ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣ ವರದಿಯನ್ನು ಸರಕಾರ ತಿರಸ್ಕರಿಸಿಲಿ : ಬಿ ಸ್ವಾಮಿರಾವ್

ರಿಪ್ಪನ್‌ಪೇಟೆ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಪಠ್ಯಪುಸ್ತಕಗಳ ಪರಿಷ್ಕರಣ ವರದಿಯನ್ನು  ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ಹೇಳಿದರು.

ಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ  ಜಗಜ್ಯೋತಿ ಬಸವಣ್ಣ ಮತ್ತು ರಾಷ್ಟ್ರಕವಿ ಕುವೆಂಪು ಹಾಗೂ ನಾರಾಯಣಗುರುಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಅವಮಾನಿಸಿರುವ ಸಂಗತಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು .

ರಾಷ್ಟ್ರಕವಿ ಕುವೆಂಪು ಮತ್ತು ಬಸವಣ್ಣ, ನಾರಾಯಣ ಗುರುಗಳ ಬಗ್ಗೆ ಇತಿಹಾಸವನ್ನರಿಯದ ರೋಹಿತ್ ಚಕ್ರತೀರ್ಥ ಮತ್ತು ತಂಡ ಸಮಾಜದಲ್ಲಿನ  ಸಾಮರಸ್ಯವನ್ನು  ಹಾಳುಮಾಡಲು ನಿಂತಂತಿದೆ .ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಹುಚ್ಚಾಟ ಮಾಡುವಂತವರನ್ನು ಆಯ್ಕೆ ಮಾಡಿರುವ ಸರ್ಕಾರದ ಕ್ರಮ ಸರಿಯಾದುದಲ್ಲ ಎಂದ ಅವರು, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅನುಭವಿ ವಿದ್ವಾಂಸ ಜ್ಞಾನಪೀಠ ಪ್ರಶಸ್ತಿಗೆ ಅರ್ಹರಿರುವ ಹಿರಿಯ ಸಾಹಿತಿ ಲೇಖಕ ಬರಗೂರು ರಾಮಚಂದ್ರಪ್ಪನವರನ್ನು ಮುಂದುವರಿಸುವಂತೆ ಒತ್ತಾಯಿಸಿದರು.

 ಪುನೀತ್ ರಾಜಕುಮಾರ್ ಹೆಸರು ಸೇರ್ಪಡೆಗೊಳ್ಳಲಿ :

ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಪಠ್ಯಪುಸ್ತಕದಲ್ಲಿ ಇತ್ತೀಚೆಗೆ ಅಗಲಿದ ಕಿರಿಯ ವಯಸ್ಸಿನ ಹಿರಿಯ ವ್ಯಕ್ತಿತ್ವದ ಯುಗಪುರುಷ ಪುನೀತ್ ರಾಜ್‍ಕುಮಾರ್ ಹೆಸರು ಸೇರ್ಪಡೆ ಮಾಡಿ ಅವರ ಆದರ್ಶ ತತ್ವಗಳು ಮುಂದಿನ ಯುವಪೀಳಿಗಗೆ ಮಾರ್ಗದರ್ಶನವಾಗಲಿ ಎಂದರು.

ಪತ್ರೀಕಾ ಗೋಷ್ಠಿಯ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *