ಗವಟೂರು-ಮಾವಿನಸರ ಕಳಪೆ ರಸ್ತೆ ಕಾಮಗಾರಿ ಸ್ಥಳಕ್ಕೆ ಶಾಸಕ ಹರತಾಳು ಹಾಲಪ್ಪ ಭೇಟಿ – ಅಧಿಕಾರಿಗಳಿಗೆ ತರಾಟೆ

ರಿಪ್ಪನ್‌ಪೇಟೆ : ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುದಾನದ ಗವಟೂರು- ಮಾವಿನಸರ ರಸ್ತೆ ಕಾಮಗಾರಿ ಕಳೆಪೆಯಾಗಿದೆ ಎಂಬ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಹಾಗೂ ಹಲವು ಮಾಧ್ಯಮಗಳಲ್ಲಿ ಆರೋಪ ಬಂದ ಹಿನ್ನಲೆಯಲ್ಲಿ ಶಾಸಕ ಹಾಗೂ MSIL ಅಧ್ಯಕ್ಷ  ಹರತಾಳು ಹಾಲಪ್ಪ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.



ನಂತರ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿ,ನೂತನ ತಂತ್ರಜ್ಞಾನ ಅಳವಡಿಕೆಯಿಂದಾಗಿ ಕಾಮಗಾರಿಯಲ್ಲಿ ಲೋಪ ಕಂಡುಬಂದಿದೆ. ರಸ್ತೆ ಅಂಚಿನಲ್ಲಿ ನೀರು ಸರಾಗವಾಗಿ ಹೋಗಲು ಬಾಕ್ಸ್ ಚರಂಡಿಯಲ್ಲಿ ರಂದ್ರ ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರನ ಬೇಜವಾಬ್ದಾರಿ ಹಾಗೂ ಇಂಜಿನಿಯರ್ ರವರ ನಿರ್ಲಕ್ಷ್ಯದಿಂದಾಗಿ ರಸ್ತೆಯ ಕೆಲವು ಕಡೆಯಲ್ಲಿ ಗುಣಮಟ್ಟದಲ್ಲಿ ದೋಷ ಕಂಡುಬಂದಿರುತ್ತದೆ.
ಮಲೆನಾಡಿನ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿ ಬೀಳುವುದರಿಂದಾಗಿ ನೂತನ ತಂತ್ರಜ್ಞಾನ ಅಳವಡಿಸುವುದು ಕಷ್ಟಕರವಾಗಿದೆ ಎಂದರು.

ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ರಾಜಕಾರಣಿಗಳಿಗೆ ಯಾವುದೇ ಪರ್ಸೆಂಟೇಜ್ ಸಿಗುವುದಿಲ್ಲ ಎಂಬ ಸತ್ಯ ಆರೋಪ ಮಾಡುವವರಿಗೂ ಗೊತ್ತು ಆದರೂ ಆತ್ಮಸಾಕ್ಷಿಗೆ ವಿರುದ್ದವಾಗಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದರು.

ಹಿರಿಯ ಅಧಿಕಾರಿಗಳು ಕಾಮಗಾರಿ ಹಂತದಲ್ಲಿ ಸ್ಥಳಕ್ಕೆ ಭೇಟಿ ನೀಡದೇ ಇರುವುದೇ ಇದಕ್ಕೆ ಕಾರಣವೆಂದ ಶಾಸಕರು ಸ್ಥಳದಲ್ಲಿ ಹಾಜರಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಮತ್ತು ಕಿರಿಯ ಅಭಿಯಂತರರನ್ನು ತರಾಟೆ ತಗೆದುಕೊಂಡು ನಿಮ್ಮಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಗುಣಮಟ್ಟವು ಕಳೆಪೆಯಾಗಲು ಕಾರಣವಾಗಿದೆ.ಡಿಸೆಂಬರ್ ತಿಂಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ ನಿರ್ಮಿಸಿರುವ ರಸ್ತೆಯನ್ನು ದುರಸ್ಥಿಪಡಿಸುವಂತೆ ತಾಕೀತು ಮಾಡಿದರು.


ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್,  ಮುಖಂಡರಾದ ಎಂ ಬಿ‌ ಮಂಜುನಾಥ್, ಆನಂದ್ ಮೆಣಸೆ ಜಿ.ಪಂ. ಎ.ಟಿ.ನಾಗರತ್ನ, ಪಿ.ರಮೇಶ್, ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಜಾಗದ್ದೆ ಉಮೇಶ್, ರಾಮಚಂದ್ರ ಹರತಾಳು, ಪಿ.ಸುಧೀರ್, ಸುಧೀಂದ್ರ ಪೂಜಾರಿ, ದೊಡ್ಡಯ್ಯ, ಮಾವಿನಸರ ರಘು, ಜಗದೀಶ ನೇರಲುಮನೆ ಇನ್ನಿತರ ಹಲವು ಮುಖಂಡರು ಹಾಜರಿದ್ದರು.

ಪಿ.ಎಂ.ಜಿ.ಎಸ್.ಐ ಸಹಾಯಕ ಕಾರ್ಯಪಾಲಕ ಅಭಿಯಂತರು ಮತ್ತು ಕಿರಿಯ ಅಭಿಯಂತರರು ಇದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *