WhatsApp Channel Join Now
Telegram Channel Join Now
ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ 82 ನೇ ವಯಸ್ಸಿನಲ್ಲಿ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಇಂದು ಬೆಳಿಗ್ಗೆ 8 ರಿಂದ 8:30ರ ನಡುವೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸ್ಥಾಪಕ-ಪೋಷಕರಾಗಿದ್ದರು ಸತತ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು ಭಾರತ ಸರ್ಕಾರದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.


ಮುಲಾಯಂ ಅವರು ನವೆಂಬರ್ 22, 1939 ರಂದು ಇಂದಿನ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದರು.ಮುಲಾಯಂ ಅವರ ಪೋಷಕರು ಮೂರ್ತಿ ದೇವಿ ಮತ್ತು ಸುಗರ್ ಸಿಂಗ್ ಯಾದವ್ ವಿನಮ್ರ ಹಿನ್ನೆಲೆಯಿಂದ ಬಂದ ರೈತರು. ಅವರ ಆರಂಭಿಕ ಜೀವನದಲ್ಲಿ, ಅವರು ಕುಸ್ತಿಪಟು ಆಗಲು ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಹಲವು ಉನ್ನತ ಪದವಿ ಪಡೆದಿದ್ದ ಮುಲಾಯಂ ಲೋಹಿಯಾ ಅವರ ವಿಚಾರಗಳಿಂದ ಪ್ರೇರಿತರಾಗಿದ್ದರು.

ಮಾಜಿ ಕುಸ್ತಿಪಟು ಯುಪಿ ರಾಜಕೀಯದಲ್ಲಿ 1980 ರ ದಶಕದ ಉತ್ತರಾರ್ಧದಲ್ಲಿ ಮತ್ತು 1990 ರ ದಶಕದ ಆರಂಭದಲ್ಲಿ ಭಾರತದಲ್ಲಿ ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿದರು.

ಯಾದವ್ ಅವರು ತಮ್ಮ ಸ್ನೇಹಿತರೊಂದಿಗೆ ಮಾತ್ರವಲ್ಲದೆ ವಿರೋಧ ಪಕ್ಷಗಳ ಜೊತೆಯೂ ಉತ್ತಮ‌ ಸಂಬಂಧ ಹೊಂದಿದ್ದರು. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರೊಂದಿಗಿನ ಅವರ ಒಡನಾಟವು ಉತ್ತಮವಾಗಿತ್ತು. ಈ ಬಳಿಕ ಯುಪಿಯಲ್ಲಿ ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವುದರ ಜೊತೆಗೆ, ಕೇಂದ್ರದಲ್ಲಿ ಅಧಿಕಾರದ ಪಾಲುದಾರರಾಗಿದ್ದರು.

1996 ರಲ್ಲಿ, ಅವರು ಯುನೈಟೆಡ್ ಫ್ರಂಟ್ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. ನಂತರ, 1999 ರಲ್ಲಿ, ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಪತನದ ನಂತರ, ಶ್ರೀ ಯಾದವ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಬೆಂಬಲಿಸದಿರಲು ನಿರ್ಧರಿಸಿದರು, ಆದರೂ ಅವರು ಆರಂಭದಲ್ಲಿ ತಮ್ಮ ಪಕ್ಷದ ಬೆಂಬಲವನ್ನು ಅವರಿಗೆ ನೀಡುವ ಭರವಸೆ ನೀಡಿದ್ದರು.


2012 ರಲ್ಲಿ, ಸಮಾಜವಾದಿ ಪಕ್ಷವು ಯುಪಿಯಲ್ಲಿ ಅಧಿಕಾರಕ್ಕೆ ಮರಳಿದಾಗ, ಅನಾರೋಗ್ಯದಿಂದ ಬಳಲುತ್ತಿದ್ದ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಮಗ ಅಖಿಲೇಶ್‌ ಜೊತೆ ಅಸಮಾಧಾನವಾಗಿತ್ತು. ಕುಟುಂಬದೊಳಗಿನ ಬಿರುಕುಗಳು ಹೆಚ್ಚಾಗುತ್ತಿದ್ದಂತೆ,ಯುಪಿಯಲ್ಲಿ ನಿರ್ಣಾಯಕ 2017 ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ, 2016 ರಲ್ಲಿ ಅಖಿಲೇಶ್ ಅವರು ಪಕ್ಷದಿಂದ ಹೊರಬರಲು‌ಮುಂದಾದಗ ತಂದೆ- ಮಗ ಒಟ್ಟಾಗಿದ್ದರು.‌ಆ ಬಳಿಕ ವಯೋಸಹಜ ಕಾಯಿಲೆಯಿಂದ ಮುಖ್ಯ ವಾಹಿನಿ ರಾಜಕೀಯದಿಂದ ಹಿಂದೆ ಸರಿದಿದ್ದರು.

Leave a Reply

Your email address will not be published. Required fields are marked *