ಹೊಸನಗರ : ಪಟ್ಟಣದ ಸಂತ ಅಂತೋನಿ ದೇವಾಲಯದ ವಾರ್ಷಿಕ ಮಹೋತ್ಸವದ ಅಂಗವಾಗಿ ಕ್ರೈಸ್ತ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರ ನಾಮ ಭಜಿಸುತ್ತಾ ಧಾರ್ಮಿಕ ಮೆರವಣಿಗೆ ನಡೆಸಿದರು.
ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹೊಸನಗರ ಪಟ್ಟಣದ ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ರೆವೆರೆಂಡ್ ಫಾದರ್ ಸೈಮನ್ ರವರೊಂದಿಗೆ ಜಿಲ್ಲೆಯ 30ಕ್ಕೂ ಹೆಚ್ಚು ಚರ್ಚ್ ಗಳ ಧರ್ಮ ಗುರುಗಳು ಪಾಲ್ಗೊಂಡಿದ್ದರು.
ಇತ್ತೀಚೆಗೆ ಪಟ್ಟಣದ ಹಿಂದುಗಳು ಶ್ರೀ ಗಣೇಶೋತ್ಸವ,ನವರಾತ್ರಿ ಸಡಗರ ಉತ್ಸಾಹ ಸಂಭ್ರಮದಿಂದ ಆಚರಿಸಿದ್ದು ಅದರ ಬೆನ್ನಲ್ಲೇ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು ಇಂದು ಪಟ್ಟಣದ ಕ್ರೈಸ್ತ ಬಾಂಧವರು ಅತಿ ಉತ್ಸಾಹ ದಿಂದ ಕ್ರೈಸ್ತ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವು ಉಪಸ್ಥಿತಿಯಲ್ಲಿ ಅಂತೋನಿ ದೇವಾಲಯದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.