ರಿಪ್ಪನ್ಪೇಟೆ: ಸಮಾಜದ ಪ್ರತಿಯೊಬ್ಬರು ಆರೋಗ್ಯವಾಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಪ್ರಸ್ತುತ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜನರನ್ನು ಅನಾರೋಗ್ಯ ಮುಕ್ತರನ್ನಾಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಉದ್ದೇಶದಿಂದ ಸರಕಾರ ಪೋಷಣ್ ಅಭಿಯಾನವನ್ನು ಜಾರಿಗೆ ತಂದಿಗೆ ಎಂದು ಹೊಸನಗರ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಚಂದ್ರಕಲಾ  ಹೇಳಿದರು.
       ಸಮೀಪದ ಮೂಗುಡ್ತಿ ಸಭಾಭವನದಲ್ಲಿ ಬುಧವಾರ ಗ್ರಾಮ ಪಂಚಾಯತಿ ಹೆದ್ದಾರಿಪುರ ಮತ್ತು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶುಅಭಿವೃದ್ಧಿ ಯೋಜನೆಯ ವತಿಯಿಂದ ಗರ್ಭೀಣಿ ಮತ್ತು ಬಾಣಂತಿಯರಿಗಾಗಿ ಆಯೋಜಿಸಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಅಪೌಷ್ಠಿಕ ಮುಕ್ತತೆಯನ್ನು ಮನಗೊಂಡಿರುವ ಸರಕಾರ ಪೋಷಣ್ ಅಭಿಯಾನ ಯೋಜನೆಯ ಮೂಲಕ ಮಹಿಳೆಯರಿಗೆ ವಿವಿಧ ಸೌವಲತ್ತುಗಳನ್ನು ನೀಡುತ್ತಿದೆ. ಹೆಣ್ಣು ಗರ್ಭವತಿಯಾದ ದಿನದಿಂದ ಒಂದು ಸಾವಿರ ದಿನಗಳವರೆಗೆ ಪಾಲನೆ ಮಾಡುವ ಉದ್ದೇಶ ಯೋಜನೆಯದ್ದಾಗಿದೆ. ಇಂತಹ ಸಮಯದಲ್ಲಿ ಸರಕಾರದ ಯೋಜನೆಯನ್ನು ಪಡೆದುಕೊಂಡು ಮನೆಯಲ್ಲಿಯೇ ಸಿಗುವ ಹಣ್ಣು-ತರಕಾರಿ ಸೊಪ್ಪು-ಮೊಳಕೆೆಕಾಳುಗಳ ಸೇವನೆಯಿಂದ ತಮ್ಮ ಆರೋಗ್ಯವನ್ನು ಸದೃಢಗೊಳಿಸಿಕೊಳ್ಳಬೇಕು ಇದರಿಂದ ಹುಟ್ಟಿದ ಮಗು ಆರೋಗ್ಯವಂತವಾಗಿದ್ದು, ಮುಂದೆ ಅದರಿಂದ ಜನನವಾಗುವ ಪೀಳಿಗೆಯು ಆರೋಗ್ಯ ಪೂರ್ಣವಾಗಿರುತ್ತದೆ ಎಂದರು. ಮಹಿಳೆಯರಿಗೆ ಫಲತಾಂಬೂಲಗಳ ಮೂಲಕ ಉಡಿತುಂಬಿದರು. ವಿವಿಧ ರೀತಿಯ ಪೌಷ್ಠಿಕ ಭಕ್ಷö್ಯ ಭೋಜನವನ್ನು ಉಣಬಡಿಸಿ ಸಾಂಪ್ರದಾಯಿಕ ಆರತಿ ಎತ್ತಿ ಶುಭಹಾರೈಸಿದರು.
     ಈ ಸಂದರ್ಭದಲ್ಲಿ ಸಿಡಿಪಿಓ ಶಶಿರೇಖಾ, ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ವಿಶುಕುಮಾರ್, ಷಣ್ಮುಖ, ಚಂದ್ರಶೇಖರ, ಶೇಖರಪ್ಪ, ಮುಖಂಡರಾದ ಗುರುರಾಜಗೌಡ, ಆರೋಗ್ಯ ಇಲಾಖೆಯ ಗಾಯಿತ್ರಿ, ರಾಘವೇಂದ್ರ, ಅಂಗನವಾಡಿ ಕಾರ್ಯಕರ್ತರಾದ ಗಾಯಿತ್ರಿ, ಮಂಜಮ್ಮ ಮುಖಂಡರಾದ ಸುಧಾಕರ್ ಶೆಟ್ಟಿ, ಸತೀಶ್ ಭಟ್  ಇನ್ನಿತರರಿದ್ದರು.
ಕೆಂಚನಾಲ ಗ್ರಾಪಂ ಮಟ್ಟದ ಪೋಷಣಾ ಅಭಿಯಾನ : ಗರ್ಭಿಣಿಯರು ಧನಾತ್ಮಕವಾಗಿ ಆಲೋಚಿಸಲಿ : ಉಬೇದುಲ್ಲಾ ಷರೀಫ್
ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ತೊಳೆಮದ್ಲು ಗ್ರಾಮದಲ್ಲಿ  ಗ್ರಾಮ ಪಂಚಾಯತಿ ಕೆಂಚನಾಲ ಮತ್ತು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ ಗರ್ಭೀಣಿ ಮತ್ತು ಬಾಣಂತಿಯರಿಗಾಗಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ  ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಗರ್ಭಿಣಿ ಹಾಗೂ ಬಾಣಂತಿಯರಿಗೆ ಸರ್ಕಾರದಿಂದ ಈ ಯೋಜನೆ ಅನುಷ್ಠಾನಗೊಳಿಸಿರುವುದು ಬಹಳ ಉಪಕಾರಿಯಾಗಿದೆ ಈ ಯೋಜನೆಯನ್ನು ಬಳಸಿಕೊಂಡು ಮನೆಯಲ್ಲಿಯೇ ಪೌಷ್ಟಿಕಯುಕ್ತ ಆಹಾರವನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಮುಂದೆ ಜನನವಾಗುವ ಮಗುವಿನ ಆರೋಗ್ಯವನ್ನು ಸದೃಢಗೊಳಿಸುವುದು ಅವಶ್ಯಕವಾಗಿದೆ ಎಂದರು.
ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು. ಶಾಂತತೆಯಿಂದ ಧ್ಯಾನ, ಶ್ಲೋಕಗಳನ್ನು ಹೇಳಿಕೊಂಡಲ್ಲಿ ಜನಿಸುವ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ತಾಯಿಯ ಮನಸ್ಸು ಚಿಂತೆ, ದುಗುಡ, ದುಃಖ, ಹಿಂಸೆಯಿಂದ ಕೂಡಿದ್ದರೆ ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿರುವಾಗ ತಾಯಂದಿರ ವಿಚಾರಧಾರೆ ಉತ್ತಮವಾಗಿರಬೇಕು ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷರಾದ ಪುಟ್ಟಮ್ಮ ,ಸದಸ್ಯರಾದ ಮಹಮ್ಮದ್ ಷರೀಫ್,ಕೃಷ್ಣೋಜಿರಾವ್ , ಪರಮೇಶ್ , ಹೂವಮ್ಮ , ಗೌರಮ್ಮ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗರ್ಭಿಣಿಯರು ಹಾಗೂ ಬಾಣಂತಿಯರು ಇದ್ದರು.
 
                         
                         
                         
                         
                         
                         
                         
                         
                         
                        


