ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ  ಕಳೆದ ಕೆಲವು ದಶಕಗಳಿಂದ ರಿಂಗ್ ಬಾವಿ ನಿರ್ಮಾಣದಿಂದ ಖ್ಯಾತರಾಗಿದ್ದ ರಿಂಗ್ ಸುಧಾಕರ್ ರವರು ಇಂದು ಮಧ್ಯಾಹ್ನ ಕೇರಳದ ಕೊಲ್ಲಂ ಜಿಲ್ಲೆಯ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೇರಳ ಮೂಲದ ರಿಂಗ್ ಸುಧಾಕರ್ ಅವರು ಮೂರು ದಶಕಗಳಿಂದ ರಿಪ್ಪನ್  ಪೇಟೆಯಲ್ಲಿ ನೆಲೆ ನಿಂತು ರಿಂಗ್ ಬಾವಿ ನಿರ್ಮಾಣ ಮಾಡುವುದರ ಮೂಲಕ ರಿಂಗ್ ಸುಧಾಕರ ಎಂದು ಜನಪ್ರಿಯರಾಗಿದ್ದರು.
ವಿವಿಧ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ವಿವಿಧ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ಸಹ ನೀಡುತ್ತಿದ್ದರು.
ಇವರ ನಿಧನಕ್ಕೆ ರಿಪ್ಪನಪೇಟೆ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ
		 
                         
                         
                         
                         
                         
                         
                         
                         
                         
                        