ಮಲೆನಾಡಿನಲ್ಲಿ ಉಗ್ರರ ಕರಿನೆರಳು!!!! : ಶಿವಮೊಗ್ಗದಲ್ಲಿ ಎಂಜಿನಿಯರ್ ಯಾಸಿನ್ ಸಹಿತ ಇಬ್ಬರು ಶಂಕಿತ ಉಗ್ರರ ಬಂಧನ – ಇನ್ನಿಬ್ಬರಿಗೆ ಶೋಧ

ಮಲೆನಾಡಿಗೂ ಉಗ್ರರ ನಂಟು ತಗುಲಿವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಜಿಲ್ಲೆಯ ಇಬ್ಬರು ಮತ್ತು ಮಂಗಳೂರು ಮೂಲದ ಓರ್ವನ ವಿರುದ್ಧ ಶಿವಮೊಗ್ಗ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣ ಇವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ.


ಮೂವರು ಶಂಕಿತರಾದ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಸಯ್ಯದ್ ಯಾಸೀನ್(21) ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22) ಮತ್ತು ತೀರ್ಥಹಳ್ಳಿ ಸೂಪ್ಪುಗುಡ್ಡೆಯ ನಿವಾಸಿ ಶಾರೀಕ್ ಮೇಲೆ ಯುಎಪಿಎ (UNLAWFUL ACTIVITIES (PREVEVNTION ACT) 1967 ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ.

ಇದರಲ್ಲಿ ಸೈಯದ್ ಯಾಸೀನ್ ಹಾಗೂ ಮಾಜ್ ಮುನೀರ್ ಅಹಮ್ಮದ್​ನನ್ನು ಬಂಧಿಸಿ ವಿಚಾರಣೆ ನಡೆಸಿ, ಶಿವಮೊಗ್ಗದ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಕೋರ್ಟ್​​ಗೆ ಹಾಜರು ಪಡಿಸಿ 7 ದಿನ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್​ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಇವರನ್ನು ನಿನ್ನೆ ವಶಕ್ಕೆ ಪಡೆಯಲಾಗಿದ್ದು, ಇನ್ನಷ್ಟು ವಿಚಾರಣೆಗೆ ಒಳಪಡಿಸಿದಾಗ ಮಾಹಿತಿ ಲಭ್ಯವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ‌. ಸೈಯ್ಯದ್ ಯಾಸೀನ್ ವಿಚಾರಣೆಗೆ ಒಳಪಡಿಸಲಾಗಿದೆ. ಈತನ ಹಿನ್ನೆಲೆ ಇನ್ನಷ್ಟೆ ಹೊರ ಬರಬೇಕಿದೆ. ಮಾಜ್ ಹಾಗೂ ಶಾರೀಕ್ ರವರು ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಶಿವಮೊಗ್ಗಕ್ಕೂ ಉಗ್ರರ ನಂಟು ಶಂಕೆ: ಶಿವಮೊಗ್ಗದ ಪ್ರತಿಷ್ಠಿತ ಇಂಜಿನಿಯರ್ ಕಾಲೇಜಿನಲ್ಲಿ ಯಾಸೀನ್ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ತೀರ್ಥಹಳ್ಳಿ ಸೊಪ್ಪು ಗುಡ್ಡೆಯ ಶಾರೀಕ್ ಎಂಬಾತ ಪರಾರಿಯಾಗಿದ್ದು, ಆತನ ವಶಕ್ಕೆ ಬಲೆ ಬೀಸಲಾಗಿದೆ.

ಶಿವಮೊಗ್ಗದಲ್ಲಿ ಬಂಧಿತರಾದ ಶಂಕಿತ ಉಗ್ರರಿಗೆ ಭಯೋತ್ಪದನೆ ನಂಟು ಇತ್ತ ? ರಾಷ್ಟ್ರ ಧ್ವಜ ಸುಟ್ಟಿದ್ರ ?

ಶಿವಮೊಗ್ಗ: ನಿಷೇಧಿತ ಭಯೋತ್ಪದಕ ಸಂಘಟನೆಯೊಂದಿಗೆ (ISIS) ನಂಟು ಹೊಂದಿರುವ ಆರೋಪದ ಮೇರೆಗೆ ಇಬ್ಬರು ಶಂಕಿತರನ್ನು ಶಿವಮೊಗ್ಗದಲ್ಲಿ ಹಾಗೂ ಮತ್ತೊಬ್ಬನನ್ನು ಮಂಗಳೂರಿನಲ್ಲಿ  ಬಂಧಿಸಲಾಗಿದೆ. ತೀರ್ಥಹಳ್ಳಿಯ ನಿವಾಸಿಯಾಗಿದ್ದ ಮಹಮದ್ ಶಾರಿಕ್ ಎಂಬಾತನ ಬಂಧನವಾಗಬೇಕಿದೆ.


ರಾಷ್ಟ್ರಧ್ವಜವನ್ನು ಸುಟ್ಟು ಹಾಕಿರುವ ಮತ್ತು ಸ್ಫೋಟಕಗಳನ್ನು ಇಟ್ಟುಕೊಂಡಿರುವ ಆರೋಪ ಕೇಳಿ ಬಂದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆಯ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತರನ್ನು ಬಂಧಿಸಿದೆ.

ಮೂವರು ಶಂಕಿತರು ಇಸ್ಲಾಮಿಕ್ ಸ್ಟೇಟ್ (ISIS) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ಮುಂದುವರೆಸುವ ಸಲುವಾಗಿ ಒಳಸಂಚು ರೂಪಿಸಿದ್ದರು ಎಂದು ಆಪಾದಿಸಲಾಗಿದೆ.

ಶಂಕಿತರು ಸಾರ್ವಜನಿಕ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಫೋಟಗಳನ್ನು ಇಟ್ಟುಕೊಂಡಿರುವ ಶಂಕೆ ಇದ್ದು ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿರುವುದಾಗಿ ತಿಳಿದು ಬಂದಿದೆ ಎಂದು ಎಫ್‌ಐಆರ್’ನಲ್ಲಿ ತಿಳಿಸಲಾಗಿದೆ.


ಬಂಧಿತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಿರ್ಬಂಧ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆ.29ರವರೆಗೆ ಶಂಕಿತರನ್ನು ಪೊಲೀಸ್ ಕಷ್ಟಡಿಯಲ್ಲಿ ಇರಿಸಲಾಗಿದೆ.

Leave a Reply

Your email address will not be published. Required fields are marked *