾಮಾ ಗಂಧದ ಗುಡಿ ರಿಲೀಸ್ ಆಗಿದೆ.




ಕರ್ನಾಟಕ ರತ್ನ ಡಾ| ಪುನೀತ್ ರಾಜ್‍ಕುಮಾರ್ ರವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ವತಿಯಿಂದ ಪುನೀತ್ ಕಟೌಟ್ ಗೆ ಪುಷ್ಪಾರ್ಚನೆ ಸಲ್ಲಿಸಿ ,1 ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.




ಈ ಸಂಧರ್ಭದಲ್ಲಿ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆನಂದ್ ಮೆಣಸೆ,ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್ ಮುಖಂಡರಾದ ಮಂಜುನಾಥ್ ಕಾಮತ್ ,ಆಸೀಫ಼್ ಭಾಷಾಸಾಬ್ ,ದೇವರಾಜ್ ಕೆರೆಹಳ್ಳಿ,ನಾಗರತ್ನ ದೇವರಾಜ್,ರವೀಂದ್ರ ಕೆರೆಹಳ್ಳಿ,
ಆರ್ ರಾಘವೇಂದ್ರ,ಧನಲಕ್ಷ್ಮಿ, ಶೀಲಾ ಆರ್ ಡಿ,ರಮೇಶ್ ಫ್ಯಾನ್ಸಿ,ಶ್ರೀಧರ್ ,ಪ್ರಕಾಶ್ ಪಾಲೇಕರ್ ,ಸಾಜೀದಾ ಹನೀಫ಼್, ಮಳವಳ್ಳಿ ಮಂಜು,ವಿನಾಯಕ್ ಶೆಟ್ಟಿ ಹಾಗೂ ಇನ್ನಿತರರಿದ್ದರು.



Leave a Reply

Your email address will not be published. Required fields are marked *