ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದ ಬಳಿಯ ಹೊಸನಗರ-ತೀರ್ಥಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸಾರ್ವಜನಿಕ ಬಸ್‌ಪ್ರಯಾಣಿಕರ ತಂಗುದಾಣಕ್ಕೆ ಹೋಗಿ ಬರುವ ಜಾಗದಲ್ಲಿ ಅವೈಜ್ಞಾನಿಕ ಕಬ್ಬಿಣದ ರಾಡುಗಳ ಮೂಲಕ ತಡೆಗೋಡೆ ಮಾಡಿರುವುದರಿಂದ ಮಹಿಳೆಯರು, ವೃದ್ದರು ಮತ್ತು ಅನಾರೋಗ್ಯ ಪೀಡಿತರು ಬಿದ್ದು ಕಾಲು ಕೈ ಮುರಿದುಕೊಂಡ ಗಾಯಗಳಾದ ಘಟನೆಗಳು ನಡೆದಿರುತ್ತವೆ ಈ ಬಗ್ಗೆ ಸಾಕಷ್ಟು ಭಾರಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾದರೂ ಕೂಡಾ ಅದನ್ನು ತೆರವುಗೊಳಿಸದೇ ನಿರ್ಲಕ್ಷ ವಹಿಸಿದ್ದಾರೆಂದು ಆರೋಪಿಸಿ ಬರುವ ಜುಲೈ 25 ರಂದು ಸೋಮವಾರ ಪಕ್ಷಾತೀತವಾಗಿ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಮುಖಂಡ ಆರ್.ಎ.ಚಾಬುಸಾಬ್ ಮತ್ತು ಜನಪರ ಜಾಗೃತಿ ಹೋರಾಟ ಸಮಿತಿ ಅಧ್ಯಕ್ಷ ಟಿ.ಆರ್.ಕೃಷ್ಣಪ್ಪ ತಿಳಿಸಿದರು.
ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಸ್‌ತಂಗುದಾಣದ ಬಳಿ ಅವೈಜ್ಞಾನಿಕವಾಗಿ ಕಬ್ಬಿಣದ ರಾಡು ಅಳವಡಿಸಿರುವುದರಿಂದಾಗಿ ಸಾಕಷ್ಟು ಪ್ರಯಾಣಿಕರು ಬಸ್‌ನಿಂದ ಇಳಿಯುವಾಗ ಬಿದ್ದಿರುತ್ತಾರೆ ಹಲವರಿಗೆ ಗಾಯಗಳಾಗಿರುತ್ತದೆ ಮತ್ತು ಅಟೋ ನಿಲ್ದಾಣದಿಂದಾಗಿ ತಂಗುದಾಣಕ್ಕೆ ಹೋಗಲು ಜಾಗವೇ ಇಲ್ಲದ ಸ್ಥಿತಿ ಎದುರಾಗಿದೆ.ಮತ್ತು ಹಲವರು ಮಧ್ಯಸೇವಿಸಿ ಬಸ್ ತಂಗುದಾಣದಲ್ಲಿ ಅಡ್ಡಾದಿಡ್ಡಿಯಾಗಿ ಮಲಗಿರುತ್ತಾರೆ ಹಾಗೂ ಮಲ ಮೂತ್ರ ವಿಸರ್ಜನೆ ಯೊಂದಿಗೆ ಎಲ್ಲದಂರಲ್ಲಿ ಗುಟ್ಕಾ ಹಾಕಿ ಉಗಿದು ದುರ್ನಾತ ಬೀರುವಂತಾಗಿದ್ದು ಪ್ರಯಾಣಿಕರು ಬಸ್ ತಂಗುದಾಣಕ್ಕೆ ಹೋಗಲು ವಾಕರಿಸುವಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಭಷ್ಟಾಚಾರ ವಾಸನೆ ಕೇಳಿಬರುತ್ತಿದ್ದು ಈ ಬಗ್ಗೆ ದಾಖಲೆಗಳ ಸಹಿತ ಪ್ರತಿಭಟನೆ ದಿನ ಬಹಿರಂಗ ಪಡಿಸುವುದಾಗಿ ವಿವರಿಸಿದರು.
ಕಾಂಗ್ರೇಸ್ ,ರೈತಸಂಘ,ಜೆಡಿಎಸ್.ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಎಲ್ಲ ಪಕ್ಷದವರು ಬೆಂಬಲದ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಜಿ.ಎಸ್.ವರದರಾಜ್ ಹಾಜರಿದ್ದರು.