ಭರ್ಜರಿ 20 ಗಂಟೆಗಳ ಭಾರಿ ಜನಸ್ತೋಮದ ಮೆರವಣಿಗೆ ಬಳಿಕ ರಿಪ್ಪನ್‌ಪೇಟೆ ಗಣಪತಿ ವಿಸರ್ಜನೆ :


ರಿಪ್ಪನ್‌ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಪ್ರತಿಷ್ಠಾಪಿಸಿದ್ದ 55 ನೇ ವರ್ಷದ  ಗಣೇಶೋತ್ಸವದ ಗಣಪತಿ ವಿಸರ್ಜನೆ 20 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವದ ಬಳಿಕ ಶಾಂತಿಯುತವಾಗಿ ನೆರವೇರಿದೆ.


ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆಗೂ ಮುನ್ನ ಭರ್ಜರಿ 20 ಗಂಟೆಗಳ ಕಾಲ ರಾಜಬೀದಿ ಉತ್ಸವ ನಡೆಯಿತು.ನಿನ್ನೆ ಸಂಜೆ 4.30 ಕ್ಕೆ ಆರಂಭವಾಗಿದ್ದ ಮೆರವಣಿಗೆ ಇಂದು ಮಧ್ಯಾಹ್ನ12.30 ಕ್ಕೆ ಕೊನೆಗೊಂಡು ವಿಸರ್ಜನೆ ನೆರವೇರಿತು.


ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗಿಯಾದರು.ಚಿಕ್ಕ ಮಕ್ಕಳಿನಿಂದ ಹಿಡಿದು ವಯೋವೃದ್ದರು ,ಮಹಿಳೆಯರು ಪಾಲ್ಗೊಂಡರು.

ಪಟ್ಟಣದ ಹೊಸನಗರ ರಸ್ತೆಯಲ್ಲಿನ ತಾವರೆಕೆರೆಯಲ್ಲಿ ಗಣಪತಿಯ ವಿಸರ್ಜನೆ ಮಾಡಲಾಯಿತು.


ನೂರಾರು ಪೊಲೀಸ್ ಬಿಗಿ ಬಂದೋಬಸ್ತ್ ಪಟ್ಟಣದಾದ್ಯಂತ ಮಾಡಲಾಗಿತ್ತು.ಡಿವೈಎಸ್ಪಿ ಶಾಂತಕುಮಾರ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.ಸಿಪಿಐ ಗಿರೀಶ್ ನೇತ್ರತ್ವದಲ್ಲಿ ಬಂದೋಬಸ್ತ್ ನಡೆದಿತ್ತು.ತಹಶೀಲ್ದಾರ್ ವಿ ರಾಜೀವ್ ಮೆರವಣಿಗೆಯುದ್ದಕ್ಕೂ ಪಾಲ್ಗೊಂಡು ಅವಲೋಕಿಸಿದರು.

ಈ ನಡುವೆ ಮೆರವಣಿಗೆಯಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.ಬೇಳೂರು ಕುಣಿತಕ್ಕೆ ಯುವಕರು ಸಾಥ್ ನೀಡಿದರು.ಕಾಂಗ್ರೆಸ್ ನ ಸ್ಥಳೀಯ ನಾಯಕರು ಜೊತೆಯಲ್ಲಿದ್ದರು.

ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟಸೇನಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ವೈ.ಜೆ.ಕೃಷ್ಣ,ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಅರ್.ಈ.ಈಶ್ವರಶೆಟ್ಟಿ,ಪ್ರಧಾನಕಾರ್ಯದರ್ಶಿ ಪಿ.ಸುದೀರ್,ಎಂ.ಬಿ.ಮಂಜುನಾಥ,.ಸುರೇಶ್‌ಸಿಂಗ್,ಸುದೀಂದ್ರಪೂಜಾರಿ,ತೀರ್ಥೇಶ್‌ ಅಡಿಕಟ್ಟು,ರವೀಂದ್ರಕೆರೆಹಳ್ಳಿ, ಆರ್.ರಾಘವೆಂದ್ರ,ಶ್ರೀನಿವಾಸ್ ಅಚಾರ್,ಎನ್.ಸತೀಶ್,ಗಣೇಶ್ ಎನ್.ಕಾಮತ್,ಆರ್.ಹೆಚ್.ಶ್ರೀನಿವಾಸ ಅಚಾರ್,ಅಟೋ ಲಕ್ಷಣ,ಎಂ.ಡಿ.ಇಂದ್ರಮ್ಮ,ಜಯಲಕ್ಷಿö್ಮಮೋಹನ್, ಅರ್.ಡಿ.ಶೀಲ,ಅರ್.ಶೈಲಪ್ರಭು,,ಹೆಚ್.ಎನ್.ಚೋಳರಾಜ್,ಡಿ.ಈ.ರವಿಭೂಷಣ,ಎಸ್.ದಾನಪ್ಪ,ನಾಗರಾಜ್ ಪವಾರ್,ತುಳೋಜಿರಾವ್, ಮುರುಳಿ, ಕೆ.ವಿ.ಲಿಂಗಪ್ಪ,ಭೀಮರಾಜ್, ವಾಸುಶೆಟ್ಟಿ,ಕೆ.ಎ.ನಾರಾಯಣ, ಶಾಂತಕುಮಾರ,ಯೋಗೇಶ್,ಪುಟ್ಟರಾಜ್, ಸ್ವಾಮಿದೊಡ್ಡಿನಕೊಪ್ಪ,ಹೆಚ್.ಎನ್.ಉಮೇಶ್,ದೇವರಾಜ್ ಪವಾರ್,ಇನ್ನಿತರ ಹಲವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಉಪತಹಶೀಲ್ದಾರ್ ಹುಚ್ಚರಾಯಪ್ಪ,ಪಿಎಸ್‌ಐ ಶಿವಾನಂದಕೋಳಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿವರ್ಗ ಗ್ರಾಮ ಪಂಚಾಯ್ತಿ ಪಿಡಿಓ ಸಿಬ್ಬಂದಿವರ್ಗ ಇನ್ನಿತರ ಇಲಾಖೆಯ ಅಧಿಕಾರಿಗಳು ಗಣಪತಿ ಮೆರವಣಿಗೆ ಹಿನ್ನಲೇಯಲ್ಲಿ ಪೊಲೀಸ್ ಇಲಾಖೆ ಗೃಹ ರಕ್ಷಕ ದಳ ಪಟ್ಟಣದ ಎಲ್ಲೇಡೆ ಬಿಗಿ ಬಂದೋಬಸ್ತುನೊಂದಿಗೆ ಸಿಸಿಟಿವಿ ಡ್ರೋಣ್ ಕ್ಯಾಮರಗಳಲ್ಲಿ ಹಾಗೂ ಮೆರವಣಿಗೆ ಪ್ರತಿ ಹಂತದಲ್ಲಿ ಸೂಕ್ತ ಪರಿಶೀಲನೆ ನಡೆಸಿದರು.

ಗಣಪತಿ ವಿಸರ್ಜನೆಯ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇





ಆರಗ ಜ್ಞಾನೇಂದ್ರ ಮತ್ತು ಶಾಸಕ ಹೆಚ್ ಹಾಲಪ್ಪ ಭೇಟಿಯ ವೀಡಿಯೋ ಇಲ್ಲಿ ವೀಕ್ಷಿಸಿ👇



ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ ಬೇಳೂರು ಗೋಪಾಲಕೃಷ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇



ಬೃಹತ್ ಬೈಕ್ ರ್ಯಾಲಿ ಯ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *