…………………………ಪೋಸ್ಟ್ ಮ್ಯಾನ್ ನ್ಯೂಸ್ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ಹೆಡ್ ಕಾನ್‌ಸ್ಟೇಬಲ್ (head constable) ವಿರುದ್ಧ ಮಹಿಳೆಯೊಬ್ಬರು ಭದ್ರಾವತಿಯ ಟೌನ್ ಸರ್ಕಲ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್‌ಸ್ಟೇಬಲ್ ರಾಘವೇಂದ್ರ ವಿರುದ್ಧ ಕೆ.ರೇಖಾ ಎಂಬುವವರು ಆರೋಪ ಮಾಡಿದ್ದಾರೆ.
ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದ ಕೆ.ರೇಖಾ 2019ರ ಫೆಬ್ರವರಿಯಲ್ಲಿ ತನ್ನ ಪತಿ ಆಂಜನೇಯ ಮತ್ತು ಅವರ ತಮ್ಮ ರಮೇಶನ ನಡುವೆ ಆಸ್ತಿಯ ವಿಚಾರವಾಗಿ (matter of property) ವಿವಾದವಾಗಿತ್ತು. ಈ ಹಿನ್ನೆಲೆ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿದ್ದ ಹೆಡ್ ಕಾನ್‌ಸ್ಟೇಬಲ್ ರಾಘವೇಂದ್ರ ದೂರು ವಿಚಾರಣೆ ನಡೆಸಿ, ಸಮಸ್ಯೆ ಬಗೆಹರಿಸಿದ್ದರು. ಅಲ್ಲದೇ ಏನಾದರೂ ತಂಟೆ ತಕರಾರು ತೆಗೆದರೆ ನನ್ನ ನಂಬರ್‌ಗೆ ಪೋನ್ ಮಾಡಿ ಎಂದು ಹೇಳಿ ಆ ಮಹಿಳೆಯ ಪೋನ್ ನಂಬರ್ ಪಡೆದಿದ್ದರು.
ಆಬಳಿಕ ರಾಘವೇಂದ್ರ ಮಹಿಳೆಗೆ ಪದೇಪದೇ ಪೋನ್ ಮಾಡುತ್ತಿದ್ದರು. ಇದರಿಂದ ಇಬ್ಬರಲ್ಲೂ ಸಲಿಗೆ ಬೆಳೆದಿತ್ತು. ಇನ್ನೂ ಮಹಿಳೆಯನ್ನು ಒತ್ತಾಯ ಪೂರ್ವಕವಾಗಿ ಹತ್ತಿರದ ಕೈಮರಕ್ಕೆ ಕರೆಸಿಕೊಂಡು ತನ್ನದೇ ಕಾರಿನಲ್ಲಿ ಶಿವಮೊಗ್ಗ, ಭದ್ರಾವತಿ ಮತ್ತು ಇತರೆ ಕಡೆಗೆ ಕರೆದುಕೊಂಡು ಹೋಗಿ ದೈಹಿಕವಾಗಿ ದೌರ್ಜನ್ಯ ಎಸಗಿ ಸಂಜೆ ವಾಪಸ್ಸು ಕೈಮರಕ್ಕೆ ಕರೆದುಕೊಂಡು ಬಂದು ಬಿಡುತ್ತಿದ್ದರು.
ಇನ್ನೂ 2020ನೇ ಇಸವಿಯ ಜೂನ್ 11ನೇ ತಾರೀಖು ಆನವೇರಿ ಸರ್ಕಲ್‌ಗೆ ಮಹಿಳೆಯನ್ನು ಕರೆಸಿಕೊಂಡು ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಪರಿಚಯವಿದ್ದ ಸಲ್ಮಾ ಎಂಬವರ ಮನೆಗೆ ರಾಘವೇಂದ್ರ ಕರೆದುಕೊಂಡು ಹೋಗಿ ರೇಖಾರವರನ್ನು ಪುಸಲಾಯಿಸಿ ಬಲವಂತದಿಂದ ದೈಹಿಕ ಸಂಪರ್ಕ ಹೊಂದಿದ್ದ.
ಈ ವಿಚಾರವನ್ನು ಯಾರಿಗೂ ಹೇಳದಂತೆ ಹೆದರಿಸಿ, ನಿನ್ನ ಗಂಡ, ಸಂಬಂಧಿಕರಿಗೆ ನಾನೇ ವಿಷಯ ತಿಳಿಸಬೇಕಾಗುತ್ತದೆ ಎಂದು ಹೇಳಿ ತಾನು ಬಳಸುತ್ತಿದ್ದ ಪೋನ್ ನಂಬರ್ ಚೇಂಜ್ ಮಾಡಿ ಕೊಟ್ಟು ಪುನಃ ಆನವೇರಿಗೆ ತಂದು ಬಿಟ್ಟಿದ್ದರು. ಇದಾದ ನಂತರ ರಾಘವೇಂದ್ರ ಪದೇಪದೇ (repeatedly) ಕರೆ ಮಾಡಿ, ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಇದರಿಂದ ಮನನೊಂದು ತಡವಾಗಿ ದೂರು ನೀಡುತ್ತಿದ್ದೇನೆ ಎಂದು ಸಂತ್ರಸ್ತೆ ಕೆ.ರೇಖಾ ದೂರಿನಲ್ಲಿ ತಿಳಿಸಿದ್ದಾರೆ.