ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ :

ರಿಪ್ಪನ್‌ಪೇಟೆ: ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ದ 55ನೇ ವರ್ಷದ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರಾಗಿ ವೈ.ಜೆ.ಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದಾದಿಕಾರಿಗಳ ವಿವರ :

ನಾಗರಾಜ ಪವಾರ್, ರಾಜೇಶ್ ಎಲ್.ಕೆ, ಸಂದೀಪ್‌ಶೆಟ್ಟಿ, ರವಿಚಂದ್ರ, ಹೆಚ್.ಆರ್.ಆಶೋಕ್, (ಉಪಾಧ್ಯಕ್ಷ), ತೀರ್ಥಶ್ ಅಡಿಕಟ್ಟು (ಕಾರ್ಯಾಧ್ಯಕ್ಷರು), ಶ್ರೀಧರ್, ಲಕ್ಷ್ಮಣ ಬಳ್ಳಾರಿ (ಸಹ ಕಾರ್ಯದರ್ಶಿ), ಶ್ರೀನಿವಾಸ ಆಚಾರ್ ಗ್ಯಾರೇಜ್, ಮಂಜುನಾಥ ಅಚಾರ್, ರಾಘವೇಂದ್ರ ಎಸ್.ಎಂ, ರಾಘವೇಂದ್ರ ಎಂ,(ಸಂಘಟನಾ ಕಾರ್ಯದರ್ಶಿ), ಸುಜೇಯ, ಸಹಾಸ್, ಸತೀಶ್ ಎಂ,(ಸಂಚಾಲಕರುಗಳು), ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಆರ್.ರಾಘವೇಂದ್ರ, ಎನ್.ಸತೀಶ್, ಸುಧೀಂದ್ರ ಪೂಜಾರಿ, ವಾಸುಶೆಟ್ಟಿ, ಆರ್.ಈ.ಭಾಸ್ಕರ್, ಕೆ.ಆರ್.ರವೀಂದ್ರ, ಈಶ್ವರ ಮಳಕೊಪ್ಪ, ನಾಗರಾಜ, ಎಸ್.ದಾನಪ್ಪ, ಮುರುಳಿ, ಕೆ.ವಿ.ಲಿಂಗಪ್ಪ ಕಗ್ಗಲಿ, ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹೆಚ್.ಎನ್.ಉಮೇಶ್, ಭಾಸ್ಕರ್ ಆಚಾರ್, ಡಿ.ಈ.ರವಿಭೂಷಣ, ರವಿಶೆಟ್ಟಿ, ಸತೀಶ್ ಶೆಟ್ಟಿ, ಲಕ್ಷ್ಮಣ, ವೀರಭದ್ರಪ್ಪ, ಆರ್.ಎಂ.ನವೀನ, ಸತೀಶ್ ಗವಟೂರು, ಜಿ.ಆರ್.ಮಂಜುನಾಥ, ಎ.ನವೀನ್, ದೇವರಾಜ್ ಪವಾರ್, ಜಿ.ರಂಜನ್, ದೇವರಾಜ್, ಆಯ್ಕೆಯಾಗಿದ್ದಾರೆ.

ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾದ ಗಣೇಶೋತ್ಸವವನ್ನು ಎರಡು ವರ್ಷ ಸರಳವಾಗಿ ಆಚರಿಸಲಾಗಿತ್ತು.

ಈ ಬಾರಿ 11 ದಿನಗಳ ಕಾಲ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಟಾಪನೆಯನ್ನು ಭಕ್ತಿ ಹಾಗೂ ಸಡಗರ,ಸಂಭ್ರಮದಿಂದ ಆಚರಿಸಲಾಗುವುದು ಎಂದು ನೂತನ ಅಧ್ಯಕ್ಷ ವೈ ಜೆ ಕೃಷ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *